ವಾಲ್ಮೀಕಿ ಸಮುದಾಯದ ಬಗ್ಗೆ ಹಗುರ ಮಾತು ಖಂಡನೀಯ..

ವಾಲ್ಮೀಕಿ ಸಮುದಾಯದ ಬಗ್ಗೆ ಹಗುರ ಮಾತು ಖಂಡನೀಯ..

ಸುರೇಶ ಗವಣ್ಣವರ, ಸಮಾಜದ ಪ್ರಮುಖರು…

ಬೆಳಗಾವಿ : ಮಾಜಿ ಸಂಸದ ರಮೇಶ್ ಕತ್ತಿ ಹುಕ್ಕೇರಿ ವಿದ್ಯುತ್ ಸಹಕಾರ ಕ್ಷೇತ್ರದ ಚುನಾವಣೆಯಿಂದ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಯವರೆಗೆ ಜಾತಿ ರಾಜಕಾರಣ ಮಾಡಿ ವಾಲ್ಮೀಕಿ ಸಮಾಜದ ಬಗ್ಗೆ ಹಗುರವಾಗಿ ಮಾತನಾಡಿದ್ದು ಖಂಡನೀಯ ಎಂದು ವಾಲ್ಮೀಕಿ ಸಮಾಜದ ನಾಯಕ ಸುರೇಶ್ ಗವನ್ನವರ ಒತ್ತಾಯಿಸಿದರು.

ಸೋಮವಾರ ದಿನಾಂಕ 20/10/2025 ರಂದು ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಬುದ್ಧ, ಬಸವ, ಅಂಬೇಡ್ಕರ್ ತತ್ವ ಸಿದ್ಧಾಂತದಲ್ಲಿ ಸಮಾಜವನ್ನು ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಆದರೆ ನಿಮ್ಮ ರಾಜಕೀಯ ತೇವಲಿಗೋಸ್ಕರ್ ವಾಲ್ಮೀಕಿ ಸಮಾಜದವರಿಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ದುರಂತ. ಕೂಡಲೇ ಜಿಲ್ಲಾಡಳಿತ, ಪೊಲೀಸ್ ಇಲಾಖೆ ರಮೇಶ್ ಕತ್ತಿ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ರಮೇಶ್ ಕತ್ತಿ ಅವರೇ ನಿಮಗಷ್ಟೆ ಮಾತ್ರ ಮೀಸೆ ಇಲ್ಲ. ನಮಗೂ ಮೀಸೆ ಇವೆ. ಜಾತಿ ರಾಜಕಾರಣ ಮಾಡುವುದು ಬಿಟ್ಟು ಮನೆಯಲ್ಲಿದ್ದರೆ ಉತ್ತಮ ಇಲ್ಲದಿದ್ದರೇ ವಾಲ್ಮೀಕಿ ಸಮಾಜ ತಕ್ಕ ಪಾಠ ಕಲಿಸುತ್ತದೆ ಎಂದು ಕಿಡಿಕಾರಿದರು‌.

ನಮ್ಮ ವಾಲ್ಮೀಕಿ ಸಮಾಜದ ನಾಯಕಾರದ ಬಸವರಾಜ ಹುಂದ್ರಿ ಹಾಗೂ ಮಾರುತಿ ಅಷ್ಟಗಿ ಅವರು ರಮೇಶ್ ಕತ್ತಿ ಅವರ ಪರ ಮಾತನಾಡಿ ಬೆಂಬಲ ಸೂಚಿಸುವುದು ನಾಚಿಗೇಡಿತನದ ಸಂಗತಿ ಎಂದರು.
ವಿಡಿಯೋವನ್ನು ತಿರುಚಿಲ್ಲ. ವಾಲ್ಮೀಕಿ ಸಮಾಜಕ್ಕೆ ಅವಾಚ್ಯ ಶಬ್ಧ ಮಾತನಾಡಿದ್ದಾರೆ. ಅವರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಒತ್ತಾಯಿಸಿದರು.

ಸುದ್ದಿಗೋಷ್ಟಿಯಲ್ಲಿ ವಾಲ್ಮೀಕಿ ಸಮುದಾಯದ ಪ್ರಮುಖರಾದ ಶೇಖರ್ ಕಾಲೇರಿ, ಸಂತೋಷ ಚಿಕ್ಕಲದಿನ್ನಿ, ಮಹೇಶ್ ಸಿಗಿಹಳ್ಳಿ, ಬಾಳೆಶ್ ದಾಸನಟ್ಟಿ, ಶಿವಕುಮಾರ ತಳವಾರ, ಪರಶುರಾಮ ಪಾಟೀಲ ಹಾಗೂ ಸಮಾಜದ ಮತ್ತಿತರ ಪ್ರಮುಖರು ಭಾಗಿಯಾಗಿದ್ದರು..