ಪಾಲಿಕೆ ಆಯುಕ್ತರಿಗೆ ಹೆಚ್ಚುವರಿ ಹುದ್ದೆಯ ಜವಾಬ್ದಾರಿ..

ಪಾಲಿಕೆ ಆಯುಕ್ತರಿಗೆ ಹೆಚ್ಚುವರಿ ಹುದ್ದೆಯ ಜವಾಬ್ದಾರಿ..

ಬೆಳಗಾವಿ ಸ್ಮಾರ್ಟ ಸಿಟಿಯ ಎಂಡಿ (ಪ್ರಭಾರ) ಆಗಿ ನೇಮಕ.

ಬೆಳಗಾವಿ : ಮಹಾನಗರ ಪಾಲಿಕೆ ಆಯುಕ್ತೆ ಶುಭ ಬಿ ಅವರಿಗೆ ಹೆಚ್ಚುವರಿಯಾಗಿ ಬೆಳಗಾವಿಯ ಸ್ಮಾರ್ಟ ಸಿಟಿಯ ವ್ಯವಸ್ಥಾಪಕ ನಿರ್ದೇಶಕರಾಗಿ (ಎಂ ಡಿ) ನೇಮಕ ಮಾಡಿ, ರಾಜ್ಯ ಸರ್ಕಾರ ಆದೇಶ ಹೊರಡಿಸುವ ಮೂಲಕ ನಗರದ ಹೆಚ್ಚುವರಿ ಜವಾಬ್ದಾರಿಯನ್ನು ನೀಡಿದೆ.

ಹಿಂದಿನ ಎಂ ಡಿ ಆದಂತ ಸೈಯೀದಾಬಾನು ಆಪ್ರೀನ್ ಬಳ್ಳಾರಿ ಅವರನ್ನು ಆಡಳಿತ ಸುಧಾರಣಾ ಇಲಾಖೆಗೆ ಹಿಂದೂರುಗಿಸಿದ್ದು, ಬೆಳಗಾವಿಯ ಸ್ಮಾರ್ಟ ಸಿಟಿ ಆಡಳಿತದ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಸ್ಥಾನಕ್ಕೆ ಶುಭ ಬಿ ಅವರನ್ನು ಮುಂದಿನ ಆದೇಶದವರೆಗೆ ಪ್ರಭಾರದಲ್ಲಿರಿಸಿ ನೇಮಕ ಮಾಡಿ ಆದೇಶ ಮಾಡಲಾಗಿದೆ.