ಬೆಳಗಾವಿ ಆಹಾರ ಮತ್ತು ನಾಗರಿಕ ಇಲಾಖೆಯ ಮಿಂಚಿನ ಕಾರ್ಯಾಚರಣೆ..
ಗೃಹೋಪಯೋಗಿ ಸಿಲಿಂಡರ್ ಬಳಸಿದ ಹೊಟೇಲಗೆ ಶಾಕ್ ನೀಡಿದ ಸಿಬ್ಬಂದಿಗಳು..
ಆಹಾರ ಇಲಾಖಾ ಅಧಿಕಾರಿಗಳ ಕರ್ತವ್ಯ ಪ್ರಜ್ಞೆಗೆ ಸಾರ್ವಜನಿಕರ ಮೆಚ್ಚುಗೆ..
ಬೆಳಗಾವಿ : ನಗರದ ಕೆಲ ಹೋಟೆಲ್ಗಳಲ್ಲಿ ಗೃಹೋಪಯೋಗಿ ಸಿಲಿಂಡರ್ ಗಳನ್ನು ಬಳಸುತ್ತಿರುವ ಬಗ್ಗೆ ಮಾಹಿತಿ ಪಡೆದುಕೊಂಡ ಬೆಳಗಾವಿಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಿಬ್ಬಂದಿಗಳು ಅಲ್ಲಿ ದಾಳಿ ನಡೆಸಿ ಅಕ್ರಮವಾಗಿ ಬಳಕೆ ಮಾಡುತ್ತಿದ್ದ ಎರಡು ಗ್ಯಾಸ್ ಸಿಲಿಂಡರ್ ಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲು ಮಾಡಿದ್ದಾರೆ.
ಬುಧವಾರ ನಗರದ ವಾರ್ಡ ಸಂಖ್ಯೆ 9ರಲ್ಲಿಯ ಪುಲಭಾಗಲ್ಲಿಯಲ್ಲಿರುವ “ದಿನೇಶ್ ಇಡ್ಲಿ ದೋಸೆ ಸೆಂಟರ್” ನಲ್ಲಿ ಇಲಾಖೆಯ ನಿಯಮ ಬಾಹಿರವಾಗಿ ಎರಡು ಗೃಹೋಪಯೋಗಿ ಸಿಲಿಂಡರ್ ಗಳನ್ನು ಬಳಕೆ ಮಾಡಿ, ತಮ್ಮ ವ್ಯಾಪಾರವನ್ನು ಮಾಡುತ್ತಿದ್ದ ಹೊಟೇಲ ಮಾಲೀಕರಿಗೆ ಬಿಸಿ ಮುಟ್ಟಿಸಿದ್ದಾರೆ. ಸಿಬ್ಬಂದಿಯವರು ಹೋಟೆಲಿಗೆ ಬೇಟಿ ನೀಡಿದಾಗ ಸಿಲಿಂಡರ್ ಹಚ್ಚಿದ್ದು ತಕ್ಷಣಕ್ಕೆ ಎರಡೂ ಸಿಲಿಂಡರ್ ಗಳನ್ನೂ ವಶಕ್ಕೆ ಪಡೆದ ಸಿಬ್ಬಂದಿಗಳು ಪ್ರಕರಣವನ್ನು ಕೂಡಾ ದಾಖಲಿಸಿದ್ದಾರೆ.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಿಬ್ಬಂದಿಗಳ ಈ ಕರ್ತವ್ಯಪ್ರಜ್ಞೆಗೆ ಸಾರ್ವಜನಿಕರು ಮೆಕಿಚಿಕೊಂಡಿದ್ದು, ಸಾರ್ವಜನಿಕರು ತಮ್ಮ ತಮ್ಮ ಮನೆಗಳಿಗೆ ಅಡುಗೆ ಸಲುವಾಗಿ ಉಪಯೋಗಿಸುವ ಅನಿಲವನ್ನು ಇಂತಹ ಹೋಟೆಲ್ ವ್ಯಾಪಾರಿಗಳು ತಮ್ಮ ಲಾಭಕ್ಕಾಗಿ ವಾಣಿಜ್ಯಕ್ಕಾಗಿ ಉಪಯೋಗ ಮಾಡುವದು ಖಂಡನೀಯ, ಇಂತಹ ವ್ಯಾಪಾರಿಗಳಿಗೆ ತಕ್ಕ ಬುದ್ದಿ ಕಲಿಸಿದ ಇಲಾಖೆಯವರ ಕಾರ್ಯ ಮೆಚ್ಚುವಂತಹದ್ದು ಎಂದಿದ್ದಾರೆ.
ಅದೇ ರೀತಿ ನಗರದಲ್ಲಿ ಇನ್ನೂ ಹಲವಾರು ಕಡೆಗಳಲ್ಲಿ ಹೋಟೆಲುಗಳಲ್ಲಿ ಇಂತಹ ಗೃಹೋಪಯೋಗಿ ಸಿಲಿಂಡರ್ ಬಳಸುವ ಕಟುಕರು ಇದ್ದಾರೆ, ಇದರಿಂದ ಸಾರ್ವಜನಿಕರಿಗೆ ಸಮಯಕ್ಕೆ ಸರಿಯಾಗಿ ಸಿಲಿಂಡರ್ ಗಳು ದೊರೆಯುತ್ತಿಲ್ಲ, ಆದಕಾರಣ ಆಹಾರ ಇಲಾಖೆಯ ಸಿಬ್ಬಂದಿಗಳು ಅಂತಲ್ಲಿ ಕೂಡಾ ಪರಿಶೀಲನೆಗಳನ್ನು ಮಾಡಿ, ಅವರ ಮೇಲೆಯೂ ಇಲಾಖೆಯ ಕ್ರಮಗಳನ್ನು ಕೈಗೊಳ್ಳಬೇಕು ಜೊತೆಗೆ ಇಂತವರಿಗೆ ಸಿಲಿಂಡರ್ ಪೂರೈಕೆ ಮಾಡಿದ ಏಜೆನ್ಸಿ ಅವರ ಮೇಲೂ ಕ್ರಮ ಆಗಬೇಕೆಂದು ಸಾರ್ವಜನಿಕರ ಮನವಿಯಾಗಿದೆ..
ಈ ದಾಳಿಯ ಸಂದರ್ಭದಲ್ಲಿ ಬೆಳಗಾವಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಿಬ್ಬಂದಿಗಳಾದ ಆಹಾರ ನಿರೀಕ್ಷಕರಾದ ಮನಿಯಾರ್, ಬಾಂಡಗೆ, ಗಣೇಶ, ಮತ್ತೊಬ್ಬ ಅಧಿಕಾರಿಯವರು ಭಾಗಿಯಾಗಿದ್ದರು.
ವರದಿ ಪ್ರಕಾಶ್ ಬಸಪ್ಪ ಕುರಗುಂದ..