ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಜಿಲ್ಲೆಯಲ್ಲಿ ಹೊಸ ಹೆಜ್ಜೆ..
ಸಮಾಜದಲ್ಲಿ ಸುರಕ್ಷತೆ ಘಟಕ ಹಾಗೂ ಶೈಕ್ಷಣಿಕ ಶಕ್ತಿಗಾಗಿ ಅಕ್ಕ ಪಡೆ ರಚನೆ..
ಅಕ್ಕ ಪಡೆಯ ನೇಮಕಕ್ಕೆ ಮಹಿಳೆಯರಿಂದ ಅರ್ಜಿ ಅಹ್ವಾನ..
ಬೆಳಗಾವಿ : ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಹೊಸ ಹೆಜ್ಜೆಯಾಗಿ “ಅಕ್ಕ ಪಡೆ” ಯೋಜನೆಯು ಆದಷ್ಟು ಬೇಗ ಜಾರಿಗೆ ಬರಳಿದ್ದು, ಸಮಾಜದಲ್ಲಿ ಸಂಕಷ್ಟದಲ್ಲಿರುವ ದುರ್ಬಲ ಮಹಿಳೆಯರು ಮತ್ತು ಮಕ್ಕಳಿಗೆ ತಕ್ಷಣ ರಕ್ಷಣೆ ನೀಡುವ ಮುಖ್ಯ ಉದ್ದೇಶವನ್ನು ಇಟ್ಟುಕೊಂಡು ಜಿಲ್ಲೆಯಲ್ಲಿ ತನ್ನ ಕಾರ್ಯವನ್ನು ಪ್ರಾರಂಭ ಮಾಡುತ್ತಿದೆ..
ಸಮುದಾಯ ಸೇವೆ ಹಾಗೂ ಸಹಾನುಭೂತಿಯಲ್ಲಿ ದಾರಿಯಲ್ಲಿ ಸಾಗುವ ಅಕ್ಕ ಪಡೆಯು ಸಮಾಜದಲ್ಲಿ ಸ್ಪಂದಿಸುವ ಸುರಕ್ಷಿತ ಘಟಕವಾಗಿ ಹಾಗೂ ಶೈಕ್ಷಣಿಕ ಶಕ್ತಿಯಾಗಿ ಕಾರ್ಯನಿರ್ವಹಿಸುವ ಉದ್ದೇಶ ಹೊಂದಿದೆ.
ಸದರಿ ತಂಡದಲ್ಲಿ 5 ಮಹಿಳಾ NCC “C” ಪ್ರಮಾಣ ಪತ್ರ ಹೊಂದಿದ ಮಹಿಳಾ ಅಭ್ಯರ್ಥಿಗಳನ್ನು ಸೇವಾ ಗುತ್ತಿಗೆ ಆಧಾರದ ಮೇಲೆ ಆಯ್ಕೆ ಮಾಡಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅರ್ಜಿಗಳನ್ನು, ಉಪನಿರ್ದೇಶಕರ ಕಚೇರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಿಮಾಂಡ ಹೋಮ್ ಆವರಣ, ಶಿವಾಜಿ ನಗರ ಬೆಳಗಾವಿ ಇಲ್ಲಿ ಪಡೆಯಬಹುದು, ಸದರಿ ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ 07/11/2025 ರಂದು ನಿಗದಿ ಪಡಿಸಲಾಗಿದೆ..
ಆಯ್ಕೆಯ ಮಾನದಂಡಗಳು ಈ ಮುಂದಿನಂತಿವೆ..
1) NCC “C” ಪ್ರಮಾಣ ಪತ್ರ ಹೊಂದಿರುವ 35 ರಿಂದ 45 ವಯೋಮಿತಿಯ ಮಹಿಳಾ ಅಭ್ಯರ್ಥಿ ಆಗಿರಬೇಕು..
2) ಅಭ್ಯರ್ಥಿಗಳು ದೈಹಿಕ ಸದೃಢತೆ ಮತ್ತು ಸ್ಥಳೀಯ ನಿವಾಸಿ ಆಗಿರಬೇಕು..
3) ಅಭ್ಯರ್ಥಿಗಳು ಬೆಳಿಗ್ಗೆ 7ರಿಂದ ರಾತ್ರಿ 8 ಗಂಟೆವರೆಗೆ ಶಿಪ್ಟನಲ್ಲಿ ಕೆಲಸ ನಿರ್ವಹಿಸಲು ಬದ್ದರಿರಬೇಕು..
ಹೆಚ್ಚಿನ ಮಾಹಿತಿಗಾಗಿ, ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿವಾಜಿ ನಗರ ಬೆಳಗಾವಿ, ದೂರವಾಣಿ ಸಂಖ್ಯೆ : 0831 – 2407235 ಗೆ ಸಂಪರ್ಕಿಸಬಹುದು ಎಂಬ ಮಾಹಿತಿಯಿದೆ..
ವರದಿ ಪ್ರಕಾಶ ಬಸಪ್ಪ ಕುರಗುಂದ..