ನಗರ ಸ್ವಚ್ಛತೆಯಲ್ಲಿ ಪಾಲಿಕೆ ಸಿಬ್ಬಂದಿಯೊಂದಿಗೆ ಸಾರ್ವಜನಿಕರು ಸಹಕರಿಸಬೇಕು..
ಸರ್ಕಾರದಿಂದ ಅಭಿವೃದ್ಧಿ ಕೆಲಸಗಳಿಗೆ ಸಾಕಷ್ಟು ಅನುದಾನ ಬಂದಿದೆ..
ಶಾಸಕ ಆಶಿಫ್ (ರಾಜು) ಸೇಠ್..
ಬೆಳಗಾವಿ : ಕಸ ಸಂಗ್ರಹಣೆಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆ ನಂಬರ್ ಸ್ಥಾನಕ್ಕೆ ಬರಬೇಕು ಎಂದು ಶಾಸಕ ಆಸೀಫ್ ಸೇಠ್ ಹೇಳಿದ್ದಾರೆ.
ಮಂಗಳವಾರ ಜಿಲ್ಲಾಸ್ಪತ್ರೆಯ ಮುಂಭಾಗದಲ್ಲಿ ಮಹಾನಗರ ಪಾಲಿಕೆಯ ದೈನಂದಿನ ಸ್ವಚ್ಚತಾ ಕಾರ್ಯಕ್ಕೆ ಹೊಸ ಗುತ್ತಿಗೆ ಕಾರ್ಯಕ್ರಮದ 36 ಹೊಸ ಕಸ ಸಂಗ್ರಹ ವಾಹನಗಳನ್ನು ಲೋಕಾರ್ಪಣೆ ಮಾಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮನೆ ಮನೆಗೆ ಕಸ ಸಂಗ್ರಹಣೆ ಅಚ್ಚುಕಟ್ಟಾಗಿ ಮಾಡಿದರೆ ಬೆಳಗಾವಿ ಮಹಾನಗರ ಪಾಲಿಕೆ ನಂಬರ್ ಒನ್ ಸ್ಥಾನಕ್ಕೆ ಬರಲಿದೆ. ಇದಕ್ಕೆ ಪಾಲಿಕೆ ಪೌರ ಕಾರ್ಮಿಕರು, ಅಧಿಕಾರಿಗಳು ಹಾಗೂ ಸಾರ್ವಜನಿಕರ ಶ್ರಮ ಸಾಕಷ್ಟು ಹಾಕಬೇಕು. ಇದು ಎಲ್ಲರ ಜವಾಬ್ದಾರಿಯಾಗಿದೆ ಎಂದರು.

ಬೇಕಾಬಿಟ್ಟಿಯಾಗಿ ಕಸ ಚೆಲ್ಲುವುದು ಸರಿಯಲ್ಲ. ಸಾರ್ವಜನಿಕರು ಪಾಲಿಕೆಯ ಸಿಬ್ಬಂದಿಗಳೊಂದಿಗೆ ಸಹಕಾರ ನೀಡಬೇಕು ಎಂದರು.
ನಿತ್ಯ ಕಸ ಸಂಗ್ರಹಣೆ ಮಾಡುವಾಗ ಬೆಳಗ್ಗೆ ಬೇಗನೆ ಬಂದು ಕೆಲಸಕ್ಕೆ ಹಾಜರಾಗಬೇಕು. ಸರಕಾರದಿಂದ 127 ಕೋಟಿ ರಸ್ತೆಗೆ ಹಾಗೂ 45 ಕೋಟಿ ಯುಜಿಡಿಗಾಗಿ, 50 ಕೋಟಿ ರೂ. ಮುಖ್ಯಮಂತ್ರಿಗಳ ವಿಶೇಷ ಅನುದಾನ ಹಾಗೂ ಪ್ಲೈಓರ್ ಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ 120 ಕೋಟಿ ನೀಡಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ನಿರ್ಮಾಣಕ್ಕೆ 50 ಕೋಟಿ ಅನುದಾನ ಬಂದಿದೆ. ಅಭಿವೃದ್ಧಿಗೆ ಅನುದಾನ ಬರುತ್ತಿದೆ. ಆದರೆ ಕಸ ಸಂಗ್ರಹಣೆ ಮಾಡುವಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡೋಣ ಎಂದರು.
ಪಾಲಿಕೆ ಆಡಳಿತ ಪಕ್ಷದ ನಾಯಕ ಹನುಮಂತ ಕೊಂಗಾಲಿ ಮಾತನಾಡಿ, ಪಾಲಿಕೆಯಲ್ಲಿ ಪೌರಕಾರ್ಮಿಕರ ಪಾತ್ರ ಮಹತ್ವದಾಗಿದೆ. ನಗರವನ್ನು ಶುಚಿಗೊಳಿಸಲು ಸಾಕಷ್ಟು ಶ್ರಮಿಸಿದ್ದಾರೆ. ಪೌರಕಾರ್ಮಿಕರ ಸಂಖ್ಯೆಯನ್ನು ಹೆಚ್ಚಳ ಮಾಡಿದ್ದಾರೆ ಎಂದರು.

ಪಾಲಿಕೆ ಆಯುಕ್ತ ಶುಭ ಬಿ. ಮಾತನಾಡಿ, ಮಹಾನಗರ ಪಾಲಿಕೆ ಕೆಲಸ ಮಾಡುವುದು ಜನರಿಗೆ ತಿಳಿಯ ಬೇಕು. ಕಸ ಸಂಗ್ರಹ ಮಾಡುವುದು ನಮಗೆ ಸವಾಲಿನ ಕೆಲಸವಾಗಿತ್ತು. ಜಿಲ್ಲಾಧಿಕಾರಿ ಕಡೆಯಿಂದ ಅನುಮೋದನೆ ಪಡೆದು ಕಸ ಸಂಗ್ರಹ ಮಾಡಲು 36 ವಾಹನಗಳನ್ನು ಪಾಲಿಕೆಗೆ ಬಂದಿವೆ ಎಂದರು.
ಕಸ ಸಂಗ್ರಹ ಮಾಡುವ ಕುರಿತು ನಾವು ಸಾರ್ವಜನಿಕರ ಸಹಭಾಗಿತ್ವದಲ್ಲಿ ಜಾಗೃತಿ ಕಾರ್ಯಕ್ರಮ ಹಾಕಿಕೊಂಡು ಬೆಳಗಾವಿ ಮಹಾನಗರ ಪಾಲಿಕೆ ಈ ಬಾರಿ ರಾಷ್ಟ್ರಪತಿ ಪ್ರಶಸ್ತಿ ಪಡೆಯಲು ಶ್ರಮಿಸುತ್ತೇವೆ ಎಂದರು.