2028ರ ವರೆಗೆ ನಾನೇ ಸಿಎಂ ಎಂದ ಸಿದ್ದರಾಮಯ್ಯ..
ಸಿಎಂ ಬದಲಾವಣೆ ವಿಚಾರಕ್ಕೆ ತೆರೆಯೆಳೆದ ಟಗರು..
ಸುಪ್ರೀಂ ಕೋರ್ಟ್ ರೀತಿಯಲ್ಲಿ ಸಿದ್ದರಾಮಯ್ಯ ಹೇಳಿದ್ದಾರೆ ಏನು ಮಾಡೋಕಾಗೋಲ್ಲ..
ಸಚಿವ ಸತೀಶ್ ಜಾರಕಿಹೊಳಿ..
ಬೆಳಗಾವಿ : ಮೊನ್ನೆ ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಖಾಸಗಿ ಸುದ್ದಿ ವಾಹಿನಿಯೊಂದಿಗೆ ಮಾತನಾಡುತ್ತಾ ಪಕ್ಷದ ವರಿಷ್ಠರ ಜೊತೆ ಅಧಿಕಾರ ಹಂಚಿಕೆಯ ಬಗ್ಗೆ ಮಾತುಕತೆ ಆಗಿಲ್ಲ, ಐದು ವರ್ಷಪೂರ್ತಿ ನಾನೇ ಸಿಎಂ ಎನ್ನುವ ಮೂಲಕ ತಮ್ಮ ವಿರೋಧಿ ಕ್ಯಾಂಪಿಗೆ ಭರ್ಜರಿಯಾಗಿ ಬಿಸಿ ಮುಟ್ಟಿಸಿದ್ದಾರೆ.
ರಾಜ್ಯದ ಸಿಎಂ ಬದಲಾವಣೆಯ ವಿಷಯವನ್ನು ಯಾರು ಮಾತನಾಡಬಾರದು ಎಂದು ಪಕ್ಷದ ವರಿಷ್ಠರು ಎಲ್ಲರಿಗೂ ತಾಕೀತು ಮಾಡಿದ್ದಾರೆ, ಇನ್ನು ಡಿಕೆಸಿ ಮುಖ್ಯಮಂತ್ರಿ ಬದಲಾವಣೆ ಹಾಗೂ ಅಧಿಕಾರದ ಹಂಚಿಕೆ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ, ಇನ್ನು ಐದು ವರ್ಷ ನಾನೇ ಮುಖ್ಯಮಂತ್ರಿ ಎಂದು ಹೇಳುವ ಮೂಲಕ ಎದುರಾಳಿಗಳ ಏಟಿಗೆ ತಿರುಗೇಟು ನೀಡಿದ್ದಾರೆ.
ದೆಹಲಿಯಲ್ಲಿ ಕುಳಿತು ಸಿಎಂ ಬದಲಾವಣೆ ಇಲ್ಲಾ, ನಾನೇ ಸಿಎಂ ಎಂದು ಹೇಳುವ ಮೂಲಕ ತಮ್ಮ ವಿರುದ್ಧ ಅಭಿಪ್ರಾಯ ಸಂಗ್ರಹಕ್ಕೆ ಬ್ರೇಕ್ ಹಾಕಿ, ಪೂರ್ಣಾವಧಿಗೆ ನಾನೇ ಸಿಎಂ ಆಗಿರುವೆ ಜೊತೆಗೆ ಶಾಸಕರ ಬಲವೂ ನನಗೆ ಹೆಚ್ಚಿದೆ ಎಂಬ ಸಂದೇಶ ಸಾರಿದಂತೆ ಮಾತನಾಡಿದ್ದಾರೆ. ಇದು ಕಾಂಗ್ರೆಸ್ ಪಕ್ಷದವರಿಗೆ ಅಷ್ಟೇ ಅಲ್ಲದೇ ವಿಪಕ್ಷದವರಿಗೂ ಆಶ್ಚರ್ಯ ಉಂಟು ಮಾಡಿದೆ.

ಬಹುಶಃ ಪಕ್ಷದ ವರಿಷ್ಠರು ನೀಡಿದ ಬಲಿಷ್ಠ ಭರವಸೆಯ ಮೇರೆಗೆ ಸಿಎಂ ಸಿದ್ದರಾಮಯ್ಯ ಅವರು ಇಷ್ಟೊಂದು ಧೈರ್ಯವಾಗಿ ಐದು ವರ್ಷ ನಾನೇ ಸಿಎಂ, ಮುಂದೆಯೂ ನನ್ನದೇ ನಾಯಕತ್ವ ಎಂದು ಹೇಳುತ್ತಿದ್ದು, ತಮ್ಮನ್ನು ಸಿಎಂ ಕುರ್ಚಿಯಿಂದ ಇಳಿಸುವ ಕನಸು ಕಾಣುತ್ತಿದ್ದ ತಮ್ಮ ವಿರೋಧಿಗಳಿಗೆ ಟಗರಿನಂತೆ ಗುಮ್ಮಿದ್ದಾರೆ.
ಸಿಎಂ ಖುರ್ಚಿ ಕಾಲಿ ಇಲ್ಲಾ ಎಂದು ಸ್ವತಃ ಡಿಕೆ ಶಿವಕುಮಾರ್ ಅವರೇ ಹೇಳಿದ್ದಾರೆ, ಅವರವರ ಬೆಂಬಲಿಗರು ಅವರ ಮೇಲಿನ ಅಭಿಮಾನಕ್ಕೆ ಸಿಎಂ ಆಗುವರು ಎಂದು ಹೇಳಿಕೆ ನೀಡಿರಬಹುದು, ಯಾರೋ ಹೇಳಿದ ಮಾತ್ರಕ್ಕೆ ಸಿಎಂ ಆಗೋಕೆ ಆಗೋಲ್ಲ, ಅದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತೆ ಅದಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದು ಸುದ್ದಿವಾಹಿನಿಯೊಂದಿಗೆ ಮಾತನಾಡಿದ್ದಾರೆ.
ಸಿಎಂ ಅವರ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವ ಸತೀಶ ಜಾರಕಿಹೊಳಿ ಅವರು, ನಾನು ಆರು ತಿಂಗಳ ಮೊದಲೇ ಸಿಎಂ ಬದಲಾವಣೆ ಆಗುವದಿಲ್ಲ ಎಂದು ಹೇಳಿದ್ದೆ, ಮುಂದೆ 2028ರ ನಂತರವೂ ಅವರ ನಾಯಕತ್ವವೇ ಇರುತ್ತದೆ, 2028ರ ವರೆಗೆ ಯಾರು ಸಿಎಂ ಕನಸು ಕಾಣುವಂತಿಲ್ಲ, ನಿನ್ನೆ ಸಿದ್ದರಾಮಯ್ಯ ಅವರು ಸುಪ್ರೀಂ ಕೋರ್ಟ ಜಡ್ಜಮೆಂಟ ರೀತಿಯಲ್ಲಿ ಹೇಳಿದ್ದಾರೆ, ಅದಕ್ಕೆ ನಾವು ಕೂಡಾ ಸುಮ್ಮನಿದ್ದೇವೆ ಎಂದಿದ್ದಾರೆ.
ವರದಿ ಪ್ರಕಾಶ್ ಬಸಪ್ಪ ಕುರಗುಂದ..