ಒಂದು ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಇಂಜಿನಿಯರ್ ಲೋಕಾಯುಕ್ತ ಬಲೆಗೆ..

ಒಂದು ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಇಂಜಿನಿಯರ್ ಲೋಕಾಯುಕ್ತ ಬಲೆಗೆ..

ಬೆಳಗಾವಿ : ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯನಿರ್ವಾಹಕ ಅಭಿಯಂತರ ಅಶೋಕ್ ಶಿರೂರ್ ಅವರು, ಕುಡಿಯುವ ನೀರು ಸರಬರಾಜು ಯೋಜನೆಗೆ ಬಳಸಿಕೊಂಡ ಜಮೀನಿಗೆ ಪರಿಹಾರದ ಹಣವನ್ನು ನೀಡಲು ಒಂದು ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು, ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.

ಮುಗಳಕೋಡ ಹಾಗೂ ಹಾರೂಗೇರಿ ಪಟ್ಟಣಗಳ ಅಮೃತ ಯೋಜನೆಯಡಿಯಲ್ಲಿ ಕುಡಿಯುವ ನೀರು ಸರಬರಾಜು ಯೋಜನೆಗೆ 14 ಗುಂಟೆ ಜಮೀನನ್ನು ರಾಯಭಾಗ ತಾಲೂಕಿನ ಖೇಮಲಾಪುರ ಗ್ರಾಮದ ಯಾಶೀನ್ ಎಂಬಾತಾನಿಂದ ಪಡೆದುಕೊಳ್ಳಲಾಗಿತ್ತು, ಸ್ವಾದಿನ ಪಡೆದುಕೊಂಡ ಜಮೀನಿಗೆ ಸರ್ಕಾರದಿಂದ 18 ಲಕ್ಷ ರೂ ಅನುದಾನ ಬಿಡುಗಡೆ ಆಗಿತ್ತು.

ಬಿಡುಗಡೆ ಆದ ಅನುದಾನದ ಮಂಜೂರಾತಿಗಾಗಿ ಬೆಳಗಾವಿ ವಿಭಾಗದ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಅಧಿಕಾರಿ ಅಶೋಕ ಶಿರೂರ್ ಒಂದು ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಈ ಕುರಿತಾಗಿ ಲೋಕಾಯುಕ್ತ ಅಧಿಕಾರಿಗಳು ಅಕ್ಟೋಬರ್ 17ರಂದೆ ದೂರು ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದರು,

ಇಂದು ಲೋಕಾಯುಕ್ತ ಎಸ್ಪಿ ಹನುಮಂತರಾಯ ಅವರ ಮಾರ್ಗದರ್ಶನದಲ್ಲಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅಧಿಕಾರಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ..