ಬೆಳಗಾವಿ ಪಾಲಿಕೆಯಲ್ಲಿ ಸದ್ಭಾವನಾ ದಿನಾಚರಣೆ ಪ್ರತಿಜ್ಞೆ..

ಬೆಳಗಾವಿ ಪಾಲಿಕೆಯಲ್ಲಿ ಸದ್ಭಾವನಾ ದಿನಾಚರಣೆ ಪ್ರತಿಜ್ಞೆ..

ಬೆಳಗಾವಿ : ಬುಧವಾರ ದಿನಾಂಕ 20/08/2025 ರಂದು ಬೆಳಗಾವಿ ಮಹಾನಗರ ಪಾಲಿಕೆಯ ಮುಖ್ಯ ಕಚೇರಿಯ ಒಳಾಂಗಣದಲ್ಲಿ, ಪಾಲಿಕೆಯ ಉಪ ಆಯುಕ್ತರು ಆಡಳಿತ ಹಾಗೂ ಉಪ ಆಯುಕ್ತರ ಕಂದಾಯ ಇವರ ನೇತೃತ್ವದಲ್ಲಿ, ಮುಖ್ಯ ಕಚೇರಿಯ ಸಿಬ್ಬಂದಿಗಳು ಸದ್ಭಾವನಾ ದಿನಾಚರಣೆಯ ಪ್ರತಿಜ್ಞೆಯನ್ನು ಸ್ವೀಕಾರ ಮಾಡಿದ್ದಾರೆ.

ಕಚೇರಿಯ ಗ್ರಂಥಾಲಯದ ಆವರಣದಲ್ಲಿ ಶಿಸ್ತಿನಿಂದ ಸಾಲಾಗಿ ನಿಂತ ಎಲ್ಲಾ ಸಿಬ್ಬಂದಿಗಳು, ಜಾತಿ ಧರ್ಮ ಪ್ರದೇಶ ಮತ ಅಥವಾ ಭಾಷೆಯ ಬೇದಬಾವವಿಲ್ಲದೇ, ಭಾರತದ ಎಲ್ಲಾ ಜನತೆಯ ಭಾವೈಕ್ಯತೆ ಹಾಗೂ ಸೌಹಾರ್ದಕ್ಕಾಗಿ ಕಾರ್ಯ ನಿರ್ವಹಿಸುತ್ತೇನೆ ಎಂದು ನಾನು ಪ್ರತಿಜ್ಞೆ ಮಾಡುತ್ತೇನೆ..

ಅಲ್ಲದೇ ವೈಯಕ್ತಿಕವಾಗಿ ಆಗಲಿ ಸಾಮೂಹಿಕವಾಗಿ ಆಗಲಿ ನಮ್ಮಲ್ಲಿರುವ ಎಲ್ಲಾ ಬೇದಭಾವಗಳನ್ನು ಹಿಂಸಾಚಾರಕ್ಕೆ ಅವಕಾಶ ನೀಡದೆ ಸಮಾಲೋಚನೆ ಹಾಗೂ ಸಂವಿಧಾನಾತ್ಮಕ ಕ್ರಮಗಳ ಮೂಲಕ ಪರಿಹರಿಸುತ್ತೇನೆಂದು ಸಹ ಪ್ರತಿಜ್ಞೆ ಮಾಡುತ್ತೇನೆ ಎಂದು ಸಿಬ್ಬಂದಿಗಳು ಪ್ರತಿಜ್ಞೆ ಮಾಡಿದ್ದಾರೆ.

ವರದಿ ಪ್ರಕಾಶ್ ಬಸಪ್ಪ ಕುರಗುಂದ..