ಆಶಾಕಿರಣ ಕಾರ್ಮಿಕರ ಹಾಗೂ ಮಹಿಳಾ ಕಲ್ಯಾಣ ಸಂಘದಿಂದ ದಸರಾ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ..

ಆಶಾಕಿರಣ ಕಾರ್ಮಿಕರ ಹಾಗೂ ಮಹಿಳಾ ಕಲ್ಯಾಣ ಸಂಘದಿಂದ ದಸರಾ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ..

ಮಹಿಳಾ ಕಲ್ಯಾಣ ಕಾರ್ಯಗಳಲ್ಲಿ ಮುಂಚೂಣಿ ಸ್ಥಾನ ಪಡೆಯುತ್ತಿರುವ ಸಂಘ.

ಸಂಘದ ಬಗ್ಗೆ ಗಣ್ಯರಿಂದ ಚಲನಚಿತ್ರ ಕಲಾವಿದರಿಂದ ಮೆಚ್ಚುಗೆ ನುಡಿಗಳು.

ಬೆಳಗಾವಿ : ಮಹಿಳಾ ಸಂಘಗಳು ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸಬೇಕು, ಸರ್ಕಾರದ ವಿವಿಧ ಸೌಲಭ್ಯಗಳು ಅವಶ್ಯಕವಿರುವ ಮಹಿಳೆಯರಿಗೆ ಲಭ್ಯವಾಗುವ ಕಾರ್ಯ ಮಾಡಬೇಕು, ಈ ನಿಟ್ಟಿನಲ್ಲಿ ಆಶಾಕಿರಣ ಸಂಸ್ಥೆ ಕಾರ್ಯ ಮಾಡುತ್ತಿರುವದು ಎಲ್ಲರಿಗೂ ಸಂತಸ ವಿಷಯ ಎಂದು ನಗರದ ಖ್ಯಾತ ಉದ್ಯಮಿ ಅನ್ನಾಸಾಹೇಬ ಬಂಗಾರಿ ಅವರು ಹೇಳಿದ್ದಾರೆ.

ರವಿವಾರ ನಗರದ ವಡಗಾವಿಯ ಸೋನಾರಗಲ್ಲಿಯ ಸಭಾಭವನದಲ್ಲಿ “ಆಶಾಕಿರಣ ಕಾರ್ಮಿಕರ ಹಾಗೂ ಮಹಿಳಾ ಕಲ್ಯಾಣ ಸಂಘದ” ವತಿಯಿಂದ ಆಯೋಜನೆಗೊಂಡ ದಸರಾ ಹಬ್ಬದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಆಶಾಕಿರಣ ಮಹಿಳಾ ಸಂಘದ ಅಧ್ಯಕ್ಷರಾದ ಭಾರತಿ ಡವಳೇ ಅವರು ಉತ್ತಮ ಕಾರ್ಯ ಮಾಡುತ್ತಿದ್ದಾರೆ, ಅವರ ಮೂಲಕ ಮಹಿಳೆಯರು ಮತ್ತಷ್ಟು ಸರ್ಕಾರಿ ಸೌಲಭಗಳನ್ನು ಪಡೆಯಬೇಕು, ಸರ್ಕಾರದ ವಿವಿಧ ಇಲಾಖೆಗಳಿಂದ ಮಹಿಳೆಯರಿಗಾಗಿ ಅನೇಕ ಯೋಜನೆಗಳಿವೆ, ಅವುಗಳ ಸದುಪಯೋಗ ಪಡೆಯಿರಿ ಎಂದರು.

ದಸರಾ ಹಬ್ಬದ ನಿಮಿತ್ತ ಆಶಾಕಿರಣ ಮಹಿಳಾ ಸಂಘದ ವತಿಯಿಂದ ಮಕ್ಕಳು ಹಾಗೂ ಮಹಿಳೆಯರಿಗಾಗಿ ಆಯೋಜನೆ ಮಾಡಿರುವ ಈ ಸಾಂಸ್ಕೃತಿಕ ಕಾರ್ಯಕ್ರಮ ತುಂಬಾ ಸೊಗಸಾಗಿದ್ದು, ನನ್ನನ್ನು ಕರೆಸಿ ಸತ್ಕರಿಸಿದ್ದಕ್ಕೆ ತುಂಬಾ ಧನ್ಯವಾದ ಎನ್ನುತ ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳನ್ನು ತಿಳಿಸಿದರು.

ಇನ್ನು ಸಂಘದ ಅಧ್ಯಕ್ಷರಾದ ಭಾರತಿ ಡವಳಿ ಅವರು ಮಾತನಾಡಿ, ನಮ್ಮ ಆಶಾಕಿರಣ ಮಹಿಳಾ ಸಂಘ ಪ್ರಾರಂಭವಾಗಿ ಕೆಲವೇ ತಿಂಗಳಾಗಿದ್ದು, ನಗರದ ಮಹಿಳೆಯರು ಇಸ್ಟೊಂದು ಆಸಕ್ತಿಯಿಂದ ಸಂಘದಲ್ಲಿ ಭಾಗಿಯಾಗಿ, ಮಹಿಳಾ ಪರವಾದ ಕಾರ್ಯಗಳಲ್ಲಿ ತೊಡಗುತ್ತಿರುವ ಸಂಗತಿ ತುಂಬಾ ಖುಷಿ ನೀಡುತ್ತದೆ, ಮುಂದೆ ಸಂಘ ಮತ್ತಷ್ಟು ಮಹಿಳಾ ಪರವಾದ ಕಾರ್ಯಗಳನ್ನು ಮಾಡುತ್ತಾ, ಮಹಿಳಾ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸುವ ಕಾರ್ಯಗಳನ್ನು ಮಾಡುತ್ತೇವೆ, ಸಂಘದ ಜೊತೆಗೆ ಇರುವ ಎಲ್ಲಾ ಮಹಿಳಾ ಮಣಿಗಳಿಗೆ ಧನ್ಯವಾದ ಎಂದರು.

ಇನ್ನು ಈ ಕಾರ್ಯಕ್ರಮದಲ್ಲಿ ಭಾಗಿಯಾದ “ಜೊತೆಯಾಗಿ ಹಿತವಾಗಿ” ಎಂಬ ಕನ್ನಡ ಚಿತ್ರದ ನಾಯಕ ನಾಯಕಿಯವರು ಮಾತನಾಡಿ, ಸಂಘದ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ನಿಮ್ಮ ಬೆಳಗಾವಿಯವರಾದ ನಾವು ನಾಯಕ ನಾಯಕಿಯಾಗಿ ನಟಿಸಿದ ಚಿತ್ರ ಪ್ರಕಾಶ್ ಚಿತ್ರಮಂದಿರದಲ್ಲಿ ಪ್ರದರ್ಶನ ಆಗುತ್ತಿದೆ, ತಾವು ಈ ಚಿತ್ರವನ್ನು ಕುಟುಂಬಸಮೇತರಾಗಿ ಹೋಗಿ ನೋಡಿ ನಮ್ಮನ್ನು ಬೆಂಬಲಿಸಬೇಕು, ಉತ್ತಮ ಕಥಾ ಹಂದರ ಇರುವ ನಮ್ಮ ಚಿತ್ರ ತಮಗೆ ಇಷ್ಟ ಆಗುತ್ತದೆ ಎಂದರು.

ಈ ಕಾರ್ಯಕ್ರಮದಲ್ಲಿ ಮಕ್ಕಳು ದೇಶದ ಮಹಾನಾಯಕರ, ಸ್ವತಂತ್ರ ಹೋರಾಟಗಾರರ, ಸಾಧುಸಂತರ, ದಾರ್ಶನಿಕರ, ವೀರ ವನಿತೆಯರು, ಸಾಧಕರ, ದೇವಾನುದೇವತೆಗಳ ವೇಷಧಾರಿಗಳಾಗಿ ಗಮನ ಸೆಳೆದಿದ್ದು, ವಿಶೇಷವಾದ ಹಾಡು ಹಾಗೂ ನೃತ್ಯಗಳ ಮೂಲಕ ಮಕ್ಕಳು ಹಾಗೂ ಮಹಿಳೆಯರು ಕಾರ್ಯಕ್ರಮದ ಮೆರಗನ್ನು ಹೆಚ್ಚಿಸಿದರು.

ವರದಿ ಪ್ರಕಾಶ್ ಬಸಪ್ಪ ಕುರಗುಂದ..