ನಾಡಿನ ಸಮಸ್ತ ಗಣ್ಯರಿಗೆ ನವರಾತ್ರಿ ಹಾಗೂ ವಿಜಯದಶಮಿ ಶುಭಾಶಯ ಕೋರಿದ ಬಿಜೆಪಿ ಗಣ್ಯರು..
ಈ ದಸರಾ ಹಬ್ಬ ನಾಡಿನ ಜನತೆಗೆ ಸುಖ ಶಾಂತಿ ಸಮೃದ್ಧಿ ನೀಡಿ ಕಾಪಾಡಲಿ..
ಕಿರಣ ಜಾಧವ, ಬಿಜೆಪಿ ಪ್ರಮುಖರು ಬೆಳಗಾವಿ..
ಬೆಳಗಾವಿ : ಬಿಜೆಪಿ ಪಕ್ಷದ ಮುಖಂಡರಾದ ಕಿರಣ ಜಾಧವ ಅವರು ನಾಡಿನ ಹಾಗೂ ಜಿಲ್ಲೆಯ ಜನತೆಗೆ ವಿಜಯದ ಸಂಕೇತವಾದ ದಸರಾ ಹಬ್ಬದ ಶುಭಾಶಯಗಳನ್ನು ತಿಳಿಸಿ, ಈ ಹಬ್ಬವು ಸರ್ವರ ಬಾಳಲ್ಲಿ ಸುಖ ಶಾಂತಿ, ಸಮೃದ್ಧಿ ನೀಡಲೆಂದು ಹಾರೈಸಿದ್ದಾರೆ..
ನವರಾತ್ರಿ ಪ್ರಾರಂಭವಾದ ಘಟಸ್ಥಾಪದ ಮೊದಲ ದಿನದಿಂದಲೂ ಜನತೆಗೆ ಶುಭಕೋರುತ್ತ ಬಂದಿರುವ ಈ ಗಣ್ಯರು, ಮೊದಲನೇ ದಿನವಾದ ಶೈಲಪುತ್ರಿಯ ಆರಾಧನೆ, ಬ್ರಹ್ಮಚಾರಿಣಿ ದೇವಿಯ ಆರಾಧನೆ, ಚಂದ್ರಗಾಂತಾ, ಮಾ ಖುಷ್ಮಂದಾ, ಸ್ಕಂದಮಾತಾ, ಕಾತ್ಯಾಯನಿ, ಮಾ ಕಾಲರಾತ್ರಿ, ಮಹಾಗೌರಿ, ಮಾ ಸಿದ್ದಿದಾತ್ರಿ, ಎಂಬ ನವ ಮಾತೆಯರ ಆರಾಧನಾ ಶುಭಾಶಯ ತಿಳಿಸುತ್ತಾ ದಶಮಿಯಂದು ನಾಡಿನ ಜನತೆಗೆ ದಸರಾ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.

ರಾವಣನ ದುಷ್ಟತನವನ್ನು ಸುಟ್ಟು ಹಾಕಿ, ಸೋಲಿಸಿ, ಶ್ರೀರಾಮನ ಒಳ್ಳೆಯತನದ ಗೆಲುವನ್ನು, ರಾಮನ ವಿಜಯವನ್ನು ನೆನಪಿಸುವ, ಒಳ್ಳೆಯತನದಿಂದ ದುಷ್ಟರನ್ನು ಸಂಹರಿಸುವ ಸಂಕೇತವಾದ ಈ ಹಬ್ಬದ ಮೂಲಕ ಸಮಾಜದಲ್ಲಿ ಒಳ್ಳೆಯದಕ್ಕೆ ವಿಜಯವಾಗಲಿ ಎಂದು ಆಶಿಸಿ, ಸರ್ವಜನತೆಗೆ ದಸರಾ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ..
ವರದಿ ಪ್ರಕಾಶ್ ಬಸಪ್ಪ ಕುರಗುಂದ.