ನಾಯಕರ ನಾಡು ತುಮ್ಮರಗುದ್ದಿಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ..

ನಾಯಕರ ನಾಡು ತುಮ್ಮರಗುದ್ದಿಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ..

ಸಮುದಾಯದ ಗುರುಹಿರಿಯರು, ಪ್ರಮುಖರು, ಯುವಸಮೂಹ ಭಾಗಿ..

ಬೆಳಗಾವಿ : ಮಂಗಳವಾರ ಅಕ್ಟೋಬರ್ 7ರಂದು ಸಿಗಿಹುಣ್ಣಿಮೆಯ ವಿಶೇಷ ದಿನದಂದು, ಬೆಳಗಾವಿ ಸಮೀಪದ ನಾಯಕರ ನಾಡು ಎಂದೇ ಹೆಸರಾದ ತುಮ್ಮರಗುದ್ದಿಯಲ್ಲಿ, ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಶೃದ್ದಾ ಭಕ್ತಿಯಿಂದ ಆಚರಣೆ ಮಾಡಲಾಗಿದೆ..

ಗ್ರಾಮದ, ಪವರ್ ಸ್ಟಾರ್ ಪುನೀತ್ ರಾಜಕುಮಾರ ಬಸ ನಿಲ್ದಾಣದ ಹತ್ತಿರ ಇರುವ ಭವ್ಯವಾದ ವಾಲ್ಮೀಕಿ ಪ್ರತಿಮೆಗೆ ಬೆಳಿಗ್ಗೆಯಿಂದಲೇ ಅಲಂಕರಿಸಿ, ಪೂಜಾ ವಿಧಿವಿಧಾನಗಳನ್ನು ನೆರವೇರಿಸಿ, ಭಕ್ತಿ ಭಾವದಿಂದ ಸಮುದಾಯದ ಎಲ್ಲಾ ಜನರು ಆದಿಕವಿಗೆ ತಮ್ಮ ಭಕ್ತಿಭಾವದ ನಮನಗಳನ್ನು ಅರ್ಪಿಸಿದರು..

ತುಮ್ಮರಗುದ್ದಿಯ ಸುತ್ತಮುತ್ತಲಿನ ಗ್ರಾಮದ ಗುರು ಹಿರಿಯರು, ಗ್ರಾಮದ ಹಿರಿಯರು, ಮಹಿಳೆಯರು, ಪ್ರಮುಖರು, ಯುವಕರು, ಮಕ್ಕಳು ಸೇರಿದಂತೆ ಎಲ್ಲರೂ ಭಾಗಿಯಾಗಿ ಅತೀ ಉತ್ಸಾಹದಿಂದ ಬುಡಕಟ್ಟು ಜನಾಂಗದ ಪ್ರಥಮ ಸರಸ್ವತಿ ಪುತ್ರ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಣೆ ಮಾಡಿದ್ದಾರೆ.

ಸಮುದಾಯದ ಪ್ರಮುಖರು ಹಾಗೂ ಗ್ರಾಮ ಪಂಚಾಯತಿಯ ಸದಸ್ಯರಾದ ಶೇಖರ್ ಕಾಲೇರಿ ಅವರ ಉಸ್ತುವಾರಿಯಲ್ಲಿ ಜರುಗಿದ ಈ ಜಯಂತಿಯಲ್ಲಿ ಊರಿನ ವಿದ್ಯಾರ್ಥಿಗಳ ಉತ್ತಮ ಭವಿಷ್ಯ ರೂಪಿಸುವ ಕಾರ್ಯದಲ್ಲಿ ಉತ್ತಮ ವೃತ್ತಿಪರತೆ ಮೆರೆದ ಶಿಕ್ಷಕರಿಗೆ ಸನ್ಮಾನವನ್ನು ಮಾಡಲಾಗಿದ್ದು, ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಿದ್ದರೆ..

ವರದಿ ಪ್ರಕಾಶ್ ಬಸಪ್ಪ ಕುರಗುಂದ..