ಬೆಳಗಾವಿಯಲ್ಲಿ ಕರವೇಯಿಂದ ಕನ್ನಡ ದೀಕ್ಷೆ ಪ್ರತಿಜ್ಞಾ ಸ್ವೀಕಾರ ಸಮಾರಂಭ.
ಗಡಿ ನೆಲದಲ್ಲಿ ಕನ್ನಡ ಡಿಂಡಿಮ ಮೊಳಗಿಸಿದ ಕರವೇ..
ನಾಡು ನುಡಿಯ ರಕ್ಷಣೆಯಲ್ಲಿ ಕರವೇ ಮೇಲೆ ಕೆನ್ನಡಿಗರ ನಂಬಿಕೆ ಇದೆ..
ಟಿ ಎ ನಾರಾಯಣಗೌಡ, ರಾಜ್ಯಾಧ್ಯಕ್ಷರು ಕರವೇ..
ಬೆಳಗಾವಿ : ನಾಡು ನುಡಿ, ನೆಲ ಜಲ, ಭಾಷೆ ಸಂಸ್ಕೃತಿಗಳ ರಕ್ಷಣೆಯಲ್ಲಿ ಹಾಗೂ ರಾಜ್ಯದ ಯಾವುದೇ ಸಮಸ್ಯೆಯಲ್ಲಿ ಇಡೀ ರಾಜ್ಯದ ಕೋಟ್ಯಾನು ಕೋಟಿ ಕನ್ನಡಿಗರು ಕರ್ನಾಟಕ ರಕ್ಷಣಾ ವೇದಿಕೆಯ ಮೇಲೆ ನಂಬಿಕೆ ಇಟ್ಟಿದ್ದಾರೆ, ಯಾವ ರಾಜಕಾರಣಿಗಳ ಮೇಲೇಯೂ ಇಲ್ಲದ ದೊಡ್ಡ ನಂಬಿಕೆ ನಮ್ಮ ಮೇಲಿದೆ, ಕರವೇ ನಮ್ಮ ಜೊತೆಗಿದೆ ಎಂಬ ನಂಬಿಕೆ ಕನ್ನಡಿಗರದ್ದು ಆಗಿದೆ, ಆ ನಂಬಿಕೆಯಿಂದಲೇ ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಕನ್ನಡ ದೀಕ್ಷಾ ಪ್ರತಿಜ್ಞಾ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ ಎಂದು ಕರವೇ ರಾಜ್ಯಾಧ್ಯಕ್ಷ ಟಿ ಎನ್ ನಾರಾಯಣಗೌಡರು ಹೇಳಿದ್ದಾರೆ.

ಅಕ್ಟೋಬರ್ 12ರ ಭಾನುವಾರದಂದು ನಗರದ ಗಾಂಧಿಭವನದಲ್ಲಿ ನಡೆದ ಕನ್ನಡ ದೀಕ್ಷಾ ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕರ್ನಾಟಕ ರಕ್ಷಣಾ ವೇದಿಕೆ ಮೇಲೆ ಕನ್ನಡಿಗರ ಅಪಾರ ನಂಬಿಕೆ ಇದ್ದು, ಕನ್ನಡಿಗರ ನಂಬಿಕೆ ಉಳಿಸಿಕೊಂಡು ಹೋಗುವಂತಹ ಕಾರ್ಯ ಕರವೇ ಹಿಂದೆ ಮಾಡುತ್ತಾ ಬಂದಿದ್ದು ಮುಂದೆಯೂ ಮಾಡುತ್ತದೆ ಎಂದಿದ್ದಾರೆ.

ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ, ಬೆಳಗಾವಿಗೆ ನಾನು ಹೊರಟೆ ಎಂದರೆ ನನಗೆ ಹಾಗೂ ಎಲ್ಲರಿಗೂ ಎಲ್ಲಿಲ್ಲದ ಉತ್ಸಾಹ, ಇದು ನಮ್ಮ ಬೆಳಗಾವಿ, ಇದು ನಮ್ಮ ಬೆಳಗಾವಿ ಎಂಬ ಘೋಷಣೆಯನ್ನು ನೆರೆದ ಕಾರ್ಯಕರ್ತರಿಂದ ಕೂಗಿಸಿದರು, ವೇದಿಕೆ ಮೇಲಿದ್ದ ಹುಕ್ಕೇರಿ ಹಾಗೂ ಮತ್ತೊರ್ವ ಮಠಾಧಿಶರ ಕನ್ನಡ ಪ್ರಮದ ಬಗ್ಗೆ ಗುಣಗಾನ ಮಾಡಿದ್ದು, ಇವರು ನಿಜವಾದ ಕನ್ನಡದ ಜಗದ್ಗುರುಗಳು, ಇಂತಹ ಪೂಜ್ಯರ ಪಾದಕಮಲಗಳಿಗೆ ನನ್ನ ಕೋಟಿ ಕೋಟಿ ನಮಸ್ಕಾರಗಳು ಎಂದರು.

ನಾನು ಅಂದು ನೋಡಿದ ಬೆಳಗಾವಿಯಲ್ಲಿ ಒಂದು ಕನ್ನಡ ಧ್ವಜ ಹಾರಿಸುವದು ತುಂಬಾ ಕಷ್ಟದ ಕೆಲಸವಾಗಿತ್ತು, ಆದರೆ ಇಂದು ಬೆಳಗಾವಿಯಲ್ಲಿ ಲಕ್ಷಾಂತರ ಕನ್ನಡ ಬಾವುಟ ಹಾರಾಡುತ್ತವೆ ಎಂದರೆ, ಅದು ನಿಮ್ಮಂತ ಕನ್ನಡಿಗರ ಕೇಚ್ಛೆದೆಯ ಹುಲಿಗಳಿಂದ ಈ ಹುಲಿಗಳಿಂದ ಕನ್ನಡ ಭಾವುಟ ಎಲ್ಲಿಯಾದರೂ ಹಾರಾಡುತ್ತದೆ ಎಂದರು.
ನಾನು ಸುಮಾರು ದಿವಸಗಳಿಂದ ಈ ಕಾರ್ಯಕ್ರಮದ ಬಗ್ಗೆ ಹೇಳಿದ್ದೆ, ಈ ಕನ್ನಡ ದೀಕ್ಷಾ ಸ್ವೀಕಾರ ಕಾರ್ಯಕ್ರಮ ನಮಗೆ ಬೇಕಾಗಿತ್ತು, ಈ ನೆಲದ ಯುವಶಕ್ತಿಗೆ ಅವರ ರಕ್ತನಾಡಿಗಳಲ್ಲಿ ಕನ್ನಡದ ಕಿಚ್ಚನ್ನ, ಕನ್ನಡದ ಸ್ವಾಭಿಮಾನದ ಹುಚ್ಚನ್ನ, ಕನ್ನಡದ ಕಾಳಜಿಯನ್ನ, ಕನ್ನಡದ ಸಂಭ್ರಮ, ಸಡಗರವನ್ನ ಈ ರೀತಿಯಲ್ಲಿ ನಾವು ತುಂಬಬೇಕಾಗಿದ್ದು ಅದಕ್ಕೆ ಇಂತಹ ಕಾರ್ಯಕ್ರಮಗಳ ಅವಶ್ಯಕತೆ ಇದೆ ಎಂದಿದ್ದಾರೆ..

ಇನ್ನು ನವೆಂಬರ್ 1ರ ರಾಜ್ಯೋತ್ಸವದ ದಿನದಂದು ಎಂಇಎಸ್ ನವರು ಕರಾಳ ದಿನ ಆಚರಿಸಲು ಬಿಡಬೇಡಿ, ಅಂತವರನ್ನು ಸುಮ್ಮನ್ನೆ ಬಿಡಬೇಡಿ, ಮುಂದೆ ಏನಾದರೂ ನಾನಿದೀನಿ, ಅವರಿಗೆ ಬೇರೆ ಭಾಷೆಯ ಬಗ್ಗೆ ಕಾಳಜಿ ಇದ್ದರೆ ಅಲ್ಲಿಯೇ ಹೋಗಿ ಬದುಕಲಿ, ಕನ್ನಡಿಗರಾಗಿ ಇಲ್ಲಿ ಇರಬೇಕು, ಇಲ್ಲವಾದರೆ ಉಚಿತ ಬಸ್ ವ್ಯವಸ್ಥೆ ಮಾಡುತ್ತೇವೆ ಅಲ್ಲಿಯೇ ಹೋಗಲಿ ಎಂದರು. ನಾನು ರಾಜಕಾರಣಿ ಅಲ್ಲಾ, ನನಗೆ ಓಟ್ ಬ್ಯಾಂಕ ಬೇಕಿಲ್ಲ, ನನಗೆ ಕನ್ನಡ ಹಾಗೂ ನನ್ನ ಕನ್ನಡಿಗರು ಅಷ್ಟೇ ಮುಖ್ಯ ಎಂದರು.

ಈ ಕಾರ್ಯಕ್ರಮದಲ್ಲಿ ಸುಮಾರು ಎರಡು ಸಾವಿರ ಕಾರ್ಯಕರ್ತರಿಗೆ ಕನ್ನಡ ದೀಕ್ಷಾ ಪ್ರತಿಜ್ಞೆ ಮಾಡಿದ್ದು, ಹುಕ್ಕೇರಿ ಮಠದ ಚಂದ್ರಶೇಖರ ಶಿವಾಚಾರ್ಯ ಶ್ರೀಗಳು, ಅಥಣಿ ಮಠದ ಪ್ರಭು ಚನ್ನಬಸವ ಸ್ವಾಮಿಗಳು, ಬೆಳಗಾವಿ ಡಿಸಿಸಿ ಬ್ಯಾಂಕ ನಿರ್ದೇಶಕರಾಗಿ ಆಯ್ಕೆಯಾದ ರಾಹುಲ್ ಜಾರಕಿಹೊಳಿ, ಕರವೇ ರಾಜ್ಯ ಸಂಚಾಲಕರಾದ ಸುರೇಶ ಗವಣ್ಣವರ, ಕರವೇ ಬೆಳಗಾವಿ ಜಿಲ್ಲಾಧ್ಯಕ್ಷರಾದ ದೀಪಕ ಗುಡಗನಟ್ಟಿ, ಕರವೇ ರಾಜ್ಯಮಟ್ಟದ ಮಹಿಳಾ ಪದಾಧಿಕಾರಿಗಳು, ವಿವಿಧ ಜಿಲ್ಲಾ ಅಧುಕ್ಷರು, ತಾಲೂಕು ಅಧ್ಯಕ್ಷರುಗಳು, ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು..

ವರದಿ ಪ್ರಕಾಶ ಬಸಪ್ಪ ಕುರಗುಂದ.