ಬಿಮ್ಸ್ ಹಿರಿಮೆಗೆ ಮತ್ತೊಂದು ಸಾಧನೆಯ ಸೇರ್ಪಡೆ..

ಬಿಮ್ಸ್ ಹಿರಿಮೆಗೆ ಮತ್ತೊಂದು ಸಾಧನೆಯ ಸೇರ್ಪಡೆ..

ಗುಣಮಟ್ಟದ ಸೇವೆಗಾಗಿ ಇಂಡಿಯಾ ಟುಡೇ ಸಮೀಕ್ಷೆಯಲ್ಲಿ ದೇಶದಲ್ಲಿ 32ನೇ ರ್ಯಾಂಕ..

ಬೆಳಗಾವಿ : ಜುಲೈ 05 : ಜಿಲ್ಲೆಯ ಪ್ರತಿಷ್ಠಿತ ಸರ್ಕಾರಿ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯು ತನ್ನ ಗುಣಮಟ್ಟದ ಶಿಕ್ಷಣ, ಸೇವೆಯ ಮೂಲಕ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ. ಪ್ರತಿ ವರ್ಷವೂ, ಪ್ರತಿ ಹಂತದಲ್ಲೂ, ಹಲವು ರೀತಿಯ ಜನಪರ ಸೇವೆ ಒದಗಿಸುತ್ತಿರುವ ಸಂಸ್ಥೆಯು ಇದೀಗ ಮತ್ತೊಂದು ಹಿರಿಮೆಗೆ ಪಾತ್ರವಾಗಿದೆ.

ತನ್ನ ಗುಣಮಟ್ಟದ ಸೇವೆಯ ಮೂಲಕ ಹೆಸರುವಾಸಿಯಾಗಿರುವ ಬಿಮ್ಸ್‌ ಸಂಸ್ತೆಯು ಇತ್ತೀಚೆಗೆ ಇಂಡಿಯಾ ಟುಡೇ ಸಂಸ್ಥೆಯು ನಡೆಸಿದ ʼಬೆಸ್ಟ್‌ ಮೆಡಿಕಲ್‌ ಕಾಲೇಜ್‌ ಆಫ್‌ ಇಂಡಿಯಾʼ ಸಮೀಕ್ಷೆಯಲ್ಲಿ ದೇಶದ 884 ವೈದ್ಯಕೀಯ ಕಾಲೇಜುಗಳ ಪೈಕಿ 32ನೇ ರ್ಯಾಂಕ್‌ ಪಡೆದುಕೊಂಡಿದೆ. ಕಳೆದ ವರ್ಷವೂ 33 ನೇ ರ್ಯಾಂಕ್‌ ಪಡೆದುಕೊಂಡಿದ್ದ ಬಿಮ್ಸ್‌ ಈ ವರ್ಷ ಒಂದು ಸ್ಥಾನವನ್ನು ಮೇಲೇರಿ ಗುಣಮಟ್ಟವನ್ನು ಹೆಚ್ಚಿಸಿಕೊಂಡು ಸಂಸ್ಥೆಯ ಹೆಗ್ಗಳಿಕೆಯನ್ನು ಇಮ್ಮಡಿಗೊಳಿಸಿದೆ.

ಸಂಸ್ಥೆಯ ಅಗತ್ಯ ಸೌಲಭ್ಯ, ಸೇವಾಯೋಗ್ಯ ಸ್ಥಳ, ವೈಜ್ಞಾನಿಕ ಪ್ರವೇಶಾತಿ, ಉದ್ಯೋಗ ಪೂರಕ ಕೋರ್ಸ್‌, ಶೈಕ್ಷಣಿಕ ಗುಣಮಟ್ಟ, ಕೌಶಲ್ಯಪೂರ್ಣ ತರಬೇತಿ, ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನ, ನಾಯಕತ್ವ ಗುಣ ಸೇರಿದಂತೆ ಇತರ ಹಲವು ಮಾನದಂಡಗಳನ್ನು ಆಧಾರವಾಗಿಟ್ಟುಕೊಂಡು ಇಂಡಿಯಾ ಟುಡೇ ಸಂಸ್ಥೇಯು ನಡೆಸಿದ ಸಮೀಕ್ಷೆಯಲ್ಲಿ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯು 32ನೇ ರ್ಯಾಂಕನ್ನು ಗಿಟ್ಟಿಸಿಕೊಂಡಿರುತ್ತದೆ.

ಬೆಳಗಾವಿ ನಗರದ ಡಾ.ಬಿ.ಆರ್‌ ಅಂಬೇಢ್ಕರ್‌ ರಸ್ತೆ ಬದಿಯಿರುವ ಬಿಮ್ಸ್‌ ಸಂಸ್ಥೆಯ 2005ರಲ್ಲಿ ಸುಮಾರು 33 ಎಕರೆ ವಿಸ್ತೀರ್ಣದ ವಿಶಾಲ ಜಾಗದಲ್ಲಿ ನಿರ್ಮಾಣಗೊಂಡಿರುತ್ತದೆ, ಉತ್ತಮ ಶೈಕ್ಷಣಿಕ ಸೇವೆಗೆ ಹೆಸರಾದ ಸಂಸ್ಥೆಯಲ್ಲಿ 2010ರಲ್ಲಿ ಮೊದಲ ಎಮ್‌ಬಿಬಿಎಸ್‌ ಬ್ಯಾಚ್‌ ತೇರ್ಗಡೆಹೊಂದಿತು. ಇಲ್ಲಿಯವರೆಗೆ 1500ಕ್ಕೂ ಅಧಿಕ ಎಮ್‌ಬಿಬಿಎಸ್‌ ಮತ್ತು ನೂರಾರು ಸ್ನಾತಕೋತ್ತರ ವಿದ್ಯಾರ್ಥಿಗಳು ಸಂಸ್ಥೆಯಿಂದ ತೇರ್ಗಡೆಹೊಂದಿ ವೈದ್ಯಕೀಯ ಸೇವೆಯಲ್ಲಿ ನಿರತರಾಗಿದ್ದಾರೆ. ಎಮ್‌ಬಿಬಿಎಸ್‌, ಸ್ನಾತೋಕೋತರ ( ಎಂಡಿ, ಎಂಎಸ್) ಜಿಎನ್‌ಎಮ್‌, ಬಿಎಸ್‌ಸಿ, ಪ್ಯಾರಾಮೆಡಿಕಲ್‌, ನರ್ಸಿಂಗ್‌ ಸೇರಿದಂತೆ ವೈದ್ಯಕೀಯ ಸೇವಾ ಕ್ಷೇತ್ರದ ಹಲವು ಕೋರ್ಸ್‌ಗಳನ್ನು ಸಂಸ್ಥೆಯು ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನುಷ್ಠಾನಗೊಳಿಸಿದೆ.

ಬೆಳಗಾವಿ ಜಿಲ್ಲೆ ಸೇರಿದಂತೆ ಹೊರ ಜಿಲ್ಲೆಗಳ, ಹೊರ ರಾಜ್ಯದ ರೋಗಿಗಳು ಬಿಮ್ಸ್‌ನಲ್ಲಿ ಗುಣಮಟ್ಟದ ಸೇವೆ ಪಡೆದುಕೊಂಡು ಗುಣಮಖರಾಗುತ್ತಿದ್ದಾರೆ. ಔಷಧಿ, ಶಸ್ತ್ರಚಿಕಿತ್ಸೆ, ಮಕ್ಕಳ ಚಿಕಿತ್ಸೆ, ಹೆರಿಗೆ, ಸ್ತ್ರೀರೋಗ ಶಾಸ್ತ್ರ, ಕಿವಿ ಮತ್ತು ಗಂಟಲು, ಚರ್ಮ ರೋಗಗಳು, ಕಣ್ಣಿನ ಚಿಕಿತ್ಸೆ, ಮನೋವೈದ್ಯಶಾಸ್ತ್ರ ಮತ್ತು ದಂತವೈದ್ಯಶಾಸ್ತ್ರದಲ್ಲಿ ವಿಶೇಷ ಸೇವೆಗಳನ್ನು ಹೊಂದಿರುವ ಬಿಮ್ಸ್‌ ಸಂಸ್ಥೆಯು ಶ್ರೀಸಾಮಾನ್ಯರಿಗಾಗಿ ದಿನದ 24 ಗಂಟೆಯೂ ತೆರೆದಿರುತ್ತದೆ. ದಿನವೂ 1000 ರಿಂದ 1600 ಅಧಿಕ ಹೊರ ರೋಗಿಗಳು ಮತ್ತು 100 ರಿಂದ 120 ಒಳ ರೋಗಿಗಳಾಗಿ ಬಿಮ್ಸ್‌ನಲ್ಲಿ ವೈದ್ಯಕೀಯ ಸೇವೆ ಪಡೆದುಕೊಳ್ಳುತ್ತಿದ್ದಾರೆ. ಪರಿಣತ ವೈದ್ಯರು, ನರ್ಸ್‌ಗಳು, ಸಹಾಯಕರು, ಸೂಕ್ತ ಪರಿಕರಗಳುನ್ನು ಹೊಂದಿರುವ ಸಂಸ್ಥೆ ರೋಗಿಗಳ ಆರೋಗ್ಯ ಸುಧಾರಣೆಯಲ್ಲಿ ಪ್ರಧಾನ ಪಾತ್ರ ನಿರ್ವಹಿಸುತ್ತಿದೆ.

ಬಿಮ್ಸ್‌ ಸಂಸ್ಥೆಯು ಎಲ್ಲ ರೀತಿಯಲ್ಲಿಯೂ ಜನರಿಗಾಗಿ ಗುಣಮಟ್ಟದ ಸೇವೆ ಒದಗಿಸುತ್ತಿರುವ ಹಿಂದೆ ಸನ್ಮಾನ್ಯ ವೈದ್ಯಕೀಯ ಶಿಕ್ಷಣ ಸಚಿವರು, ಸನ್ಮಾನ್ಯ ವೈದ್ಯಕೀಯ ಪ್ರಧಾನ ಕಾರ್ಯದರ್ಶಿಗಳು, ಸನ್ಮಾನ್ಯ ವೈದ್ಯಕೀಯ ಶಿಕ್ಷಣ ನಿರ್ದೇಶಕರು ನಿರಂತರ ‍ಶ್ರಮಿಸುತ್ತಿದ್ದಾರೆ. ಜೊತೆಗೆ ಬೋಧಕ, ಬೋಧಕೇತರ ಸಿಬ್ಬಂದಿ, ನುರಿತ ವೈದ್ಯರು, ಸುಶ್ರೂಷಧಿಕಾರಿಗಳು , ಪ್ರಯೋಗಾಲಯ ತಂತ್ರಜ್ಞರು, ಸೇರಿದಂತೆ ಹಲವರು ಸಂಸ್ಥೆಯ ಬೆನ್ನಿಗೆ ನಿಂತಿರುವುದರಿಂದ ಬಿಮ್ಸ್‌ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ. ಬಿಮ್ಸ್‌ ನ ನಿರ್ದೇಶಕ ಡಾ.ಅಶೋಕ ಶೆಟ್ಟಿ ಅವರು ಸಂತಸ ವ್ಯಕ್ತಪಡಿಸಿ, ಎಲ್ಲರಿಗೂ ಅಭಿನಂದನೆಗಳನ್ನು ತಿಳಿಸಿದ್ದಾರೆ.

ವರದಿ ವಿಜಯಲಕ್ಸ್ಮಿ ದೊಡ್ಡಮನಿ..

Leave a Reply

Your email address will not be published. Required fields are marked *