ಪ್ರವಾಹ ಹಿನ್ನೆಲೆ ಜನರು ಸುರಕ್ಷಿತ ಸ್ಥಳಕ್ಕೆ ತೆರಳಬೇಕು.
ಜಿಲ್ಲಾಧಿಕಾರಿ ಮೊಹಮ್ಮದ ರೋಷನ್.
ಗೋಕಾಕ : ಅಥಣಿ ಹಾಗೂ ಕಾಗವಾಡದಲ್ಲಿ ಕೊಯ್ನಾ ಜಲಾಶಯದ ನೀರು ಬಿಡುಗಡೆಯಾದರೆ ತೊಂದರೆಯಾಗಬಹುದು ಆದ್ದರಿಂದ ಇಲ್ಲಿನ ಜನರು ಸುರಕ್ಷಿತ ಸ್ಥಳಕ್ಕೆ ತೆರಳಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದ್ದಾರೆ.
ಬುಧವಾರ ಗೋಕಾಕ್ ತಾಲೂಕಿನ ಲೋಳಸುರ ಸೇತುವೆ ಪರಿಶೀಲನೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಹಿಡಕಲ್ ಜಲಾಶಯದಿಂದ 36 ಕ್ಯೂಸಕ್ ನೀರು ಬಿಡಲಾಗುತ್ತಿದೆ. ಗೋಕಾಕ್ ನಗರದಲ್ಲಿ 220 ಮನೆಗಳಿಗೆ ತೊಂದರೆಯಾಗಿದೆ. ಎಲ್ಲರನ್ನು ಸ್ಥಳಾಂತರ ಮಾಡಲಾಗುವುದು.
ತಾತ್ಕಾಲಿಕವಾಗಿ ಕಾಳಜಿ ಕೇಂದ್ರ ತೆರೆಯಲಾಗಿದೆ ಎಂದರು.
ಸೇತುವೆ ದುರಸ್ತಿಗೆ ಕಂದಾಯ ಇಲಾಖೆಗೆ 11 ಕೋಟಿ ರೂ. ಕೇಳಿದ್ದೇವೆ. ಲೋಕೋಪಯೋಗಿ ಇಲಾಖೆಯಿಂದಲೂ ಕೇಳಿ ಲೋಳಸೂರ ಸೇತುವೆ ದುರಸ್ತಿ ಮಾಡಿ ಶಾಶ್ವತ ಪರಿಹಾರ ಕಲ್ಪಿಸಲಾಗುವುದು.
ಕೆಪ್ಯಾಸಿಟಿ ಬಿಲ್ಡಿಂಗ್ ಫಂಡ್ ನಿಂದ 11 ಕೋಟಿ ಅನುದಾನ ಬಿಡುಗಡೆ ಮಾಡಿದರೆ, ಈ ಸೇತುವೆ ದುರಸ್ತಿ ಮಾಡಲಾಗುವುದು ಎಂದರು.
ಮನೆ ಮುಳಗಡೆಯಾದವರಿಗೆ ಸಹ ಶಾಶ್ವತ ಪರಿಹಾರ ಕಲ್ಪಿಸಲಾಗುವುದು. ಕುಂಬಾರಗಲ್ಲಿ, ಮೀಟದ ಮಾರ್ಕೆಟ್ ನ್ನು ಸ್ಥಳಾಂತರ ಮಾಡುವ ಅವಕಾಶ ಇದೆಯಾ ಎನ್ನುವುದು ಪರಿಶೀಲನೆ ನಡೆಸಿ ಸರಿಪಡಿಸಲಾಗುವುದು ಎಂದರು.
ಮಳೆಯ ಪ್ರಮಾಣ ಕಡಿಮೆಯಾಗಿದೆ. ಪ್ರತಿಯೊಂದು ಡ್ಯಾಮ್, ಜಲಾಶಯ ತುಂಬಿದ್ದಾವೆ. ಆಲಮಟ್ಟಿಯಿಂದ ಎರಡೂವರೆ ಲಕ್ಷ ಕ್ಯೂಸೆಕ್ ನೀರು ಸಂಗ್ರಹಣೆಯಾಗಿದೆ ಎಂದರು.