15 ಲಕ್ಷ ಸಬ್ಸಿಡಿ ಸಿಗುವ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಿ..
ತಮ್ಮ ಕೌಶಲ್ಯಗಳಿಂದ ಯಶಸ್ವಿ ಉದ್ದಿಮೆಗಳಾಗಿರಿ..
ಸಚಿವ ಸತೀಶ್ ಜಾರಕಿಹೊಳಿ..
ಬೆಳಗಾವಿ : ಹಳೆಯ ಪದ್ಧತಿಯನ್ನು ಮತ್ತೆ ಮರಳಿ ತರುವುದಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಂದಾಗಿ ಸಬ್ಸಿಡಿ ರೂಪದಲ್ಲಿ ಸುಮಾರು 15 ಲಕ್ಷ ಸಹಾಯಧನ ನೀಡಲಾಗುತ್ತಿದೆ, ಜಿಲ್ಲೆಯಲ್ಲಿ 1500 ಜನಕ್ಕೆ ಈ ಸೌಲಭ್ಯ ಸಿಗುತ್ತಿದೆ, ತಾವು ತಮ್ಮ ಕೌಶಲ್ಯದಿಂದ ಮನೆಯಲ್ಲೇ ಉತ್ತಮವಾದ ವಸ್ತುಗಳನ್ನು ಉತ್ಪಾದಿಸುವ ಉದ್ದಿಮೆ ಸ್ಥಾಪಿಸಿ ಯಶಸ್ವಿಯಾಗಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾಪಂಚಾಯತ, ಕೃಷಿ ಇಲಾಖೆ ಬೆಳಗಾವಿ ಮತ್ತು ಕೆಪೇಕ್ ಲಿಮಿಟೆಡ್ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ “ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಉದ್ದಿಮೆಗಳ ನಿಯಮಬದ್ದಗೊಳಿಸುವಿಕೆ ಯೋಜನೆಯ” ಜಿಲ್ಲಾ ಮಟ್ಟದ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಈ ಮೇಲಿನಂತೆ ಹೇಳಿದ್ದಾರೆ.

ಈ ಯೋಜನೆಯಲ್ಲಿ ಹಿಟ್ಟಿನ ಗಿರಣಿ, ಚಪಾತಿ, ಬೆಲ್ಲ ತಯಾರಿಕೆ , ಚಾಕಲೇಟ್, ರವಾ, ಸೆಂಡಿಗೆ, ಚಟ್ನಿ ಪುಡಿಗಳು, ಅಡುಗೆ ಎಣ್ಣೆ ಇಂತಹ ಪದಾರ್ಥಗಳನ್ನು ಉತ್ಪಾದನೆ ಮಾಡಬಹುದು ಈ ಅವಕಾಶಗಳು ನಿಮ್ಮ ಮನೆ ಬಾಗಿಲಿಗೆ ಬಂದಿರುವಾಗ ಅದರ ಸದುಪಯೋಗ ಪಡೆಯಿರಿ ಎಂದರು.
ದೇಶದ ಈಗಿರುವ ಎಲ್ಲಾ ದೊಡ್ಡ ಉದ್ದಿಮೆದಾರರು ಮೊದಲು ಸಣ್ಣ ಪ್ರಮಾಣದಲ್ಲೇ ತಮ್ಮ ಉದ್ದಿಮೆ ಪ್ರಾರಂಭ ಮಾಡಿದ್ದರು, ತಾವು ಕೂಡ ಸಣ್ಣ ಪ್ರಮಾಣದಲ್ಲಿ ಪ್ರಾರಂಭಿಸಿ ಮುಂದೆ ಯಶಸ್ವಿಯಾಗಿ ಬೆಳೆಯಬಹುದು, ತಾವು ಗುಣಮಟ್ಟದ ಪದಾರ್ಥಗಳನ್ನು ನೀಡಿದರೆ ಗ್ರಾಹಕರೇ ತಮ್ಮ ಬಳಿ ಬರುತ್ತಾರೆ ಎಂದರು.
ಇಂತಹ ಉತ್ತಮ ಅವಕಾಶ ಜಿಲ್ಲೆಗೆ ಬಂದಿದ್ದು ಸಂತಸ, ಇನ್ನು ಮುಂದೆ ತಾಲೂಕು ಮಟ್ಟಕ್ಕೂ ವಿಸ್ತರಿಸಲಾಗುತ್ತದೆ, ಶೇ 60ರಷ್ಟು ರಾಜ್ಯ ಹಾಗೂ ಶೇ 40ರಷ್ಟು ಕೇಂದ್ರ ಸರ್ಕಾರ ಸಹಾಯಧನ ನೀಡುತ್ತಿದ್ದು, ನಾನು ಕಂಡಂತೆ ಉತ್ತಮವಾದ ಗುಣಮಟ್ಟದ ಪದಾರ್ಥಗಳನ್ನು ಈ ಗೃಹ ಉದ್ದಿಮೆದಾರರು ಉತ್ಪಾದನೆ ಮಾಡುತ್ತಾರೆ, ಕಾರ್ಯಕ್ರಮದಲ್ಲಿ ಭಾಗಿಯಾಗಿ ಮುಂದೆ ಈ ಉದ್ದಿಮೆಯಲ್ಲಿ ತೊಡಗಿಕೊಳ್ಳುವವರಿಗೆ ಯಶಸ್ವಿ ಆಗಲಿ ಎಂದು ಆಶಿಸಿದರು..
ಈ ಕಾರ್ಯಕ್ರಮದ ಲಾಭ ಎಲ್ಲರಿಗೂ ಆಗಬೇಕು ಎರಡು ಸರ್ಕಾರಗಳು ಒಂದಾಗಿ ಮಾಡುತ್ತಿರುವ ಈ ಯೋಜನೆಯ ಜಾಗೃತ ಕಾರ್ಯಕ್ರಮ ಇಂದು ನಡೀತಾ ಇರೋದು ಸಂತಸದ ಸಂಗತಿ.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಕೆಪೇಕ್ ಸಂಸ್ಥೆಯ ಎಂಡಿ ಶಿವಪ್ರಕಾಶ್ ಅವರು ಮಾತನಾಡಿ, ರಾಜ್ಯದಲ್ಲೇ ಮೊದಲ ಜಿಲ್ಲೆಯಾಗಿ ಬೆಳಗಾವಿಯನ್ನು ಆಯ್ಕೆ ಮಾಡಿಕೊಂಡು ಇಲ್ಲಿ ಈ ಯೋಜನೆಯ ಬಗ್ಗೆ ಜಾಗೃತಿ ಕಾರ್ಯಕ್ರಮ ಮಾಡುತ್ತಿದ್ದೇವೆ, ಯೋಜನೆ ಸಾರ್ವಜನಿಕರಿಗೆ ತುಂಬಾ ಸಹಾರಿಯಾಗಿದೆ, ಈ ಯೋಜನೆಯಲ್ಲಿ 206 ಕೋಟಿ ಸಾರ್ವಜನಿಕರ ಕೈಗೆ ಸೇರಲಿದೆ ಎಂದರು.
ವರದಿ ಪ್ರಕಾಶ್ ಬಸಪ್ಪ ಕುರಗುಂದ..