ಕಿತ್ತೂರು ಉತ್ಸವದಲ್ಲಿ ಸಚಿವ ಜಮೀರ್ ಅಹಮದ್ ಮಗನ ಸಿನಿಮಾ ಪ್ರಮೋಷನ್..

ಕಿತ್ತೂರು ಉತ್ಸವದಲ್ಲಿ ಸಚಿವ ಜಮೀರ್ ಅಹಮದ್ ಮಗನ ಸಿನಿಮಾ ಪ್ರಮೋಷನ್..

ಕಿಡಿ ಕಾರಿದ ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ..

ಬೆಳಗಾವಿ : ಚೆನ್ನಮ್ಮಾಜಿಯ ಭವ್ಯ ಇತಿಹಾಸ, ನಮ್ಮ ನಾಡಿನ ಕಲೆ ಸಂಸ್ಕೃತಿ ಅನಾವರಣಗೊಳ್ಳುವ ವೇದಿಕೆಯ ಮೇಲೆ ಸಚಿವ ಜಮೀರ್ ಮಗನ ಸಿನಿಮಾ ಪ್ರಮೋಷನಗೆ ಅವಕಾಶ ನೀಡಿರುವ ಜಿಲ್ಲಾಡಳಿತ ಹಾಗೂ ಸ್ಥಳೀಯ ಸಚಿವರು ಹಾಗೂ ಶಾಸಕರ ನಡೆ ಖಂಡನೀಯ ಎಂದು ಬಿಜೆಪಿಯ ಗ್ರಾಮೀಣ ಜಿಲ್ಲಾ ಅಧ್ಯಕ್ಷ ಸುಭಾಸ ಪಾಟೀಲ್ ಅವರು ಕಿಡಿ ಕಾರಿದ್ದಾರೆ.

ಇದೊಂದು ಸರ್ಕಾರಿ ಕಾರ್ಯಕ್ರಮವೋ ಅಥವಾ ಖಾಸಗಿ ಕಾರ್ಯಕ್ರಮವೋ ನಾಡಿನ ಬ್ರಿಟಿಷರ ವಿರುದ್ಧ ಹೋರಾಡಿದ ದಿಟ್ಟ ಮಹಿಳೆ ರಾಣಿ ಚೆನ್ನಮ್ಮನವರ ಸವಿನೆನಪಿಗಾಗಿ ನಡೆಯುತ್ತಿರುವ ಕಿತ್ತೂರು ಉತ್ಸವ ಕಾರ್ಯಕ್ರಮದ ವೇದಿಕೆ ಇಂತಹ ಸ್ವಾರ್ಥಕ್ಕಾಗಿ ಬಳಕೆಯಾಗಿರುವುದು ವಿಷಾದನೀಯ ಎಂದಿದ್ದಾರೆ..

ಈ ಹಿಂದೆ ಐ.ಪಿ.ಎಲ್ ವಿಜೇತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವದ ಆಚರಣೆ ಕಾರ್ಯಕ್ರಮದಲ್ಲೂ ಕೂಡ ವೇದಿಕೆ ಮೇಲೆ ರಾಜ್ಯ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಗಳ, ಸಚಿವರ ಮಕ್ಕಳು, ಮೊಮ್ಮಕ್ಕಳು, ಸಂಬಂಧಿಕರ ದರ್ಬಾರ್ ನೋಡಿ ಸಾರ್ವಜನಿಕರು ಉಗಿದರೂ ಇನ್ನೂ ಬುದ್ಧಿಬಂದಂತೆ ಕಾಣುತ್ತಿಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ ಆಕ್ರೋಶ ವ್ಯಕ್ತಪಡಿಸಿದ್ದಾರೆ..