ಸಚಿವ ಸತೀಶ ಜಾರಕಿಹೊಳಿ ಅವರನ್ನು ಬೇಟಿ ಆದ ವಿಜಯಪುರದ ಕುಂಬಾರ ಸಮಾಜದ ಮುಖಂಡರ..
ಕುಂಬಾರ ಸಮುದಾಯದ ಕುಂದುಕೊರತೆಗಳ ನಿವಾರಣೆಗೆ ಸಚಿವರಲ್ಲಿ ಮನವಿ..
ವಿಜಯಪುರ : ಮಂಗಳವಾರ ದಿನಾಂಕ 22/07/2025 ರಂದು ಕರ್ನಾಟಕ ಕುಂಬಾರರ ಯುವ ಸೈನ್ಯ ಬೆಳಗಾವಿ ಜಿಲ್ಲಾಧ್ಯಕ್ಷರಾದ ನಿಂಗಪ್ಪ ಕುಂಬಾರ ಅವರ ನೇತೃತ್ವದಲ್ಲಿ ವಿಜಯಪುರ ನಗರದ ಸರ್ಕಾರಿ ಅತಿಥಿಗೃಹದಲ್ಲಿ ಲೋಕಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಗಳಾದ ಸತೀಶ ಜಾರಕಿಹೋಳಿರವರನ್ನು ವಿಜಯಪುರ ಕುಂಬಾರ ಸಮಾಜದ ಪ್ರಮುಖರು ಜೊತೆಗೆ ಬೇಟಿ ಮಾಡಿದ್ದಾರೆ..
ಈ ವೇಳೆ ಗೌರವಾನ್ವಿತ ಸಚಿವರಿಗೆ ಕುಂಬಾರ ಸಮಾಜದ ವತಿಯಿಂದ ಸನ್ಮಾನಿಸಿ, ಸಮಾಜದ ಕುಂದಕೋರತೆಗಳ ಬಗ್ಗೆ ಮನವಿ ಪತ್ರವನ್ನು ನೀಡಲಾಯಿತು..

ಈ ಸಂದರ್ಭದಲ್ಲಿ ವಿಜಯಪುರ ಕುಂಬಾರ ಸಮಾಜ ಜಿಲ್ಲಾಧ್ಯಕ್ಷರಾದ ಸೋಮಲಿಂಗಪ್ಪ ಕುಂಬಾರ, ಬೆಳಗಾವಿ ಕುಂಬಾರ ಸಮಾಜ ಜಿಲ್ಲಾಧ್ಯಕ್ಷರಾದ ನಿಂಗಪ್ಪ ಕುಂಬಾರ್, ವಿಜಯಪುರ ಜಿಲ್ಲಾ ಹಾಗೂ ತಾಲ್ಲೂಕು ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು..