ಕೋರ್ಟ ಆವರದಲ್ಲೇ ಪತ್ನಿ ಮತ್ತು ಅತ್ತೆಯ ಮೇಲೆ ಮಾರಣಾoತಿಕ ಹಲ್ಲೆ..
ಬೆಳಗಾವಿ : ಕೋರ್ಟ್ ಆವರಣದಲ್ಲೇ ಪತ್ನಿ ಹಾಗೂ ಅತ್ತೆ ಮೇಲೆ ಪತಿಯೋರ್ವ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿಯ ನ್ಯಾಯಾಲಯದಲ್ಲಿ ಮಂಗಳವಾರ ನಡೆದಿದೆ.
ಆರೋಪಿ ಪತಿ ಮುತ್ತಪ್ಪ ಗಣಾಚಾರಿ ಎಂಬಾತ ಪತ್ನಿ ಐಶ್ವರ್ಯ ಹಾಗೂ ಅತ್ತೆ ಅನಸೂಯಾ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ವಿಚ್ಛೇದನ ಕೇಸಗಾಗಿ ಕೋರ್ಟಿಗೆ ಹಾಜರಾಗಿದ್ದ ಪತಿ, ಪತ್ನಿ ತಮ್ಮ ಕೌಟುಂಬಿಕ ಕಲಹದ ಹಿನ್ನೆಲೆ ವಿಚ್ಛೇದನಕ್ಕಾಗಿ ಕೋರ್ಟ್ ಮೇಟ್ಟಿಲು ಏರಿದ್ದರು. ಈ ವೇಳೆ ಹಲ್ಲೆ ಮಾಡುತ್ತಿದ್ದಂತೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸವದತ್ತಿ ತಾಲೂಕಿನ ನಿವಾಸಿ ಐಶ್ವರ್ಯ, ಆರೋಪಿ ಬೈಲಹೊಂಗಲ ಪಟ್ಟಣದ ನಿವಾಸಿಯಾಗಿದ್ದಾರೆ. ಕೋರ್ಟ್ ಆವರಣದಲ್ಲೇ ಆರೋಪಿ ಪತಿಯಿಂದ ದುಶಕೃತ್ಯ ತಕ್ಷಣವೇ ಆರೋಪಿಯನ್ನ ವಶಕ್ಕೆ ಪಡೆದ ಸವದತ್ತಿ ಪೊಲೀಸರು. ಗಂಭೀರ ಗಾಯಗೊಂಡ ಪತ್ನಿ ಐಶ್ವರ್ಯ ಹಾಗೂ ಅತ್ತೆ ಅನಸೂಯಾಳನ್ನ ಧಾರವಾಡ ಆಸ್ಪತ್ರೆಗೆ ರವಾನಿಸಲಾಗಿದೆ. ಬೆಳಗಾವಿ ಜಿಲ್ಲೆ ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.