ಜೈಕಿಸಾನ ಖಾಸಗಿ ತರಕಾರಿ ಮಾರುಕಟ್ಟೆಯ ತಡೆಯಾಜ್ಞೆಯ ಅರ್ಜಿಯ ವಜಾ..

ಜೈಕಿಸಾನ ಖಾಸಗಿ ತರಕಾರಿ ಮಾರುಕಟ್ಟೆಯ ತಡೆಯಾಜ್ಞೆಯ ಅರ್ಜಿಯ ವಜಾ..

ಜೈಕಿಸಾನ್ ಖಾಸಗಿ ಮಾರುಕಟ್ಟೆ ವ್ಯಾಪಾರಿಗಳಿಗೆ ಶಾಕ್ ನೀಡಿದ ಉಚ್ಚ ನ್ಯಾಯಾಲಯದ ಆದೇಶ..

ಬೆಳಗಾವಿ : ನಗರದ ಗಾಂಧಿ ನಗರದ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಿರ್ಮಾಣವಾಗಿದ್ದ ಖಾಸಗಿ ಜೈ ಕಿಸಾನ್ ತರಕಾರಿ ಮಾರುಕಟ್ಟೆಯ ಕೃಷಿ ಭೂಮಿಯನ್ನು ಭೂ ಉಪಯೋಗ ಬದಲಾವಣೆ ಮಾಡಿದ ಹಿನ್ನೆಲೆಯಲ್ಲಿ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ) ಈ ಆದೇಶವನ್ನು ರದ್ದು ಮಾಡಿರುವುದನ್ನು ಪ್ರಶ್ನಿಸಿ ಹೈಕೋರ್ಟ್ ನಲ್ಲಿ ತಡೆಯಾಜ್ಞೆ ಸಲ್ಲಿಸಲು ಹೋಗಿದ್ದ ಖಾಸಗಿ ಮಾರುಕಟ್ಟೆ ಅರ್ಜಿಯನ್ನು ಮಂಗಳವಾರ ಹೈಕೋರ್ಟ್ ವಜಾಗೊಳಿಸಿದೆ.

ಕಳೆದ 2013 ರಂದು ಬೆಳಗಾವಿ ಎಪಿಎಂಸಿ ಮಾರುಕಟ್ಟೆ ರಾಜ್ಯದ ಎರಡನೇ ದೊಡ್ಡ ಮಾರುಕಟ್ಟೆಯಾಗಿದ್ದು, ಕೇಂದ್ರ ಸರಕಾರದ ಮಸೂದೆಯಿಂದ ನಗರದಲ್ಲಿ ಜೈ ಕಿಸಾನ್ ಖಾಸಗಿ ತರಕಾರಿ ಮಾರುಕಟ್ಟೆ ನಿರ್ಮಾಣಕ್ಕೆ ಕಾರಣವಾಗಿತ್ತು. ಇದರಿಂದ ಎಪಿಎಂಸಿಯಲ್ಲಿ ವಹಿವಾಟು ಸಂಪೂರ್ಣ ಬಂದ್ ಆಗಿತ್ತು.

10 ಎಕರೆ 20 ಗುಂಟೆಯ ಫಲವತ್ತಾದ ಕೃಷಿ ಭೂಮಿಯಲ್ಲಿ ಬಸಲಿಂಗಪ್ಪ ಸಿದ್ಧನಾಯಕಪ್ಪ ಭಾವಿ ಮೃತರಾಗಿದ್ದರೂ ಅವರ ಹೆಸರಿನ ಅರ್ಜಿಯ ಮೇಲೆ ಅಕ್ರಮವಾಗಿ ಭೂ ಬದಲಾವಣೆಯನ್ನು ಖಾಸಗಿ ಜೈ ಕಿಸಾನ್ ತರಕಾರಿ ಮಾರುಕಟ್ಟೆ ಮಾಡಿರುವ ಆರೋಪ ಸಾಭಿತಾದ ಹಿನ್ನೆಲೆಯಲ್ಲಿ ಬುಡಾ ಆ ಆದೇಶವನ್ನು ರದ್ದು ಮಾಡಿತ್ತು.

ಇದನ್ನು ಪ್ರಶ್ನಿಸಿದರೆ ಈ ಆದೇಶದ ವಿರುದ್ಧ ತಡೆಯಾಜ್ಞೆ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಖಾಸಗಿ ಮಾರುಕಟ್ಟೆಯ ವ್ಯಾಪಾರಿಗಳಿಗೆ ಹೈಕೋರ್ಟಿನ ಈ ಆದೇಶ ನಿರಾಸೆ ಮೂಡಿಸಿದೆ.