ಉಷಾತಾಯಿ ಗೊಗಟೆ ಬಾಲಕಿಯರ ಪ್ರೌಢಶಾಲೆ ಹಳೆಯ ವಿದ್ಯಾರ್ಥಿನಿಯರ ಸ್ನೇಹ ಸಮ್ಮೇಳನ..

ಉಷಾತಾಯಿ ಗೊಗಟೆ ಬಾಲಕಿಯರ ಪ್ರೌಢಶಾಲೆ ಹಳೆಯ ವಿದ್ಯಾರ್ಥಿನಿಯರ ಸ್ನೇಹ ಸಮ್ಮೇಳನ..

ಬೆಳಗಾವಿ : ಬಿ ಇ ಎಜ್ಯುಕೇಶನ್ ಸೊಸೈಟಿ ಮತ್ತು ಬಿ.ಕೆ. ಮಾಡೆಲ್ ಹೈಸ್ಕೂಲ್ ನೂರು ವರ್ಷಗಳನ್ನು ಪೂರೈಸಿವೆ, ಇದೆ ಡಿಸೆಂಬರ್ 2025 ರಲ್ಲಿ ಶತಮಾನೋತ್ಸವವನ್ನು ಆಚರಿಸಲಾಗುತ್ತಿದ್ದು. ಈ ಹಿನ್ನೆಲೆಯಲ್ಲಿ ಶ್ರೀಮತಿ ಉಷಾತಾಯಿ ಗೊಗಟೆ ಬಾಲಕಿಯರ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿನಿಯರ ಸ್ನೇಹ ಮೇಳವನ್ನು ಅಕ್ಟೋಬರ್ 26 ಭಾನುವಾರದಂದು ಆಯೋಜಿಸಲಾಗಿತ್ತು.

ಬೆಳಗಾವಿ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷರಾದ ಅವಿನಾಶ ಪೊತದಾರ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಕೌನ್ಸಿಲ್ ಸದಸ್ಯ ವಿ. ಆರ್. ಗುಡಿ ಅವರು ಗೌರವ ಅತಿಥಿಗಳಾಗಿ ಆಗಮಿಸಿದ್ದರು. ಸಂಸ್ಥೆಯ ಗೌರವ ಕಾರ್ಯದರ್ಶಿ ಶ್ರೀನಿವಾಸ ಶಿವಣಗಿ ಹಾಗೂ ಹಳೆಯ ವಿದ್ಯಾರ್ಥಿನಿಯರ ಸಂಘದ ಅಧ್ಯಕ್ಷೆ ಲಲಿತಾ ಮದಿಹಳ್ಳಿ ಅವರು ಉಪಸ್ಥಿತರಿದ್ದರು.

ಶಾಲಾ ಸುಧಾರಣಾ ಸಮಿತಿಯ ಅಧ್ಯಕ್ಷ ಚಿಂತಾಮಣಿ ಗ್ರಾಮೋಪಾಧ್ಯಾಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು, ಕಾರ್ಯಕ್ರಮವು ಶಾಲಾ ಗೀತೆ ಮತ್ತು ಸ್ವಾಗತ ಗೀತೆಯಿಂದ ಪ್ರಾರಂಭವಾಯಿತು. ಹಳೆಯ ವಿದ್ಯಾರ್ಥಿನಿಯರು ತಮ್ಮ ಶಾಲಾ ದಿನಗಳ ನೆನಪುಗಳನ್ನು ಹಂಚಿಕೊಂಡರು. ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ಹಳೆಯ ವಿದ್ಯಾರ್ಥಿನಿಯರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

ಪುಣೆ, ಮುಂಬೈ, ಕೊಲ್ಹಾಪುರ, ಬೆಂಗಳೂರು, ಯಲ್ಲಾಪುರ ಮುಂತಾದ ದೂರದ ಸ್ಥಳಗಳಿಂದ ಹಳೆಯ ವಿದ್ಯಾರ್ಥಿನಿಯರು ಆಗಮಿಸಿದ್ದರು, ಎರಡು ನೂರಕ್ಕಿಂತ ಹೆಚ್ಚು ಹಳೆಯ ವಿದ್ಯಾರ್ಥಿನಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಂಸ್ಥೆಯ ಅಧ್ಯಕ್ಷರಾದ ಅವಿನಾಶ್ ಪೋತದಾರ ಮಾತನಾಡಿ ಶತಮಾನೋತ್ಸವ ಕಾರ್ಯಕ್ರಮದ ರೂಪರೇಷೆ ತಿಳಿಸಿದರು ಮತ್ತು ಸಂಸ್ಥೆಯ ಎಲ್ಲ ಹಳೆಯ ವಿಧ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಶತಕ ಮೋಹೋತ್ಸವದಲ್ಲಿ ಭಾಗಿ ಆಗಲು ಆಹ್ವಾನಿಸಿದರು.

ಮುಖ್ಯೋಪಾಧ್ಯಾಯ ಎಂ.ಕೆ. ಮಾದರ ಅವರು ಎಲ್ಲರಿಗೂ ಸ್ವಾಗತ ಕೊರಿದ್ದು, ದೃಷ್ಟಿ ಅಮಾಸಿ ಅವರು ಕಾರ್ಯಕ್ರಮದ ಸೂತ್ರಸಂಚಾಲನೆ ಮಾಡಿದರು. ಸಂಜಯ ನರೇವಾಡ್ಕರ್ ಅವರು ವಂದನಾರ್ಪಣೆ ಮಾಡಿದ್ದು, ಅನೇಕ ನಿವೃತ್ತ ಮುಖ್ಯೋಪಾಧ್ಯಾಯರು, ನಿವೃತ್ತ ಶಿಕ್ಷಕರು ಹಾಗೂ ಹಳೆಯ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.