ಎಸ್ಸಿ ಎಸ್ಟಿ ಸಮುದಾಯದ ಬಗ್ಗೆ ಕಾಳಜಿ ಇಲ್ಲದವರು ಇಲ್ಲಿ ಅಧಿಕಾರಿಯಾಗಿ ಇರಬಾರದು..
ಲಕ್ಷ್ಮಣ ಡಿ ಕೋಲಕಾರ, ರಾಜ್ಯಾಧ್ಯಕ್ಷರು ಅಂಬೇಡ್ಕರ ಶಕ್ತಿ ಸಂಘಟನೆ..
ಜಿಲ್ಲಾಧಿಕಾರಿಗಳ ಮುಖಾಂತರ ಅಧಿಕಾರಿಗಳಿಗೆ ಸ್ಪಷ್ಟ ಮಾರ್ಗದರ್ಶನ ಕೊಡಿಸಿ ಸಮಸ್ಯೆ ಪರಿಹರಿಸುತ್ತೇವೆ..
ಜಂಟಿ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಬೆಳಗಾವಿ..
ಬೆಳಗಾವಿ : ಎಸ್ಸಿ ಎಸ್ಟಿ ಸಮುದಾಯದ ಬಗ್ಗೆ ಕಾಳಜಿ ತೋರಿ ಪೋಷಿಸುವ ಜವಾಬ್ದಾರಿ ಇರುವುದು ಸಮಾಜ ಕಲ್ಯಾಣ ಇಲಾಖೆಯ ಮೇಲೆ, ಸಮಾಜದ ಅಭಿವೃದ್ಧಿ ಕಾರ್ಯಗಳ ಬಗ್ಗೆ, ಬೇರೆ ಇಲಾಖೆಯವರು ಮಾಡಿದ ಲೋಪಗಳ ಬಗ್ಗೆ ನಾವೇ ವಿಶೇಷವಾಗಿ ಹೇಳೋದಾದರೆ ಇಲ್ಲಿಯ ಅಧಿಕಾರಿಗಳಿಗೆ ಉನ್ನತ ಹುದ್ದೆ ಹಾಗೂ ಸಂಬಳ ಏಕೆ? ಎಸ್ಸಿ ಎಸ್ಟಿ ಸಮುದಾಯಗಳ ಬಗ್ಗೆ ಕಾಳಜಿ ಇಲ್ಲದವರು ಈ ಇಲಾಖೆಯಲ್ಲಿ ಉನ್ನತ ಅಧಿಕಾರಿಯಾಗಿ ಇರಬಾರದು ಎನ್ನುವ ಮೂಲಕ ಡಾ ಬಿ ಆರ್ ಅಂಬೇಡ್ಕರ ಶಕ್ತಿ ಸಂಘಟನೆಯ ರಾಜ್ಯಾಧ್ಯಕ್ಷರಾದ ಲಕ್ಷ್ಮಣ ಕೋಲಕಾರ ಅವರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ..

ಶನಿವಾರ ನಗರದ ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಎದುರಿಗೆ ತಮ್ಮ ಸಂಘಟನೆಯ ಕಾರ್ಯಕರ್ತರೊಂದಿಗೆ ತಮಟೆ ಬಾರಿಸುವ ಮೂಲಕ ಪ್ರತಿಭಟನೆಯಲ್ಲಿ ಭಾಗಿಯಾಗಿ ಮಾತನಾಡಿದ ಸಂಫಟನೆಯ ಅಧ್ಯಕ್ಷರಾದ ಲಕ್ಷ್ಮಣ ಕೋಲಕಾರ ಅವರು, ಬೆಳಗಾವಿ ಜಿಲ್ಲೆಯಲ್ಲಿ ಕೆಲ ಸರ್ಕಾರಿ ಇಲಾಖೆಗಳು ಎಸ್ ಸಿಎಸ್ ಪಿ ಹಾಗೂ ಟಿಎಸ್ ಪಿ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡುತ್ತಿರುವ ಬಗ್ಗೆ ಆಯಾ ಇಲಾಖೆಯ ಹಿರಿಯ ಅಧಿಕಾರಿಗಳಿಂದ ಕಡ್ಡಾಯವಾಗಿ ತಪಾಸನೆ ನಡೆಸಿ, ಫಲಾನುಭವಿಗಳಿಗೆ ಸೌಲಭ್ಯ ದೊರೆಯುತ್ತಿರುವ ಬಗ್ಗೆ ಖಾತರಿಪಡಿಸಿಕೊಂಡು ಆ ಬಗ್ಗೆ ಕಾಲಕಾಲಕ್ಕೆ ವರದಿಗಳನ್ನು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಪಡೆಯಬೇಕು.
ಸರ್ಕಾರದ ಸುತ್ತೋಲೆ ಪ್ರಕಾರ ಎಸ್ಸಿ ಎಸ್ಟಿ ಸಮುದಾಯಕ್ಕೆ ಸಮರ್ಪಕವಾದ ಸೌಲಭ್ಯಗಳು ದೊರಕುತ್ತಿವೇಯೋ ಅಥವಾ ಇಲ್ಲವೋ, ಇಲ್ಲವಾದರೆ ಆ ಸಮಸ್ಯೆಗಳನ್ನು ಪರಿಹರಿಸುವ ಕರ್ತವ್ಯ ಹಾಗೂ ಜವಾಬ್ದಾರಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳದ್ದು, ಈ ಕುರಿತು ಹಲವಾರು ಸಲ ನಾವು ಕೇಳಿದರೂ ಜಂಟಿ ನಿರ್ದೇಶಕರು ಸರಿಯಾದ ಸ್ಪಂದನೆ ನೀಡಲಿಲ್ಲ, ಜೊತೆಗೆ ಇತರ ಇಲಾಖೆಯಿಂದ ಸಮಾಜ ಕಲ್ಯಾಣ ಇಲಾಖೆಗೆ ಸಲ್ಲಿಸಿರುವ ವರದಿಗಳ ಬಗ್ಗೆ ದೃಢೀಕೃತ ಮಾಹಿತಿಯನ್ನೂ ಕೂಡಾ ನೀಡಿಲ್ಲ ಎಂದು ದೂರಿದರು.
ಎಸ್.ಸಿ.ಎಸ್.ಪಿ ಹಾಗೂ ಟಿ.ಎಸ್.ಪಿ ಕಾರ್ಯಕ್ರಮಗಳ ಅನುಷ್ಠಾನದ ಪರಿಣಾಮದ ಬಗ್ಗೆ ಮೌಲ್ಯಮಾಪನ ಮಾಡಿ ವರದಿಗಳನ್ನು ಇಲಾಖೆಯ ಹಿರಿಯ ಅಧಿಕಾರಿಗಳಿಂದ ಕಾಲಕಾಲಕ್ಕೆ ಸಮಾಜ ಕಲ್ಯಾಣ ಇಲಾಖೆಗೆ ತರಿಸಿಕೊಳ್ಳುವದು ಕಡ್ಡಾಯವಿದ್ದರೂ ಕೂಡಾ, ಬೆಳಗಾವಿ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಮಾಹಿತಿ ನೀಡದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸದೇ ಉದ್ಧಟತನದ, ಕರ್ತವ್ಯ ನಿರ್ಲಕ್ಷತೆ ಅಲ್ಲದೆ ಎಸ್ ಸಿ/ಎಸ್ ಟಿ ಜನಾಂಗದವರಿಗೆ ಸಿಗಬೇಕಾದ ಯೋಜನೆಯ ಲಾಭವನ್ನು ಕೊಡಿಸುವಲ್ಲಿ ವಿಫಲವಾಗುತ್ತಿರುವ ಇಂತಹ ಅಧಿಕಾರಿಗಳು ಸಮಾಜ ಕಲ್ಯಾಣ ಇಲಾಖೆಗೆ ಬೇಡ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ಇದೆ ವೇಳೆ ಸಂಘದ ಅಧ್ಯಕ್ಷರು ಹಾಗೂ ಜಂಟಿ ನಿರ್ದೇಶಕರ ಮಧ್ಯ ಮಾತುಕತೆ ನಡೆದು, ವಾರ್ತಾ ಇಲಾಖೆಗೆ ಬೇರೆ ಜಿಲ್ಲೆಯ ಅಭ್ಯರ್ಥಿಯನ್ನು ತರಬೇತಿ ವಿದ್ಯಾರ್ಥಿ ಎಂದು (ಅಪರೆಂಡಿಕ್ಸ್) ಗೌರವ ಧನದ ಆಧಾರದ ಮೇಲೆ ನೇಮಿಸಿಕೊಂಡು, ಈ ಜಿಲ್ಲೆಯ ಎಸ್ಸಿ ಎಸ್ಟಿ ಅಭ್ಯರ್ಥಿಯ ಅವಕಾಶ ಕಸಿದುಕೊಂಡಂತಾಗಿ ಅನ್ಯಾಯ ಆಗಿದ್ದು ಅದರ ಬಗ್ಗೆ ತಾವೇನು ಕ್ರಮ ಜರುಗಿಸಿದ್ದೀರಾ ಎಂಬ ಪ್ರಶ್ನೆಗೆ, ಅವರು ನೇಮಿಸಿಕೊಂಡರೆ ನಾವೇನು ಮಾಡೋದು ಎಂಬ ಜೆಡಿ ಅವರ ಹೇಳಿಕೆಗೆ ನಿರಾಶರಾದ ಸಂಘಟನೆ ಅಧ್ಯಕ್ಷರು ಅಲ್ಲಿಯೇ ಇದ್ದ ನಾಗರಿಕ ಹಕ್ಕುಗಳ ಘಟಕದ ಅಧಿಕಾರಿಯಲ್ಲಿ ವಿನಂತಿಸುತ್ತ, ಈ ರೀತಿಯ ಬೇಜವಾಬ್ದಾರಿ ಹೇಳಿಕೆಯ ಬಗ್ಗೆ ತಾವು ಕ್ರಮ ಜರುಗಿಸಬೇಕು ಎಂದರು..
ನಂತರ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು, ವಿವಿಧ ಇಲಾಖೆಗಳು ಎಸ್ಸಿ ಎಸ್ಟಿ ಅನುದಾನದ ಕಾರ್ಯಕ್ರಮಗಳ ಅನುಷ್ಠಾನದ ಬಗೆಗೆ ನಮ್ಮ ಇಲಾಖೆಗೆ ವರದಿ ನೀಡಿಲ್ಲ, ಸರಿಯಾದ ಮಾಹಿತಿ ನೀಡಿಲ್ಲ, ಸರಿಯಾಗಿ ಅನುಷ್ಠಾನ ಆಗಿಲ್ಲ, ಕೆಲ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಎನ್ನುವ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ, ಕೆಲವು ವಿಚಾರಗಳ ಬಗೆಗೆ ಕೆಲ ದಿನಗಳಲ್ಲಿ ಸ್ಪಸ್ಟಿಕರಣ ಕೊಡುತ್ತೇವೆ, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಒಂದು ಎಸ್ಸಿ ಎಸ್ಟಿ ಸಮಿತಿಯ ಸಭೆ ನಡೆಯುತ್ತಿದ್ದು ಅದರಲ್ಲಿಯೂ ಈ ವಿಚಾರವನ್ನು ಹೈಲೈಟ್ ಮಾಡಿಕೊಂಡು, ಅಧಿಕಾರಿಗಳಿಗೆ ಒಂದು ಸ್ಪಷ್ಟ ಮಾರ್ಗದರ್ಶನವನ್ನು ನಾನು ಮತ್ತು ಜಿಲ್ಲಾಧಿಕಾರಿಗಳ ಮುಖಾಂತರ ಕೊಡಿಸುವ ಮೂಲಕ ಈ ಸಮಸ್ಯೆ ಸರಿಪಡಿಸುತ್ತೇವೆ ಎಂದಿದ್ದಾರೆ..
ವರದಿ ಪ್ರಕಾಶ್ ಬಸಪ್ಪ ಕುರಗುಂದ..