ನಮ್ಮ ವಿರುದ್ಧ ಕಳೆದ 20 ವರ್ಷಗಳಿಂದ ಇಂತಹ ಸಭೆಗಳು ನಡೆಯುತ್ತಲೇ ಇವೆ..

ನಮ್ಮ ವಿರುದ್ಧ ಕಳೆದ 20 ವರ್ಷಗಳಿಂದ ಇಂತಹ ಸಭೆಗಳು ನಡೆಯುತ್ತಲೇ ಇವೆ..

ಜಿಲ್ಲೆಯ ಸಭೆಗಳಲ್ಲಿ ತೇರಿ ಆಗ್ತಾ ಇದೆ ಆದರೆ ನಾವು ಪ್ರಾಕ್ಟಿಕಲ್ ಪರವಾಗಿದ್ದೇವೆ..

ನಾವು ಆಯುರ್ವೇದಿಕ್ ಡಾಕ್ಟರ್ ಇದ್ದಂತೆ ನಮ್ಮ ಚಿಕಿತ್ಸೆ ಸ್ಲೊ ಇರುತ್ತೆ..

ಸಚಿವ ಸತೀಶ ಜಾರಕಿಹೊಳಿ..

ಬೆಳಗಾವಿ : ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್ ಚುನಾವಣೆಯ ಕಾವು ರಂಗೇರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದ್ದು, ರಾಜಕೀಯ ಲೆಕ್ಕಾಚಾರಗಳಲ್ಲಿ ಜಿಲ್ಲೆಯ ಪ್ರಭಾವಿ ನಾಯಕರು ತಮ್ಮ ತಮ್ಮ ಯೋಜನೆಗಳನುಸಾರವಾಗಿ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದು, ಜಿಲ್ಲೆಯಲ್ಲಿ ಮತ್ತೆ ಪ್ರಭಾವಿ ಕುಟುಂಬಗಳ ಚುನಾವಣಾ ಕಾದಾಟಕ್ಕೆ ವೇದಿಕೆ ಸಿದ್ದವಾದಂತ ಲಕ್ಷಣಗಳು ಕಾಣುತ್ತಿವೆ.

ಕಳೆದೆರಡು ದಿನಗಳ ಹಿಂದೆ ಹುಕ್ಕೇರಿಯಲ್ಲಿ ಜರುಗಿದ ಬಿಜೆಪಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಚಿವರಾದ ರಮೇಶ ಕತ್ತಿ ಅವರು ಮುಂಬರುವ ಚುನಾವಣೆಗಳಿಗೆ ಸಂಬಂಧಿಸಿದಂತೆ ಒಂದು ಮಾತನ್ನು ಹೇಳುತ್ತಾರೆ, ಹುಕ್ಕೇರಿ ವಿಧಾನಸಭಾ ಮತಕ್ಷೇತ್ರಕ್ಕೆ ಹೊರಗಿನವರಿಗೆ ಬರಲಿಕ್ಕೆ ಅವಕಾಶ ಕೊಡುವುದಿಲ್ಲ, ಆ ತಾಕತ್ತು ಯಾರಿಗೂ ಇಲ್ಲಾ, ನಾಲ್ಕು ದಿಕ್ಕಿಗೆ ನಾವು ನಾಲ್ಕು ಶಕ್ತಿಯಂತೆ ನಿಂತು ತಡೆಯುತ್ತೇವೆ ಎಂದಿದ್ದರು.

ಇದೇ ವಿಷಯವಾಗಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಹುಕ್ಕೇರಿಯ ನೀಡಸೋಸಿ ಮಠಕ್ಕೆ ಬೇಟಿ ನೀಡಿದ ಸಂದರ್ಭದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಸಚಿವ ಸತೀಶ ಜಾರಕಿಹೊಳಿ ಅವರು, ಇಪ್ಪತ್ತು ವರ್ಷಗಳಿಂದ ನಮ್ಮ ವಿರುದ್ಧ ಸಭೆಗಳು ನಡೆಯುತ್ತಲೇ ಇವೆ, ಅವರ ಒಗ್ಗಟ್ಟು, ಶಕ್ತಿ ಪ್ರದರ್ಶನ ಅವರು ಮಾಡುತ್ತಾರೆ ನಮ್ಮದು ನಾವು ಮಾಡುತ್ತೇವೆ, ಕೆಇಬಿ ಚುನಾವಣೆ ಬಗ್ಗೆ ಕತ್ತಿ ಅವರ ಹೇಳಿಕೆಗೆ ಸಮಯ ಬಂದಾಗ ಉತ್ತರ ನೀಡುತ್ತೇನೆ, ಈಗ ಅದರ ಅವಶ್ಯಕತೆ ನನಗೆ ಇಲ್ಲಾ ಎಂದಿದ್ದಾರೆ.

ಮುಂಬರುವ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಜಾತಿ ಲೆಕ್ಕಾಚಾರದಲ್ಲಿ ಎಲ್ಲರೂ ಒಂದಾಗಿ ತಮಗೆ ಹಿನ್ನೆಡೆ ತರಲು ಪ್ರಯತ್ನ ನಡೆದಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅವೆಲ್ಲಾ ಸಭೆ ಅಷ್ಟೇ ಅದು ಸಭೆಗೆ ಮಾತ್ರ ಸೀಮಿತ ಆಗಿರುತ್ತದೆ, ತೇರಿ ಬೇರೆ, ಪ್ರಾಕ್ಟಿಕಲ್ ಬೇರೆ, ಜಿಲ್ಲೆಯಲ್ಲಿ ತೇರಿ ಆಗ್ತಾ ಇದೆ, ಪ್ರಾಕ್ಟಿಕಲ್ ಆಗೋಲ್ಲ, ನಾವು ಪ್ರಾಕ್ಟಿಕಲ್ ಪರವಾಗಿ ಇದ್ದೇವೆ ಎಂದಿದ್ದಾರೆ.

ಅವರೆಲ್ಲಾ ಅರ್ಜೆಂಟಲ್ಲಿ ಸಭೆ ಮಾಡುತ್ತಾರೆ, ಮಾತನಾಡುತ್ತಾರೆ, ಆದರೆ ನಮಗೆ ಅರ್ಜೆಂಟ ಇಲ್ಲಾ, ನಾವು ಆಯುರ್ವೇದಿಕ್ ಡಾಕ್ಟರ್ ಇದ್ದಂತೆ, ನಮ್ಮದು ಸ್ಲೋ ಇರುತ್ತದೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ವರದಿ ಪ್ರಕಾಶ್ ಬಸಪ್ಪ ಕುರಗುಂದ.

Leave a Reply

Your email address will not be published. Required fields are marked *