ಬೆಳಗಾವಿಯಲ್ಲಿ ಮುಗಿಲು ಮುಟ್ಟಿದ ಗಣೇಶ ಭಕ್ತರ ಭಕ್ತಿಭಾವ..
ಕಟ್ಟುನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಪಾಲಿಕೆ ಪೊಲೀಸ್ ಹಾಗೂ ಹೆಸ್ಕಾಂ ಸಿಬ್ಬಂದಿಗಳು.
ಬೆಳಗಾವಿ : ನಗರದಲ್ಲಿ ಎಲ್ಲಿ ನೋಡಿದರಲ್ಲಿ “ಗಣಪತಿ ಬಪ್ಪ ಮೊರಯಾ, ಪುಡಚಾ ವರ್ಷಿ ಲವಕರ ಯಾ” ಎನ್ನುವ ಘೋಷವಾಖ್ಯಗಳು ಮೊಳಗಿದ್ದು, ಬೆಳಗಾವಿ ಜನತೆಯ ಗಣೇಶ ವಿಸರ್ಜನೆಯ ವೇಳೆ ಆಕಾಶದತ್ತರಕ್ಕೆ ಭಕ್ತಿ ಭಾವವನ್ನು ಮೆರೆದಂತಿತ್ತು..
ಶನಿವಾರ ಬೆಳಿಗ್ಗೆಯಿಂದಲೇ ಸಾರ್ವಜನಿಕರು ತಮ್ಮ ಮನೆಗಳಲ್ಲಿ ಪ್ರತಿಷ್ಠಾಪನೆ ಮಾಡಿದಂತಹ ಹನ್ನೊಂದು ದಿನಗಳವರೆಗಿನ ಗಣೇಶ ವಿಸರ್ಜನೆಯ ಕಾರ್ಯದಲ್ಲಿ ಅತೀ ಉತ್ಸಾಹದಿಂದ, ಭಕ್ತಿ ಭಾವದಿಂದ ಭಾಗಿಯಾಗಿದ್ದು, ರಾತ್ರಿ ಒಂಬತ್ತರ ವರೆಗೂ ಮನೆಯಲ್ಲಿ ಕೂರಿಸಿದ ಸಿಕ್ಕ ಗಣಪತಿಗಳ ವಿಸರ್ಜನಾ ಕಾರ್ಯ ಮುಂದುವರೆದಿತ್ತು..

ತಮ್ಮ ಮನೆಯ ಅತಿಥಿ ದೇವನನ್ನು ಅತೀ ಖುಷಿಯಿಂದ, ಪ್ರಾರ್ಥನೆ ಮಾಡುತ್ತಾ, ಪಟಾಕಿ ಹೊಡೆಯುತ್ತಾ, ಜೈಘೋಷಗಳನ್ನು ಹಾಕುತ್ತಾ, ನೃತ್ಯ ಮಾಡುತ್ತಾ, ಶ್ರದ್ಧಾ ಭಕ್ತಿಯಿಂದ ಗಣೇಶನನ್ನು ಬೀಳ್ಕೊಡುಗೆ ಮಾಡುತ್ತಾ, ಮುಂದಿನ ವರ್ಷ ಬೇಗ ಬಾ ಎಂಬ ಕೋರಿಕೆಯ ಮೇರೆಗೆ ಚಪ್ಪಾಳೆ ತಟ್ಟುತ್ತಾ, ಹಾಡು ಹಾಡುತ್ತಾ ಗಣೇಶನನ್ನು ಕಳಿಸುವದನ್ನು ನೋಡಿದರೆ, ಭಕ್ತರ ಭಕ್ತಿಭಾವ ಆಕಾಶದೆತ್ತರಕ್ಕೆ ಚಿಮ್ಮಿತ್ತಿತ್ತು ಎಂಬ ಸನ್ನಿವೇಶ ನಿರ್ಮಾಣವಾಗಿತ್ತು.
ಇನ್ನು ನಗರದ ಅತೀ ಮುಖ್ಯ ವಿಷರ್ಜನೆಯ ಹೊಂಡಗಳಾದ (ಎರಡು ಹೊಂಡಗಳು) ಕಪಿಲೇಶ್ವರ ಮಂದಿರದ ಎರಡು ಹೊಂಡಗಳಲ್ಲಿ ಅತಿಯಾದ ಭಕ್ತರು ಬಂದು ಅಲ್ಲಿ ಗಣೇಶ ವಿಸರ್ಜನೆ ಮಾಡುವದು ಸಂಪ್ರದಾಯವಾಗಿದೆ, ಅಲ್ಲಿ ಮಹಾನಗರ ಪಾಲಿಕೆ, ಪೊಲೀಸ್ ಇಲಾಖೆ ಹಾಗೂ ಹೆಸ್ಕಾಂ ಸಿಬ್ಬಂದಿಗಳು ಅತೀ ಜವಾಬ್ದಾರಿಯಿಂದ ಕಾರ್ಯ ಮಾಡುತ್ತಿದ್ದು, ವಿಸರ್ಜನೆಗೆ ಬಂದ ಭಕ್ತರಿಗೆ ಸರಿಯಾಗಿ ನಿಯಮಾನುಸಾರ ಮಾರ್ಗಸೂಚಿಗಳನ್ನು ಹೇಳಿ, ಸುರಕ್ಷಿತವಾಗಿ ವಿಸರ್ಜನೆಗೆ ಅನುವು ಮಾಡಿಕೊಡುತ್ತಿದ್ದರು.

ಇದೇ ವೇಳೆ ಪಾಲಿಕೆ ಆಯುಕ್ತರಾದ ಶುಭ ಬಿ ಅವರು ಕಪಿಲೇಶ್ವರದ ಎರಡು ಹೊಂಡಗಳಿಗೆ ಬೇಟಿ ನೀಡಿ, ತಮ್ಮ ಸಿಬ್ಬಂದಿಗಳಿಗೆ ಸರಿಯಾದ ಮಾರ್ಗದರ್ಶನ ನೀಡಿ, ಎರಡು ವೇದಿಕೆಯಿಂದ ಧ್ವನಿವರ್ಧಕಗಳಿಂದ ಸಾರ್ವಜನಿಕರಿಗೆ ಸುರಕ್ಷಿತ ಸೂಚನೆಗಳನ್ನು ನೀಡಬೇಕೆಂದು ಹೇಳುತ್ತಾ, ಪ್ರತಿಯೊಬ್ಬ ಸಿಬ್ಬಂದಿಗಳು ತಮಗೆ ನೀಡಿದ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಬೇಕೆಂದು ಸೂಚನೆ
ನೀಡಿದರು.

ಇನ್ನು ಪೊಲೀಸ್ (ಬೆಳಗಾವಿ ನಗರ ಡಿಸಿಪಿ) ಅಧಿಕಾರಿ ಬರಮನ್ನಿ ಅವರು ಆಗಮಿಸಿ, ಪರಿಸ್ಥಿತಿಯನ್ನು ಅವಲೋಕಿಸಿದ್ದು, ತಮ್ಮ ಇಲಾಖಾ ಅಧಿಕಾರಿಗಳಿಗೆ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸುವಂತೆ ಸೂಚನೆ ನೀಡಿರುವ ಮಾಹಿತಿ ಇದೆ, ಇನ್ನು ಹೆಸ್ಕಾಂ ಅಧಿಕಾರಿ ಹಾಗೂ ಸಿಬ್ಬಂದಿಗಳು ಪ್ರತಿ ಗಂಟೆಗೊಮ್ಮೆ ಎಲ್ಲಾ ಕಡೆಗೆ ಸುತ್ತುತ್ತಾ, ಯಾವುದಾದರೂ ಸಮಸ್ಯೆಗಳು ಸಂಭವಿಸುತ್ತಿವೆಯಾ ಎಂದು ನೋಡಿಕೊಳ್ಳುತ್ತಾ, ಸಮಸ್ಯೆ ಉಂಟಾದರೆ ಅದರ ನಿರ್ವಹಣೆ ಮಾಡಲು ಎಲ್ಲಾ ರೀತಿಯಲ್ಲಿ ಸಿದ್ದರಾದ ಸ್ಥಿತಿಯಲ್ಲಿದ್ದರು.

ಇನ್ನು ರಾತ್ರಿ ಹತ್ತರ ನಂತರ ಸಾರ್ವಜನಿಕ ಗಣೇಶ ಮಂಡಳಿಗಳ ದೊಡ್ಡ ದೊಡ್ಡ ಗಣಪತಿಗಳು ಆಗಮಿಸುತ್ತಿದ್ದು, ಅವುಗಳ ವಿಸರ್ಜನಾ ಕಾರ್ಯಕ್ಕೆ ಎಲ್ಲಾ ಭಕ್ತಾದಿಗಳು ಅತೀ ಖುಷಿಯಿಂದ, ಸಂಭ್ರಮದಿಂದ ಭಾಗಿಯಾಗುತ್ತಿದ್ದರೆ, ಇತ್ತ ಈ ಇಲಾಖೆಗಳ ಸಿಬ್ಬಂದಿಗಳು ಕೂಡಾ ಅಷ್ಟೇ ಜವಾಬ್ದಾರಿಯಿಂದ, ಸುರಕ್ಷಿತವಾಗಿ ಗಣೇಶ ವಿಸರ್ಜನೆ ಕಾರ್ಯ ಪೂರ್ಣವಾಗಲಿ ಎಂದು ಕರ್ತವ್ಯ ನಿರತರಾಗಿದ್ದಾರೆ, ನಾಳೆ ಅಂದರೆ ರವಿವಾರ ಸಂಜೆವರೆಗೂ ಈ ವಿಸರ್ಜನಾ ಕಾರ್ಯ ನಡೆಯಬಹುದು ಎಂಬ ಮಾಹಿತಿಯಿದೆ.

ಈ ಸಂಭ್ರಮದಲ್ಲಿ ಒಂದು ಸೂತಕ ಎಂಬಂತೆ, ನಗರದ ಜಕ್ಕನಕೇರಿ ಹೊಂಡದಲ್ಲಿ ಗಣೇಶ ವಿಸರ್ಜನೆಯ ವೇಳೆ ಒಬ್ಬ ವ್ಯಕ್ತಿ ಮುಳುಗಿ ಅಸುನೀಗಿದ್ದಾನೆ ಎಂಬ ಮಾಹಿತಿಯೂ ಕೇಳಿಬಂದಿದೆ, ಏನೇ ಆಗಲಿ ಅತೀ ಭಕ್ತಿ, ಸಂಭ್ರಮ, ಸಡಗರದಿಂದ ಆಗಮಿಸಿದ ಗಣೇಶ ಅಷ್ಟೇ ಶಾಂತಿಯಿಂದ ವಿಸರ್ಜನೆಗೊಳ್ಳಲಿ ಎಂಬುದು ಭಕ್ತರ ಆಶಯವಾಗಿದೆ..
ವರದಿ ಪ್ರಕಾಶ್ ಬಸಪ್ಪ ಕುರಗುಂದ..