“Z ಪವರ್” ಆರಂಭಕ್ಕೆ ಪುನೀತ ರಾಜಕುಮಾರರೇ ಸ್ಪೂರ್ತಿ..
ಕರ್ನಾಟಕದಲ್ಲಿ ಮನರಂಜನೆ ಎಂದರೆ ಅಪ್ಪು ಎಂಬ ಹೆಸರು ಮೊದಲಿರುತ್ತದೆ..
Z ಪವರ್ ವಾಹಿನಿ ತಂಡ..
ಬೆಂಗಳೂರು : ಕನ್ನಡಿಗರಿಗೆ “ಪವರ್” ಎಂಬ ಹೆಸರು ಕೇಳಿದಾಗ ಕಣ್ಮುಂದೆ ಬರುವುದು ಪುನೀತ ರಾಜಕುಮಾರ, ಅಂತಹ “ಪವರ್” ಎಂಬ ಹೆಸರನ್ನು ಇಟ್ಟುಕೊಂಡು ಇದೇ 25 ರಂದು ಕನ್ನಡದ ನಂಬರ್ ಒನ್ ಕಿರುತೆರೆ ವಾಹಿನಿ, ಜೀ ಕನ್ನಡ ವಾಹಿನಿಯು ಜೀ ಪವರ್ ಎಂಬ ಹೊಸ ಚಾನೆಲ್ ಅನ್ನು ಕನ್ನಡ ಕಿರುತೆರೆಗೆ ಅರ್ಪಣೆ ಮಾಡುತ್ತಿದೆ, ಈ ಹೊಸ ಜೀ ಪವರ್ ವಾಹಿನಿಗೆ ಪುನೀತ ರಾಜಕುಮಾರ ಅವರೇ ಸ್ಪೂರ್ತಿ ಎಂದು ಜೀ ಪವರ್ ತಂಡ ಹೇಳಿಕೊಂಡಿದೆ.
ರಾಜ್ಯದಲ್ಲಿ ಹಲವಾರು ವರ್ಷಗಳಿಂದ ಕಿರುತೆರೆ ಮನರಂಜನೆಯಲ್ಲಿ ಅಗ್ರಸ್ಥಾನ ಪಡೆದಿರುವ ಜೀ ಕನ್ನಡ ವಾಹಿನಿಯು ಇತರ ರಾಜ್ಯಗಳಲ್ಲಿಯೂ ಹಲವು ಭಾಷೆಗಳಲ್ಲಿ ಪ್ರೇಕ್ಷಕರನ್ನು ರಂಜಿಸುತ್ತ ಬಂದಿದೆ, ಈಗ ಕನ್ನಡದಲ್ಲಿ ಇದೇ ಸಂಸ್ಥೆಯ ಮತ್ತೊಂದು ಚಾನೆಲ್ ಬರುತ್ತಿರುವುದು ಕನ್ನಡಿಗರಿಗೆ ಸಂತಸದ ಸಂಗತಿ.
ಕರ್ನಾಟಕದಲ್ಲಿ ಇಂದು ಮನರಂಜನೆ ಅಂತ ಅಂದರೆ ಅಲ್ಲಿ ಮೊದಲ ಬರುವ ಹೆಸರೇ ಪುನೀತ್ ರಾಜಕುಮಾರ್, ನಮ್ಮ ಹೊಸ ಜೀ ಪವರ್ ಚಾನಲ್ಲಿಗೆ ಅಪ್ಪುನೆ ಸ್ಪೂರ್ತಿ ಎಂದರೆ ತಪ್ಪಾಗಲಾರದು ಎಂದು ಜೀ ಪವರ್ ತಂಡ ಹೇಳಿಕೊಂಡಿದೆ, ಜೀ ಪವರ್ ಎಂದ ಈರೆ ಮಕ್ಕಳಿಂದ ಹಿಡಿದು ವಯೋವೃದ್ಧರ ವರೆಗೂ ಇಷ್ಟವಾಗಿದೆ, ಅದಕ್ಕೆ ಕಾರಣವೇ ಅಪ್ಪು ಅವರು ಎಂದು “ಜೀ ಪವರ್” ತಂಡ ಹೇಳಿಕೊಂಡಿದೆ.
ಜೀ ಪವರ್ ಹೊಸ ವಾಹಿನಿಯಲ್ಲಿ ಮಹಿಳಾ ಪ್ರಧಾನ ನಾಲ್ಕು ಧಾರವಾಹಿಗಳಿದ್ದು, ಎಲ್ಲಾ ವರ್ಗದ ಪ್ರೇಕ್ಷಕರನ್ನು ಸೆಳೆಯುವ ವಿಷಯಗಳನ್ನು ಒಳಗೊಂಡಿದೆ, ಪುರುಷರು ಹಾಗೂ ಯುವಜನತೆಗೆ ಇಷ್ಟವಾಗುವ ಅನೇಕ ಕಾರ್ಯಕ್ರಮಗಳು, ದೇಶಿ ಸೊಗಡಿನ “ಹಳ್ಳಿ ಪವರ್” ಎಂಬ ರಿಯಾಲಿಟಿ ಶೋ, ಹೊಸದಾಗಿ ಹೆಸರು ಮಾಡಿರುವ ಕಲಾವಿದರ ವಿಶೇಷ ಕಥಾಹಂದರ ಹೊಂದಿರುವ ಧಾರಾವಾಹಿಗಳು, ಭವಿಷ್ಯ ದರ್ಶನ ಎಂಬ ಭಕ್ತಿ ಕಾರ್ಯಕ್ರಮಗಳು ಪ್ರಸಾರ ಆಗುತ್ತವೆ ಎಂದು ಜೀ ವಾಹಿನಿಯ ಪ್ರಮುಖರು ಮಾಹಿತಿ ನೀಡಿದ್ದು, ಕನ್ನಡಿಗರ ಪರವಾಗಿ ನೂತನ ಜೀ ಪವರ್ ವಾಹಿನಿಗೆ ಶುಭ ಕೋರೋಣ..
ವರದಿ ಪ್ರಕಾಶ್ ಬಸಪ್ಪ ಕುರಗುಂದ.