ಕೆ ಎನ್ ರಾಜಣ್ಣ ಅವರನ್ನು ಸಂಪುಟದಿಂದ ವಜಾಗೊಳಿಸಿದ್ದು ಕಾಂಗ್ರೆಸ್ ಪಕ್ಷಕ್ಕೆನೇ ನಷ್ಟ..
ಸತೀಶ್ ಜಾರಕಿಹೊಳಿ ಅವರನ್ನು ಟಚ್ ಕೂಡಾ ಮಾಡಲು ಆಗೋಲ್ಲ..
ಸಂತೋಷ್ ಚಿಕ್ಕಲದಿನ್ನಿ, ಜಿಲ್ಲಾಧ್ಯಕ್ಷರು ವೀರ ಸಿಂಧೂರ ಲಕ್ಷ್ಮಣ ಯುವ ಪಡೆ ಕಣಬರ್ಗಿ..
ಬೆಳಗಾವಿ : ಮತಗಳ್ಳತನದ ವಿಷಯವಾಗಿ ಪ್ರತಿಕ್ರಿಯೆ ನೀಡಿದ್ದಕ್ಕೆ ಕಾಂಗ್ರೆಸ್ಸಿನ ಮಾಜಿ ಸಚಿವ ಹಾಗೂ ವಾಲ್ಮೀಕಿ ಸಮುದಾಯದ ಪ್ರಮುಖ ನಾಯಕರಾದ ಕೆ ಎಂ ರಾಜಣ್ಣ ಅವರನ್ನು ಸಂಪುಟದಿಂದ ವಜಾಗೊಳಿಸಿದ್ದು ತೀವ್ರ ಖಂಡನೀಯ, ಇದು ವಾಲ್ಮೀಕಿ ಸಮುದಾಯಕ್ಕೆ ಮಾಡಿದ ಅನ್ಯಾಯ ಎಂದು ಸಂತೋಷ ಚಿಕ್ಕಲದಿನ್ನಿ ಅವರು ಹೇಳಿದ್ದಾರೆ.
ಮೇಲಿನ ವಿಷಯದ ಕುರಿತಾಗಿ ಬುಧವಾರ ಪ್ರತಿಕ್ರಿಯೆ ನೀಡಿದ ಅವರು, ಮತಗಳ್ಳತನದ ಬಗ್ಗೆ ಪಕ್ಷಾತೀತವಾಗಿ, ವಸ್ತುನಿಷ್ಟವಾಗಿ ಮಾತನಾಡಿದ ಕೆ ಎಂ ರಾಜಣ್ಣ ಅವರ ನೇರ ನುಡಿಯನ್ನು ಅವರ ಪಕ್ಷದ ವರಿಷ್ಠರು ಸ್ವಾಗತಿಸಬೇಕಿತ್ತು, ಹಾಗಾಗಿದ್ದರೆ ಅವರೂ ಈ ಪ್ರಜಾಪ್ರಭುತ್ವ ವ್ಯವಸ್ಥೆಗೆ ಗೌರವ ನೀಡಿದಂತೆ ಆಗುತ್ತಿತ್ತು. ಅದನ್ನು ಬಿಟ್ಟು ಶಿಸ್ತು ಕ್ರಮ ಜರುಗಿಸಿದರೆ ಪಕ್ಷದಲ್ಲಿ ವಾಕ್ ಸ್ವಾತಂತ್ರ್ಯಕ್ಕೆ ಬೆಲೆ ಇಲ್ಲವೇ ಎಂಬ ಸಂಶಯ ಮೂಡುತ್ತದೆ ಎಂದಿದ್ದಾರೆ.
ರಾಜಣ್ಣ ಅವರ ರಾಜೀನಾಮೆ ಹಿಂದೆ ಮಹಾನಾಯಕರ ಷ್ಯಡ್ಯoತ್ರ ಇದೆ, ಬಹಳ ದಿನಗಳಿಂದ ಅವರ ವಿರುದ್ಧ ಪಿತೂರಿ ನಡೆಯುತ್ತಿತ್ತು, ಒಬ್ಬ ಉತ್ತಮ ರಾಜಕೀಯ ನಾಯಕನಿಗೆ ಹೀಗೆ ಆಗಿದ್ದನ್ನು ವಾಲ್ಮೀಕಿ ಸಮುದಾಯ ಸಹಿಸುವುದಿಲ್ಲ, ಬರುವ ದಿನಗಳಲ್ಲಿ ಇದಕ್ಕೆ ತಕ್ಕ ಉತ್ತರ ನೀಡುತ್ತೇವೆ ಎಂದಿದ್ದಾರೆ.
ಇನ್ನು ಬಿಜೆಪಿಯ ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ರಾಜುಗೌಡ ಹೇಳಿದ ಪ್ರಕಾರ, ಇಂದು ರಾಜಣ್ಣ ನಾಳೆ ಸತೀಶ್ ಜಾರಕಿಹೊಳಿ ಮೇಲೆ ಪಿತೂರಿ ಆಗುತ್ತದೆ ಎಂಬ ಮಾತಿಗೆ ಉತ್ತರ ನೀಡಿದ ಅವರು, ಸತೀಶ್ ಜಾರಕಿಹೊಳಿ ಅವರ ವಿರುದ್ಧ ಷ್ಯಡ್ಯoತ್ರ ಅಲ್ಲಾ, ಯಾರಿಂದಲೂ ಅವರನ್ನು ಟಚ್ ಕೂಡಾ ಮಾಡಲು ಆಗುವದಿಲ್ಲ, ಸತೀಶ ಜಾರಕಿಹೊಳಿ ಅವರು ಒಂದು ಮಹಾನ್ ಶಕ್ತಿ, ಸರ್ಕಾರಗಳನ್ನು ಹೇಗೆ ತರುವದು, ಹೇಗೆ ಬಿಡುವದು ಎಂಬ ರಾಜತಾಂತ್ರಿಕತೆಯ ಚಾಣಾಕ್ಷತೆ ಹೊಂದಿದ ಮಾಸ್ಟರ್ ಮೈಂಡ್ ಅವರು, ಅವರ ಜೊತೆ ದೊಡ್ಡ ಸೈನ್ಯವೇ ಇದ್ದಾಗ, ಅವರನ್ನು ತಡೆಯುವದು ಭ್ರಮೆ ಎಂದಿದ್ದಾರೆ.
ಹಿಂದೆ ರಮೇಶ ಜಾರಕಿಹೊಳಿ, ಬಿ ನಾಗೇಂದ್ರ, ಈಗ ಕೆ ಎಂ ರಾಜಣ್ಣ, ಪೊಲೀಸ್ ಅಧಿಕಾರಿ ದಯಾನಂದ ಹೀಗೆ ವಾಲ್ಮೀಕಿ ಸಮುದಾಯದ ಪ್ರಮುಖ ನಾಯಕರನ್ನು ಕೆಲವರು ಟಾರ್ಗೆಟ್ ಮಾಡುತ್ತಾ ಹೋಗುತ್ತಿರುವದು ಸ್ಪಷ್ಟವಾಗುತ್ತಿದೆ, ಅಂತವರಿಗೆಲ್ಲ ನಾವು ಬರುವ ದಿನಗಳಲ್ಲಿ ಯಾವ ರೀತಿಯ ಎದಿರೇಟು ನೀಡುತ್ತೇವೆ ಎಂದು ಸಮಯವೇ ಉತ್ತರಿಸುತ್ತದೆ ಎಂದು ತಮ್ಮ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ವರದಿ ಪ್ರಕಾಶ್ ಬಸಪ್ಪ ಕುರಗುಂದ..