ಬಿರುಬಿಸಿಲ ಲೆಕ್ಕಿಸದೇ ಭಾವನಾತ್ಮಕ ಆತ್ಮೀಯತೆಗೆ ಸಾಕ್ಷಿಯಾದ ಪಾಲಿಕೆ ಅಧಿಕಾರಿಗಳು..
ಉಪ ಆಯುಕ್ತರಿಗೆ ಸ್ನೇಹಮಯ ಶುಭಾಶಯ ಕೋರಿದ ಮತ್ತಿಬ್ಬ ಉಪ ಆಯುಕ್ತರು..
ಬೆಳಗಾವಿ : ಸರ್ಕಾರದ ಯಾವುದೇ ಇಲಾಖೆ ಆಗಿರಲಿ ಅಧಿಕಾರಿ ಹಾಗೂ ಸಿಬ್ಬಂದಿಗಳ ಮಧ್ಯೆ ನಾವೆಲ್ಲರೂ ಒಂದೇ ಎಂಬ ಭಾವನೆ ಇದ್ದರೆ, ಎಂತಹ ಸಮಸ್ಯೆಯನ್ನು ಪರಿಹರಿಸಿ, ಜನಸೇವೆಯಲ್ಲಿ ಸಾಧನೆ ಮಾಡಿ ಇಲಾಖೆಗೂ ಹಾಗೂ ತಮಗೂ ಉತ್ತಮ ಹೆಸರು ಪಡೆಯಬಹುದು ಎಂಬ ಮಾತಿದೆ..
ಅದೇ ರೀತಿಯ ಒಂದು ಸುಂದರ ದೃಶ್ಯ ಇಂದು ನಮ್ಮ ಬೆಳಗಾವಿಯ ಮಹಾನಗರ ಪಾಲಿಕೆಯ ಎದುರಲ್ಲಿ ಜರುಗಿದ್ದು, ನೋಡುಗರಿಗೆ ಸಂತಸದ ಭಾವವನ್ನು ಉಂಟು ಮಾಡಿದೆ, ಅದು ಮದ್ಯಾಹ್ನ ಸುಮಾರು 12-30ರ ಸುಡು ಬಿಸಿಲಿನಲ್ಲಿ ಉಪ ಆಯುಕ್ತರು ಅಭಿವೃದ್ಧಿ, ಉಪ ಆಯುಕ್ತರು ಆಡಳಿತ, ಉಪ ಆಯುಕ್ತರು ಕಂದಾಯ, ವಲಯ ಆಯುಕ್ತರು ಕಂದಾಯ ಹಾಗೂ ಪಾಲಿಕೆಯ ಇತರ ವಿಭಾಗಗಳ ಸಿಬ್ಬಂದಿಗಳು ಸಂತಸದ ಕ್ಷಣದಲ್ಲಿ ಭಾಗಿಯಾಗಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ..
ಇಂದು, ಪಾಲಿಕೆಯ (ಅಭಿವೃದ್ಧಿ) ಉಪ ಆಯುಕ್ತರಾದ ಲಕ್ಷ್ಮಿ ನಿಪ್ಪಾಣಿಕರ ಅವರ ಜನ್ಮ ದಿನವಾಗಿದ್ದು, ಅವರೂ ತಮ್ಮ ಕೆಲಸದ ನಿಮಿತ್ತ ಅವಸರದಲ್ಲಿ ಹೊರಗಡೆ ಹೋಗುತ್ತಿದ್ದರು, ಆಗ ಕಂದಾಯ ಉಪ ಆಯುಕ್ತರಾದ ರೇಷ್ಮಾ ತಾಳಿಕೋಟೆ ಹಾಗೂ ಆಡಳಿತ ಉಪ ಆಯುಕ್ತರಾದ ಉದಯಕುಮಾರ ತಳವಾರ ಅವರಿಗೆ ಜನ್ಮ ದಿನದ ವಿಷಯ ಮೊದಲೇ ತಿಳಿದಿದ್ದು, ಪುಷ್ಪಗುಚ್ಛ ನೀಡುವ ಮೂಲಕ ತಮ್ಮ ಆತ್ಮೀಯ ಸಹೋದ್ಯೋಗಿ ಅಧಿಕಾರಿಗೆ ಶುದ್ಧ ಸ್ನೇಹದ ಶುಭಾಶಯ ತಿಳಿಸಿದ್ದಾರೆ..
ಸುಡುವ ಬಿಸಿಲನ್ನೂ ಲೆಕ್ಕಿಸದೇ ಬಹಳ ಹೊತ್ತು ನಿಂತು, ಸಂತಸದಿಂದ ಮಾತನಾಡಿ, ವಿಸ್ವಾಸದಿಂದ ಕೆಲ ವಿಚಾರಗಳ ವಿನಿಮಯ ಮಾಡಿಕೊಂಡಿದ್ದು, ಈ ವೇಳೆ ಎಂಇಎಸ್ ಪಕ್ಷದ ನಗರ ಸೇವಕರು ಅಧಿಕಾರಿಗೆ ಶುಭಾಶಯ ಕೊರಿದ್ದು, ಕಂದಾಯ, ಅಭಿವೃದ್ಧಿ ಹಾಗೂ ಆಶ್ರಯ ವಿಭಾಗದ ಸಿಬ್ಬಂದಿಗಳೂ ಕೂಡ ಉಪಸ್ಥಿತತಿದ್ದರು.
ವರದಿ ಪ್ರಕಾಶ್ ಬಸಪ್ಪ ಕುರಗುಂದ..