ಡಾ ಬಿ ಆರ್ ಅಂಬೇಡ್ಕರ ಶಕ್ತಿ ಸಂಘದ ಹೋರಾಟಕ್ಕೆ ಆನೆಬಲ..

ಡಾ ಬಿ ಆರ್ ಅಂಬೇಡ್ಕರ ಶಕ್ತಿ ಸಂಘದ ಹೋರಾಟಕ್ಕೆ ಆನೆಬಲ..

ಸಂಘದ ದೂರಿಗೆ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರ ಸಕಾರಾತ್ಮಕ ಸ್ಪಂದನೆ..

ಕೂಲಂಕುಷ ತನಿಖೆ ನಡೆಸಿ, ವರದಿ ನೀಡಲು ನೋಡಲ್ ಅಧಿಕಾರಿ ನೇಮಕ..

ಬೆಳಗಾವಿ : ಡಾ ಬಿ ಆರ್ ಅಂಬೇಡ್ಕರ ಶಕ್ತಿ ಸಂಘಟನೆಯಿಂದ ಜಂಟಿ ನಿರ್ದೇಶಕರ ಕಾರ್ಯಾಲಯ ಸಮಾಜ ಕಲ್ಯಾಣ ಇಲಾಖೆ ಬೆಳಗಾವಿಗೆ ಸಂಬಂಧಿಸಿದಂತೆ SCPSP/TSP ಕಾರ್ಯಕ್ರಮಗಳ ಅನುಷ್ಠಾನದ ವರದಿ ಸಲ್ಲಿಸುವಲ್ಲಿ ನಿರ್ಲಕ್ಷ್ಯ ತೋರಿದ ವಿವಿಧ ಇಲಾಖೆಗಳ ಅಧಿಕಾರಿಗಳ ಮೇಲೆ ವಿಚಾರಣೆ ಕೈಗೊಳ್ಳಬೇಕು ಎಂದು ಸಂಘಟನೆಯ ರಾಜ್ಯಾಧ್ಯಕ್ಷರಾದ ಲಕ್ಷ್ಮಣ ಕೋಲಕಾರ ಅವರು ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರ ಕಚೇರಿಗೆ ದೂರು ನೀಡಿದ್ದರು.

ಆದ ಕಾರಣ ಆಯುಕ್ತಾಲಯದಿಂದ ಸೂಕ್ತ ಕ್ರಮ ಕೈಗೊಳ್ಳುವ ಸಲುವಾಗಿ ಬೆಳಗಾವಿ ಜಿಲ್ಲೆಗೆ ನೋಡಲ್ ಅಧಿಕಾರಿಯನ್ನಾಗಿ ಶಿವಾನಂದ ಕುಂಬಾರ ಅವರನ್ನು ನೇಮಕ ಮಾಡಿ, ಆದೇಶ ಮಾಡಲಾಗಿದೆ.

ಇಷ್ಟೇ ಅಲ್ಲದೇ ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಗಳಿಂದ ಎಸ್ಸಿ ಎಸ್ಟಿ ಫಲಾನುಭವಿಗಳಿಗೆ ಸೌಲಭ್ಯ ನೀಡಿರುವ ವರದಿಯನ್ನು ಏಕೆ ನೀಡಿಲ್ಲ? ಜಿಲ್ಲಾ ಮಟ್ಟದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಅಂತಹ ವರದಿಗಳನ್ನು ಏಕೆ ಪಡೆದುಕೊಂಡಿಲ್ಲ ಎಂಬುದನ್ನು ಕೂಲಂಕುಷವಾಗಿ ತನಿಖೆ ಮಾಡಿ, ವರದಿಯನ್ನು ಪೂರಕ ದಾಖಲೆಗಳ ಮೂಲಕ ಆಯುಕ್ತರ ಕಚೇರಿಗೆ ಸಲ್ಲಿಸಲು ವಿಶೇಷ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದೆ.

ಪರಿಶಿಷ್ಟ ಸಮುದಾಯಗಳಿಗೆ ಸಿಗಬೇಕಾದ ನ್ಯಾಯವನ್ನು ಕೊಡಿಸುವ ಕಾರ್ಯಕ್ಕೆ ಸಕಾರಾತ್ಮಕವಾಗಿ ಸ್ಪಂದನೆ ನೀಡಿರುವ ಮಾನ್ಯ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರಿಗೆ ಅಂಬೇಡ್ಕರ ಶಕ್ತಿ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ಕೋಲಕಾರ ಅವರು ಹಾಗೂ ಸಂಘದ ಪದಾಧಿಕಾರಿಗಳು ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದ್ದಾರೆ.

ವರದಿ ಪ್ರಕಾಶ್ ಬಸಪ್ಪ ಕುರಗುಂದ..