ಕಿತ್ತೂರು ರಾಣಿ ಚನ್ನಮ್ಮ ಉತ್ಸವ 2025ರ 201ನೇ ವಿಜಯೋತ್ಸವದ ಸಂಭ್ರಮ..

ಕಿತ್ತೂರು ರಾಣಿ ಚನ್ನಮ್ಮ ಉತ್ಸವ 2025ರ 201ನೇ ವಿಜಯೋತ್ಸವದ ಸಂಭ್ರಮ..

ಚೆನ್ನಮ್ಮಾಜಿಯ ಉತ್ತಮ ಕಾರ್ಯ ಹಾಗೂ ಆದರ್ಶಗಳನ್ನು ನಾವು ಮೈಗೂಡಿಸಿಕೊಳ್ಳಬೇಕು..

ಉತ್ಸವದ ಜೊತೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ..

ಸಚಿವ ಸತೀಶ್ ಜಾರಕಿಹೊಳಿ..

ಬೆಳಗಾವಿ : ಕಿತ್ತೂರು ಉತ್ಸವ ನಡೆಯುವಂತಹ ಸಮಯದಲ್ಲಿ ನಾವು ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ, ಒಂದು ಕಡೆ ಉತ್ಸವ ಇದ್ದರೆ, ಕಳೆದ ಹತ್ತು ವರ್ಷಗಳಿಂದ ಪ್ರಾಧಿಕಾರದ ಕಡೆಯಿಂದ ಕಿತ್ತೂರು ಹಾಗೂ ಕಾಕತಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇವೆ ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಹೇಳಿದ್ದಾರೆ..

ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಕಿತ್ತೂರು ರಾಣಿ ಚನ್ನಮ್ಮ ಉತ್ಸವ 2025ನ್ನು ಗುರುವಾರ ದಿನಾಂಕ 23/10/2025ರಂದು ಉದ್ಘಾಟನೆ ಮಾಡಿ ಮಾತನಾಡಿದ ಸಚಿವರು, ಕಿತ್ತೂರು ಉತ್ಸವದ ಜೊತೆ ಕಾಕತಿ ಹಾಗೂ ಕಿತ್ತೂರುಗಳಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ಆಗಿವೆ ಎಂದಿದ್ದಾರೆ..

ಸಾರ್ವಜನಿಕ ಅಭಿವೃದ್ಧಿ ಕಾರ್ಯಗಳಾದ ಈ ಸಾರಿ ರಸ್ತೆ ಅಭಿವೃದ್ಧಿಗೆ ಪೂಜೆ ಮಾಡಿದ್ದೇವೆ, ಕೆಲಸ ಕೂಡಾ ಬೇಗ ಆರಂಭ ಆಗುತ್ತದೆ, ಇನ್ನೂ ಹಲವಾರು ಬೇಡಿಕೆ ಇಟ್ಟಿದ್ದೀರಿ ಹಂತಹತವಾಗಿ ಅವುಗಳನ್ನು ಮಾಡುತ್ತೇವೆ ಎಂದರು, ರಸ್ತೆಗಳು, ಕೋಟೆ ಅಭಿವೃದ್ಧಿ, ದ್ವಾರ ಬಾಗಿಲು ನಿರ್ಮಾಣಗಳನ್ನು ತಮ್ಮ ಬೇಡಿಕೆ ಮುಖಾಂತರ ನಾವು ಮಾಡುವ ಪ್ರಯತ್ನ ಮಾಡಿದ್ದೇವೆ ಎಂದ ಅವರು, ಕಿತ್ತೂರು ಉತ್ಸವ ಎಂದರೆ ಇದು ಮಹಿಳೆಯರ ಉತ್ಸವ ಎನ್ನಲು ಹೆಮ್ಮೆ ಆಗುವಂತೆ ಇಲ್ಲಿಯೂ ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದಾರೆ, ಅದಕ್ಕಾಗಿ ಇದು ಮಹಿಳೆಯರ ವಿಶೇಷವಾದ ಕಾರ್ಯಕ್ರಮ ಎಂದು ಭಾವಿಸುತ್ತೇನೆ ಎಂದಿದ್ದಾರೆ..

ಕಿತ್ತೂರು ಚನ್ನಮ್ಮಾಜಿ ಹೆಸರನ್ನು ಈ ಉತ್ಸವದ ಮೂಲಕ ದಿಲ್ಲಿವರೆಗೂ ಮುಟ್ಟಿಸುವ ಕೆಲಸ ನಿಮ್ಮಿಂದ ಆಗಿದೆ, ಇದರ ಜೊತೆ ಅವರು ಮಾಡಿದ ಜನಪರ ಕಾರ್ಯ ಇರಬಹುದು, ನಮ್ಮ ರಕ್ಷಣೆಗೆ ಹೋರಾಡಿದ ವಿಷಯ ಇರಬಹುದು, ಆ ಕಾಲದಲ್ಲಿ ನಮಗೆ ಸಾಕಷ್ಟು ಹೊಸ ವಿಚಾರ ತಿಳಿಸಿದ್ದೀರಬಹುದು ಇವೆಲ್ಲಾ ಸುಮಾರು ಇನ್ನೂರು ವರ್ಷಗಳ ಹಿಂದೆ ಕಿತ್ತೂರಲ್ಲಿ ನಡೆದಿದ್ದು ನಮಗೆಲ್ಲ ಇತಿಹಾಸ, ಅವರ ಉತ್ತಮ ಕಾರ್ಯಗಳು ಹಾಗೂ ಆದರ್ಶಗಳನ್ನು ನಾವು ಮೈಗುಡಿಸಿಕೊಳ್ಳಬೇಕು ಎಂದಿದ್ದಾರೆ.

ಚೆನ್ನಮ್ಮಾಜಿ ನಮಗೆಲ್ಲ ಮಾದರಿ ಆಗಬೇಕು, ಈ ಉತ್ಸವದಿಂದ ಬೆಳಗಾವಿ ಜಿಲ್ಲೆಗೆ ಒಂದು ಮೆರಗು ಬರಬೇಕು, ಮೈಸೂರು ದಸರಾ ನೋಡಲು ಇಡೀ ರಾಜ್ಯದ ಜನ ಬರುವಂತೆ ಕಿತ್ತೂರು ಹಾಗೂ ಕಾಕತಿ ಉತ್ಸವ ನೋಡಲು ಬೇರೆ ಕಡೆಯಿಂದ ಜನ ಬಂದಾಗ ಇದು ಯಶಸ್ವಿ ಆಗುತ್ತದೆ ಎಂದ ಅವರು, ಕಿತ್ತೂರು ಚನ್ನಮ್ಮಾಜಿ ಬಗ್ಗೆ ಅಪಾರ ಗೌರವ ಇಟ್ಟುಕೊಂಡಂತ ತಾವು ಅವರು ಮಾಡಿರುವ ಹಲವಾರು ಕಾರ್ಯಗಳಿಗೆ ಸ್ಫೂರ್ತಿ ತುಂಬುವ ಕೆಲಸ ತಾವು ಮಾಡುತ್ತಿರುವಿರಿ, ತಾವು ಹೇಳಿದ ಯಾವುದೇ ಅಭಿವೃದ್ಧಿ ಹಾಗೂ ಇನ್ನಿತರ ಯಾವುದೇ ಕಾರ್ಯಕ್ರಮವನ್ನು ನಮ್ಮ ಸಿದ್ದರಾಮಯ್ಯ ಅವರ ಸರ್ಕಾರದ ವತಿಯಿಂದ ಮಾಡುವಂತಹ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದಿದ್ದಾರೆ.

ಇನ್ನು ಕಿತ್ತೂರಿನಂತೆ ಇಲ್ಲಿಯೂ ಸಹ ದೊಡ್ಡ ಪ್ರಮಾಣದಲ್ಲಿ ಉತ್ಸವದ ಕಾರ್ಯಕ್ರಮಗಳು ಆಗಬೇಕು, ಅನೇಕ ಕಲಾವಿದರೂ ಇಲ್ಲಿಯೂ ಬರಬೇಕು, ಅದು ನಮ್ಮ ಆಶಯ ಕೂಡಾ ಬಹುಶ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ ಸಿಇಓ ಅದರ ಬಗ್ಗೆ ಗಮನ ಹರಿಸಲಿ, ಇಲ್ಲಿಯೂ ಕೂಡಾ ಒಂದು ಒಳ್ಳೆಯ ಉತ್ಸವ ಆಗಲಿ, ಆ ಮೂಲಕ ಕಾಕತಿ ಬೆಳೆಯುವಂತಹ ಪ್ರಯತ್ನ ಆಗಲಿ, ಕಳೆದ ಹಲವಾರು ವರ್ಷಗಳಿಂದ ತಮ್ಮ ಯಾವುದೇ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನ ಮಾಡಿದ್ದೇವೆ ಮುಂದೆಯೂ ಕೂಡಾ ಮಾಡುತ್ತೇವೆ ಎಂದಿದ್ದಾರೆ..

ಈ ಉದ್ಘಾಟನಾ ವೇದಿಕೆ ಕಾರ್ಯಕ್ರಮದಲ್ಲಿ ಶಾಸಕ ಆಶಿಫ್ (ರಾಜು) ಸೇಠ್, ಜಿಲ್ಲಾ ಪಂಚಾಯತ ಸಿಇಓ, ನಗರ ಪೊಲೀಸ್ ಆಯುಕ್ತರು, ಉಪ ವಿಭಾಗಾಧಿಕಾರಿ, ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕ, ಜಿಲ್ಲಾ ಪಂಚಾಯತ ಸದಸ್ಯ ಸಿದ್ದು ಸುಣಗಾರ, ತಾಲೂಕು ಪಂಚಾಯತ ಸದಸ್ಯ ಯಲ್ಲಪ್ಪ ಕೊಳೆಕರ, ಗ್ರಾಮ ಪಂಚಾಯತ ಅಧ್ಯಕ್ಷೆ, ಉಪಾಧ್ಯಕ್ಷೆ ಮತ್ತಿತರರು ಭಾಗಿಯಾಗಿದ್ದರು.

ವರದಿ ಪ್ರಕಾಶ ಬಸಪ್ಪ ಕುರಗುಂದ..