ಲೋಕಾಯುಕ್ತದಲ್ಲಿ ವ್ಯವಸ್ಥಿತವಾಗಿ ದೂರು ನೋಂದಣಿ ಆಗಬೇಕು..

ಲೋಕಾಯುಕ್ತದಲ್ಲಿ ವ್ಯವಸ್ಥಿತವಾಗಿ ದೂರು ನೋಂದಣಿ ಆಗಬೇಕು..

ದೂರು ದಾಖಲಾದ ತಕ್ಷಣವೇ ಕ್ರಮ ಜರುಗಿಸಲು ಬರುವದಿಲ್ಲ..

ನಮ್ಮ ಕೆಲಸದಿಂದ ಜನರು ಸಂತಸವಾದರೆ ಅದಕ್ಕಿಂತ ದೊಡ್ಡ ಖುಷಿ, ಹೆಮ್ಮೆ ನಮಗೆ ಬೇರೊಂದಿಲ್ಲ..

ಬಿ ಎಸ್ ಪಾಟೀಲ, ಲೋಕಾಯುಕ್ತ ನ್ಯಾಯಮೂರ್ತಿಗಳು..

ಬೆಳಗಾವಿ : ಲೋಕಾಯುಕ್ತರಲ್ಲಿ ಸಲ್ಲಿಸುವ ದೂರುಗಳ ನೋಂದಣಿಯಲ್ಲಿ ಜವಾಬ್ದಾರಿಯುತವಾಗಿ, ಸರಿಯಾದ ದಾಖಲೆಗಳೊಂದಿಗೆ, (ಅಪ್ಪಿಡೆವಿಟ್ ಮಾಡಿದ) ವ್ಯವಸ್ಥಿತವಾಗಿರಬೇಕು, ದೂರು ದಾಖಲಾದ ಕೂಡಲೇ ತಕ್ಷಣ ಕ್ರಮ ತಗೆದುಕೊಳ್ಳಲು ಆಗೋಲ್ಲ, ತನಿಖಾ ಹಂತಗಳಿರುತ್ತವೆ, ಯಾರಾದರೂ ನಮಗೆ ದಾಖಲೆಗಳನ್ನು ಸಾಕ್ಷಿಗಳನ್ನು, ಆಧಾರಗಳನ್ನು ನೀಡಿದ್ದೆ ಆದರೆ ನಾವು ಸೋಮೊಟೊ ದೂರು ದಾಖಲು ಮಾಡುತ್ತೇವೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿ ಎಸ್ ಪಾಟೀಲ ಅವರು ಹೇಳಿದ್ದಾರೆ..

ಶುಕ್ರವಾರ ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ನ್ಯಾಯ ಮೂರ್ತಿಗಳು, ಲೋಕಾಯುಕ್ತರಿಗೆ ನೀಡುವ ದೂರುಗಳು ಅರ್ಧಮರ್ಧ ಇರಬಾರದು, ಯಾರೇ ಆದರೂ ಸರಿಯಾದ ದಾಖಲೆಗಳೊಂದಿಗೆ, ವ್ಯವಸ್ಥಿತವಾಗಿ ದೂರು ನೋಂದಣಿ ಮಾಡಿದ್ದಲ್ಲಿ, ಸರಿಯಾದ ಮಾರ್ಗದಲ್ಲಿ ತನಿಖೆ ಆಗಿ, ಸೂಕ್ತ ಫಲಿತಾಂಶವೇ ಬರುವದು ಎಂದು ಹೇಳಿದ್ದಾರೆ, ಹಗಲು ರಾತ್ರಿ ಎನ್ನದೇ ಲೋಕಾಯುಕ್ತ ಕೆಲಸ ಮಾಡುತ್ತದೆ, ನಮ್ಮ ಕೆಲಸದಿಂದ ಸಾರ್ವಜನಿಕರು ಸಂತಸವಾದಲ್ಲಿ ಅದಕ್ಕಿಂತ ದೊಡ್ಡ ಖುಷಿ ಹೆಮ್ಮೆ ನಮಗೆ ಬೇರೊಂದಿಲ್ಲ ಎಂದಿದ್ದಾರೆ..

ಇನ್ನು ಬೆಳಗಾವಿ ಜಿಲ್ಲೆಯಲ್ಲಿ ಎರಡು ದಿನಗಳ ಪರಿಶೀಲನೆಯ ಬಗ್ಗೆ ಮಾಹಿತಿ ನೀಡಿದ ನ್ಯಾಯಮೂರ್ತಿಗಳು, ದೂರುಗಳ ಆಧಾರದ ಮೇಲೆ ಕೆಲ ಕಚೇರಿಗಳನ್ನು ಆದುಕೊಂಡು ಪರಿಶೀಲನೆ ಮಾಡಿದ್ದೇವೆ, ಹಾಸ್ಪಿಟಲ್ಸ್, ಪಾಲಿಕೆ, ನಗರಸಭೆಯಂತ ಸ್ಥಳೀಯ ಸಂಸ್ಥೆ, ಕಂದಾಯ ಇಲಾಖೆ, ಭೂಮಾಪನ, ಸ್ಮಾರ್ಟ್ ಸಿಟಿ, ನೋಂದಣಿ ಕಚೇರಿ ನಮ್ಮ ಟಾರ್ಗೆಟ್ ಆಗಿದ್ದವು, ಬೆಳಗಾವಿಯ ಸಬ್ ರಿಜಿಸ್ಟರ್ ಕಚೇರಿಯಲ್ಲಿನ ಕಾರ್ಯವೈಕರಿಯ ಬಗ್ಗೆ ನಮಗೆ ಅಸಮಾಧಾನ ಇದೆ, ಸಬ್ ರಿಜಿಸ್ಟರ್ ಕಚೇರಿಯಲ್ಲಿ ಕಾನೂನು ಪ್ರಕಾರ ಬೇರೆಯವರ ಆಸ್ತಿ ಹಗಲು ದರೋಡೆ ಮಾಡುತ್ತಿದ್ದಾರೆ. ಇದನ್ನು ವ್ಯವಸ್ಥಿತವಾಗಿ ಮಾಡಿದ್ದಾರೆ, ಬೇರೆಯವರ ಜಮೀ‌ನನ್ನು ನಕಲಿ ದಾಖಲೆ ಸೃಷ್ಟಿಸಿರುವ ಮೂರು ಪ್ರಕರಣಗಳನ್ನು ಲೋಕಾಯುಕ್ತ ದಾಖಲಿಸಿಕೊಂಡು ಒಂದು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲಾಗುವುದು ಎಂದರು.

ಭೂ ದಾಖಲೆ ಇಲಾಖೆಯಲ್ಲಿ ಮೂರುವರೆ ಸಾವಿರ ಕೇಸಗಳು ಬಾಕಿ ಇವೆ. ನಿಧಾನ ಯಾಕೆ ಎಂದು ಕೇಳಿದರೆ ಸಿಬ್ಬಂದಿಗಳ ಕೊರತೆಯಿದೆ ಎನ್ನುತ್ತಾರೆ. ಇದರಿಂದ ಸಾರ್ವಜನಿಕರ ಕೆಲಸ ಸರಿಯಾಗಿ ಆಗುತ್ತಿಲ್ಲ ಎಂದರು.

ಜಿಲ್ಲಾಸ್ಪತ್ರೆಯ ಕಟ್ಟಡ ಹಳೆಯದಾಗಿದ್ದು ಮಳೆಗೆ ಗೋಡೆಗಳು ಸೋರುತ್ತಿವೆ. ಪಕ್ಕದಲ್ಲೇ ಹೆರಿಗೆ ವಾಡ್೯ಗಳಿವೆ, ಅಪಘಾತ ಸಂಭವಿಸಿದರೆ ಯಾರು ಹೊಣೆ? ಗೋಕಾಕ ತಾಲೂಕಾ ಆಸ್ಪತ್ರೆಯಲ್ಲಿಯೂ ಇದೇ ಸಮಸ್ಯೆ ಇದೆ ಎಂದರು.

ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬಾಕಿ ಇದ್ದ ಪ್ರಕರಣಗಳನ್ನು ಆದಷ್ಟು ಬೇಗ ಇತ್ಯರ್ಥ ಮಾಡಿಸುತ್ತೇವೆ, ಈಗಾಗಲೇ ಹಿಂದೆ ಇದ್ದ ಕೆಲ ಪ್ರಕರಣಗಳನ್ನು ಮುಗಿಸಿದ್ದೇವೆ ಎಂದು ಆಯುಕ್ತರು ಹೇಳಿದ್ದಾರೆ, ಪಾಲಿಕೆಯಲ್ಲಿ ಕೆಲ ವಿಷಯ ನಿರ್ವಾಹಕರು ಈ ವಿಷಯ ನಂಗೆ ಬರುವುದಿಲ್ಲ ಎಂದು ಸಬೂಬು ಹೇಳುತ್ತಿದ್ದಾರೆ. ಅವರ ಮೇಲೆ ವೈಯಕ್ತಿಕವಾಗಿ ಕೇಸ್ ದಾಖಲಿಸಲಾಗಿದೆ ಎಂದರು.

ಇನ್ನು ಗೋಕಾಕಿನ ಎಡಿಎಲ್ಆರ್ ಕಚೇರಿಯಲ್ಲಿ ಆರು ಜನ ಅನಧಿಕೃತವಾಗಿ ಖುರ್ಚಿ ಹಾಕಿಕೊಂಡು ಕುಳಿತಿದ್ದರು, ಅಲ್ಲಿಯ ಅಧಿಕಾರಿಯೇ ಅವರಿಗೆ ಸಂಬಳ ಕೊಡುತ್ತಾನೆ, ಬೆಳಗಾವಿ ಸ್ಮಾರ್ಟ್ ಸಿಟಿ ಬಗ್ಗೆ ದಾಖಲೆಗಳನ್ನು ಸಂಗ್ರಹಿಸಿದ್ದೇವೆ, ಮುಂದಿನ ಕ್ರಮ ಕೈಗೊಳ್ಳುತ್ತೇವೆ, ಬಹಳ ಇಲಾಖೆಗಳ ಬಗ್ಗೆ ಮಾಹಿತಿ ಕಲೆ ಹಾಕಿದ್ದೇವೆ, ಅದರ ಬಗ್ಗೆ ಇಲ್ಲಿ ಬಹಳ ಪ್ರಸ್ತಾಪ ಬೇಡ, ತನಿಖೆ ಮಾಡುತ್ತೇವೆ ಎಂದಿದ್ದಾರೆ.

ಲೋಕಾಯುಕ್ತದಲ್ಲಿ ಈಗ 25ಸಾವಿರ ಪ್ರಕರಣಗಳಿವೆ, ನಾನು ಬಂದಾಗ 13 ಸಾವಿರ ಇದ್ದ ಪ್ರಕರಣಗಳಲ್ಲಿ 6 ಸಾವಿರ ಕ್ಲಿಯರ್ ಮಾಡಿದ್ದು, ಲೋಕಾಯುಕ್ತ ಸಂಸ್ಥೆ ಮೇಲೆ ಎಲ್ಲರ ಭರವಸೆ ಇರುವದರಿಂದ ಎಲ್ಲರೂ ದೂರುಗಳನ್ನು ನೀಡುತ್ತಾರೆ, 25ಸಾವಿರ ದುರುಗಳಿವೆ, ಕೇವಲ 35 ನ್ಯಾಯಾದೀಶರಿದ್ದೇವೆ, ಜನರ ನಿರೀಕ್ಷೆಯಂತೆ ಕೆಲಸ ಮಾಡಲು ಸಿಬ್ಬಂದಿಗಳನ್ನು ನೇಮಿಸಲು ಸರ್ಕಾರಕ್ಕೆ ಬರೆದಿದ್ದೇವೆ, ನಮ್ಮ ಸಮಸ್ಯೆ, ಕೊರತೆಯನ್ನು ಹೇಳುವ ಅವಶ್ಯಕತೆ ಇಲ್ಲಾ, ನಾವು ಹಗಲು ರಾತ್ರಿ ಕೆಲಸ ಮಾಡುತ್ತೇವೆ, ಕಡತಗಳನ್ನು ಮನೆಗೆ ತಗೊಂಡು ಹೋಗಿ ಕೆಲಸ ಮಾಡುತ್ತೇವೆ, ಎಷ್ಟೋ ಸಲ ನಮ್ಮ ಸಿಬ್ಬಂದಿಗಳು ದೂರುದಾರರ ಅಥವಾ ಬೇರೆಯವರ ಕೆಲಸ ಮಾಡಿಕೊಟ್ಟಾಗ ಸಿಗುವ ಹೆಮ್ಮೆ, ಸಂತೋಷ ಯಾವುದರಿಂದಲೂ ಸಿಗೋಲ್ಲ ಎಂದದ್ದು ಉಂಟು, ಎಲ್ಲರೂ ಆ ರೀತಿಯಲ್ಲಿ ಸಾರ್ವಜನಿಕರು ಜಾಗೃತರಾಗುವ ಕಾರ್ಯ ಮಾಡಬೇಕೆಂದರು..

ವರದಿ ಪ್ರಕಾಶ್ ಬಸಪ್ಪ ಕುರಗುಂದ..