ಹುಕ್ಕೇರಿ ಚುನಾವಣೆಯ ಸೋಲನ್ನು ಒಪ್ಪಿಕೊಳ್ಳುತ್ತೇವೆ..

ಹುಕ್ಕೇರಿ ಚುನಾವಣೆಯ ಸೋಲನ್ನು ಒಪ್ಪಿಕೊಳ್ಳುತ್ತೇವೆ..

ವಿರೋಧಿಗಳಿಗೆ ಆಗಾಗ ಸಂಭ್ರಮಿಸುವ ಅವಕಾಶ ನೀಡಬೇಕು..

ಅದರಿಂದ ನಮಗೂ, ನಮ್ಮವರಿಗೂ ಸ್ವಲ್ಪ ಜಾಗೃತಿ ಇರುತ್ತದೆ..

ಸಚಿವ ಸತೀಶ ಜಾರಕಿಹೊಳಿ..

ಬೆಳಗಾವಿ : ಹುಕ್ಕೇರಿಯ ವಿದ್ಯುತ್ ಸಹಕಾರಿ ಸಂಘದ ಚುನಾವಣೆಯ ಸೋಲಿನಿಂದ ಜಿಲ್ಲೆಯಲ್ಲಿ ತಮ್ಮ ವಿರೋಧಿಗಳು ಸಂಭ್ರಮಿಸುತ್ತಿದ್ದಾರೆ ಎಂಬ ಪ್ರಶ್ನೆಗೆ ಖಡಕ್ ಉತ್ತರ ನೀಡಿದ ಸಚಿವ ಸತೀಶ ಜಾರಕಿಹೊಳಿ ಅವರು, ಇಂತಹ ಚುನಾವಣೆಗಳ ಸೋಲಿನಿಂದ ನಮ್ಮ ವಿರೋಧಿಗಳು ಸಂಭ್ರಮಿಸಲಿ ಬಿಡಿ, ಆಗಾಗ ಅವರಿಗೂ ಇಂತಹ ಅವಕಾಶ ಬೇಕು, ಇದರಿಂದ ನಾವು ಮತ್ತು ನಮ್ಮವರು ಜಾಗೃತರಾಗಿರುವಂತೆ ಆಗುತ್ತದೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.

ನಗರದ ಕಾಂಗ್ರೆಸ್‌ ಭವನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹುಕ್ಕೇರಿ ವಿದ್ಯುತ್‌ ಸಹಕಾರಿ ಸಂಘದ ಚುನಾವಣೆಯಲ್ಲಿ ನಮ್ಮ ಪ್ರಯತ್ನ ನಾವು ಮಾಡಿದೇವೆ, ಆದರೆ ಬೇರೆ ಬೇರೆ ಕಾರಣಗಳಿಂದ ನಾವು ಸೋತಿದ್ದೇವೆ. ಸೋಲು ಸೋಲೆ, ನಮ್ಮ ಹತ್ತಿರ ಹೇಳಲಿಕ್ಕೆ ಸಾಕಷ್ಟು ಕಾರಣವಿದ್ದರೂ, ಒಂದು ಮತದಿಂದ ಸೋತರು ಅದು ಸೋಲೆ ಎಂದು ಒಪ್ಪಿಕೊಳ್ಳಬೇಕಾಗುತ್ತಿದೆ ಎಂದು ಹೇಳಿದರು.

ನಮ್ಮ ಸೋಲಿಗೆ ಪ್ರಮುಖ ಕಾರಣವೆನೆಂದರೆ ಕೆಲವು ಕಡೆ ನಮ್ಮ ಮತಗಳು ರಿಜಕ್ಟ್‌ ಆಗಿವೆ. 9 ಮತ ಹಾಕುವಲ್ಲಿ 10 ಮತ ಹಾಕಿದ್ದಾರೆ. ಕೆಲವು ಕಡೆ 5 ಸಾವಿರ ಹಾಗೂ ಇನ್ನೊಂದು ಕಡೆ 8 ಸಾವಿರ ಮತಗಳು ರಿಜಕ್ಟ್‌ ಆಗಿವೆ. ನಾವು ಅನೇಕ ಜನರಲ್‌ ಚುನಾವಣೆ ಮಾಡಿದ್ದೇವೆ. ಈಗ ಹುಕ್ಕೇರಿಯಲ್ಲಿ ನಡೆದ ವಿದ್ಯುತ್‌ ಸಹಕಾರಿ ಚುನಾವಣೆ ನಮಗೆ ಹೊಸದಾಗಿದ್ದು, ಎಷ್ಟು ಪ್ರಯತ್ನ ಮಾಡಬೇಕೋ ಅಷ್ಟು ಪ್ರಯತ್ನ ನಮ್ಮ ಕಡೆಯಿಂದ ಮಾಡಿದ್ದೇವೆ. ನಾವು ಸೈಜೆಬಲ್‌ 12 ಸಾವಿರ ಮತಗಳನ್ನು ಪಡೆದಿದ್ದೇವೆ. ನಮ್ಮ ವಿರೋಧಿ ಬಣ 20 ಸಾವಿರ ಮತಗಳನ್ನು ಪಡೆದುಕೊಂಡಿದೆ ಎಂದರು.

ನಾವು ಗುರಿಯಿಟ್ಟಕೊಂಡಿದ ಹಂತವನ್ನು ನಾವು ತಲಪಿದ್ದೇವೆ. ಮತದಾರರು ತಪ್ಪು ಮತಗಳು ಹಾಕಿದ್ದರಿಂದ ನಮ್ಮಗೆ ಹಿನ್ನಡೆಯಾಗಿದೆ. ಅಲ್ಲದೇ ನಮ್ಮ ಕಣದಲ್ಲಿರುವ ಅಭ್ಯರ್ಥಿಗಳು ಹಾಗೂ ಕಾರ್ಯಕರ್ತರು ಸರಿಯಾದ ರೀತಿ ಮತದಾರರ ಮನ ಮುಟ್ಟಿ ಮನವೊಲಿಸಲು ಸಾಧ್ಯವಾಗದರಿಂದ ನಮಗೆ ಈ ಚುನಾವಣೆಯಲ್ಲಿ ಸೋಲಾಗಿದೆ ಎಂದರು.

ಸೋಲಿನಿಂದ ಗೆಲುವು ಆಗೆ ಆಗುತ್ತಿದೆ: ನಮ್ಮ ವಿರೋಧಿಗಳ ಬಣ 30 ವರ್ಷಗಳಿಂದ ರಾಜಕಾರಣ ಮಾಡಿ 20 ಸಾವಿರ ಮತಗಳನ್ನು ಪಡೆದಿದ್ದಾರೆ. ಆದರೆ ನಾವು ಬರಿ 3 ತಿಂಗಳ ಪ್ರಚಾರ ಮಾಡಿ 12 ಸಾವಿರ ಮತಗಳನ್ನು ಪಡೆದಿದೇವೆ. ನಾವು ಎಷ್ಟು ಗುರಿ ಮುಟ್ಟಬೇಕು ಅಷ್ಟು ಗುರಿ ತಲುಪಿದ್ದೇವೆ. ಸೋಲು-ಗೆಲುವು ಅವುಗಳನ್ನು ಸಮನಾಗಿ ಸ್ವೀಕರಿಸುವ ಮನೋಭಾವ ನಮ್ಮದಾಗಬೇಕು. ಸೋಲು ಸಂಭವಿಸಿದಾಗ ಕುಗ್ಗಬಾರದು. ಹಾಗೇಯೇ ಹಿಂಜರಿಯಬಾರದು. ಅದೇ ರೀತಿಯಾಗಿ ಸೋಲೇ ಗೆಲುವಿನ ಮೊದಲು ಮೆಟ್ಟಿಲವೆಂದು ಮುನ್ನಡೆಯಬೇಕು ಎಂದು ಸಚಿವರು ಹೇಳಿದರು.

ಈ ಚುನಾವಣೆ ಜಿಲ್ಲೆಗೆ ಸಂಬಂಧಿಸುವದಿಲ್ಲ:
ಹುಕ್ಖೇರಿಯಲ್ಲಿ ನಡೆದ ಈ ಚುನಾವಣೆ ಸೋಲು ಅನ್ನಬಹುದು ಅಷ್ಟೆ ಬಿಟ್ಟರೆ ಇದು ಬೆಳಗಾವಿ ಜಿಲ್ಲೆಗೆ ಸಂಬಂಧವಿಲ್ಲ. ನಾವು ನಮ್ಮ ಕಾರ್ಯಕರ್ತರ ರಕ್ಷಣೆಗೋಸ್ಕರ ಪ್ರಚಾರ ಮಾಡಿದ್ದೇವೆ ಅಷ್ಟೆ, ನಮಗೆ ಒಂದಿಷ್ಟು ಜನ ಕೈ ಜೋಡಿಸಬೇಕಾಗಿತ್ತು. ಜೋಡಿಸದ ಕಾರಣ ನಮಗೆ ಈ ಚುನಾವಣೆ ಸೋಲಾಗಿದೆ. ಒಟ್ಟಾರೆ ನಮ್ಮ ಮತಗಳನ್ನು ನಾವು ಹಾಕಿಸಿಕೊಳ್ಳುವಲ್ಲಿ ನಾವು ವಿಫಲರಾಗಿದ್ದೇವೆ.

ಚುನಾವಣೆ ಪ್ರಚಾರದಲ್ಲಿ ಮಾತಿನ ಮೇಲೆ ಹಿಡಿತ ಇರಬೇಕು. ತಮ್ಮ ತಮ್ಮ ಘನತೆಗೆ ತಕ್ಕ ಹಾಗೇ ಮಾತನಾಡಬೇಕು. ರಮೇಶ ಕತ್ತಿ ಅವರು ಸಹ 1 ಬಾರಿ ಎಂಪಿ ಯಾಗಿದ್ಧಾರೆ, ಅವರು ಎಲ್ಲವನ್ನು ನೋಡಿದ್ದಾರೆ. ಜನರ ಮುಂದೆ ಮಾತನಾಡುವಾಗ ಮಾತಿನಲ್ಲಿ ಹಿಡಿತ ಇರಬೇಕು ಎಂದ ಅವರು, ಯಮಕನಮರಡಿ ಹುಕ್ಕೇರಿಯ ಒಂದು ಭಾಗವಾಗಿದ್ದರಿಂದ ನಾವು ಯಾವಾಗಲೂ ಈ ಭಾಗದಲ್ಲಿ ಗಮನ ಹರಸಬೇಕಾಗುತ್ತದೆ ಎಂದರು.

ಈ ವೇಳೆ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ರಾಜು ಸೇಠ್‌, ಕಿತ್ತೂರು ಶಾಸಕ ಬಾಬಾಸಾಹೇಬ್‌ ಪಾಟೀಲ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಸೇರಿದಂತೆ ಇತರರು ಇದ್ದರು.