ನಾಳೆಯಿಂದ ಬೆಳಗಾವಿಯಲ್ಲಿ ಅಪೋಲೋ ಸರ್ಕಸ ಶುಭಾರಂಭ..

ನಾಳೆಯಿಂದ ಬೆಳಗಾವಿಯಲ್ಲಿ ಅಪೋಲೋ ಸರ್ಕಸ ಶುಭಾರಂಭ..

130 ಜನರ ವೈವಿಧ್ಯಮಯ ಆಟಗಳ ರಂಜನೆ ನೀಡುವ ವಿಶೇಷ ಸರ್ಕಸ್..

ಬೆಳಗಾವಿ : ಬೆಳಗಾವಿ ನಗರವಾಸಿಗಳಿಗೆ ಈ ವಿಶೇಷ ಹಬ್ಬಗಳ ದಿನಗಳಲ್ಲಿ ಮನರಂಜನೆ ನೀಡಲು ಕೇರಳ ಮೂಲದ ಅಪೋಲೋ ಸರ್ಕಸ್ ನಾಳೆಯಿಂದ ಬೆಳಗಾವಿಯಲ್ಲಿ ಆರಂಭವಾಗಿತ್ತಿದ್ದು ಅದರ ಸದುಪಯೋಗವನ್ನು ಎಲ್ಲಾ ಸರ್ಕಸ್ ಪ್ರಿಯರು ಆಗಮಿಸಿ ವೀಕ್ಷಿಸಿ ಅನುಭವಿಸಬೇಕು ಎಂದು ಅಪೋಲೋ ಸರ್ಕಸ್ ಮಾಲಿಕರಾದ ಸುನಿಲ್ ಜಾರ್ಜ್ ಮನವಿ ಮಾಡಿದ್ದಾರೆ.

ಬುಧವಾರ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಳೆ ದಿನಾಂಕ 14/08/2025ರಂದು ನಗರದ ಕ್ಲಬ್ ರೋಡಿನ, ಸಿಪಿಎಡ್ ಮೈದಾನದಲ್ಲಿ ಸಂಜೆ 7-30 ಕ್ಕೆ ಸರ್ಕಸ್ಸಿನ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಂಡಿದ್ದು, ಕೇರಳದಿಂದ ಪ್ರಥಮವಾಗಿ ಬೆಳಗಾವಿಗೆ ಈ ಸರ್ಕಸ್ ಪ್ರದರ್ಶನಕ್ಕೆ ಆಗಮಿಸಿದ ಎಂದಿದ್ದಾರೆ.

ಉದ್ಘಾಟನಾ ಸಮಾರಂಭಕ್ಕೆ ಉದ್ಘಾಟಕರಾಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಆಗಮಿಸುತ್ತಿದ್ದು, ಮುಖ್ಯ ಅಥಿತಿಗಳಾಗಿ ಶಾಸಕ ಆಶೀಫ್ (ರಾಜು) ಸೇಠ್ ಅವರು ಉಪಸ್ಥಿತರಿರುವರು ಎಂಬ ಮಾಹಿತಿ ನೀಡಿದ್ದಾರೆ.

ಈ ಅಪೋಲೋ ಸರ್ಕಸ್ ಪ್ರತಿ ದಿನ ಮೂರು ಆಟಗಳು ಪ್ರದರ್ಶನ ಆಗುತ್ತಿದ್ದು, ಮಧ್ಯಾಹ್ನ 1ಕ್ಕೆ, ಸಂಜೆ 4ಕ್ಕೆ, ಹಾಗೂ 7ಕ್ಕೆ ಪ್ರಾರಂಭವಾಗುತ್ತವೆ, ಈ ತಂಡದಲ್ಲಿ 130 ಜನ ಕೆಲಸ ಮಾಡುತ್ತಿದ್ದು, ಟಿಕೆಟ್ ದರಗಳು 350, 250, ಹಾಗೂ 150 ರಂತೆ ಮೂರು ವಿಧಗಳಲ್ಲಿ ಇರುತ್ತವೆ, ಸರ್ಕಸ್ ವೀಕ್ಷಣೆ ಮಾಡಲು ಬಂದ ಜನರಿಗೆ ವಾಹನ ಪಾರ್ಕ ಮಾಡಲು ಸಾಕಷ್ಟು ಸ್ಥಳಾವಕಾಶ ಇದೆ ಎಂಬ ವಿಷಯವನ್ನು ಹಂಚಿಕೊಳ್ಳುತ್ತಾ, ಎಲ್ಲರೂ ಬಂದು ಈ ಅದ್ಭುತ ಸರ್ಕಸ್ ಪ್ರದರ್ಶನವನ್ನು ವೀಕ್ಷಣೆ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ವರದಿ ಪ್ರಕಾಶ್ ಬಸಪ್ಪ ಕುರಗುಂದ..