ಗೋಕಾಕನ ಮಾಲದಿನ್ನಿ ಹಾಗೂ ಗುರ್ಲಾಪುರ ರೈತ ಹೋರಾಟಕ್ಕೆ ಬೆಂಬಲ…

ಗೋಕಾಕನ ಮಾಲದಿನ್ನಿ ಹಾಗೂ ಗುರ್ಲಾಪುರ ರೈತ ಹೋರಾಟಕ್ಕೆ ಬೆಂಬಲ…

ರೈತರ ಸಮಸ್ಯೆಗೆ ಪರಿಹಾರ ನೀಡುವದು ಸರ್ಕಾರದ ಕರ್ತವ್ಯ..

ರೈತರ ಜೊತೆ ನಮ್ಮ ಸಂಘಟನೆ ಸದಾ ಇರುತ್ತದೆ…

ಮಹೇಶ್ ಶೀಗಿಹಳ್ಳಿ ಮತ್ತು ಸಂಘಟನೆ..

ಬೆಳಗಾವಿ : ರೈತರು ನಮ್ಮ ದೇಶದ ಬೆನ್ನೆಲುಬಾಗಿ ಇದ್ದರೂ ಯಾವುದೇ ಸರಕಾರ ಬಂದರೂ ರೈತರಿಗೆ ಅನ್ಯಾಯ ಆಗುವುದು ಮಾತ್ರ ತಪ್ಪಿಲ್ಲ, ಈ ನಿಟ್ಟಿನಲ್ಲಿ ರೈತರು ನ್ಯಾಯಕ್ಕಾಗಿ ವಿವಿಧ ರೀತಿಯಲ್ಲಿ ಹೋರಾಟ ಮಾಡುತ್ತಲೇ ಬಂದಿದ್ದಾರೆ, ಇದನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗಮನಿಸುತ್ತಿಲ್ಲ, ಈಗ ರೈತರ ಪ್ರಮುಖ ಬೇಡಿಕೆಯಾದ ಕಬ್ಬು ಬೆಳೆಗಾರರಿಗೆ ನ್ಯಾಯಯುತವಾದ ಬೆಲೆ ನಿಗದಿ ಮಾಡಿ, ಪ್ರತಿ ಟನ್ ಕಬ್ಬಿಗೆ 3500/- ರೂಪಾಯಿ ನಿಗದಿ ಮಾಡಿ, ರೈತರ ಕಣ್ಣೀರು ಒರೆಸುವ ಕಾರ್ಯ ಕೈಗೊಂಡು ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕೆಂದು ಕರ್ನಾಟಕ ಪರಿಶಿಷ್ಟ ಪಂಗಡಗಳ ಯುವಘಟಕದ ರಾಜ್ಯಾಧ್ಯಕ್ಷರಾದ ಮಹೇಶ್ ಸಿಗಿಹಳ್ಳಿ ಹೇಳಿದ್ದಾರೆ..

ಮಂಗಳವಾರ ದಿನಾಂಕ 04/11/2025ರಂದು ಗೋಕಾಕ ಹಾಗೂ ಮೂಡಲಗಿ ಸಮೀಪದ ಗುರ್ಲಾಪುರ ಕ್ರಾಸ್ ಬಳಿ ನಡೆಯುತ್ತಿರುವ ಕಬ್ಬು ಬೆಳೆಗಾರ ರೈತರ ಪ್ರತಿಭಟನೆಯಲ್ಲಿ ಭಾಗಿಯಾಗಿ, ಮಾತನಾಡಿದ ಮಹೇಶ್ ಸಿಗಿಹಳ್ಳಿ ಅವರು, ನಮ್ಮ ಸಂಘಟನೆ ರೈತರ ಪರವಾಗಿದ್ದು, ರೈತರಿಗೆ ನ್ಯಾಯ ಸಿಗುವವರೆಗೆ ನಾವೂ ಕೂಡಾ ರೈತರ ಜೊತೆ ಇರುತ್ತೇವೆ ಎಂದ ಅವರು, ಈ ಭಾಗದ ರೈತರು ತಮ್ಮ ನ್ಯಾಯಯುತ ಬೇಡಿಕೆಗಾಗಿ ಹೋರಾಟ ಮಾಡುತ್ತಿದ್ದು, ಸರ್ಕಾರ ಆದಷ್ಟು ಬೇಗ ರೈತರ ಬೇಡಿಕೆ ಈಡೇರಿಸಿ, ಸಮಸ್ಯೆಯನ್ನು ನಿವಾರಣೆ ಮಾಡಬೇಕು ಎಂದಿದ್ದಾರೆ..

ಸಕ್ಕರೆ ಕಾರ್ಖಾನೆಯ ಮಾಲೀಕರು ರೈತರ ಬಗ್ಗೆ ಕಾಳಜಿ ವಹಿಸಬೇಕು ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ರೈತರಿಗೆ, ರೈತ ವರ್ಗದ ಕುಟುಂಬಕ್ಕೆ, ಅವರ ಮಕ್ಕಳ ವಿದ್ಯಾಭ್ಯಾಸ ಹಾಗೂ ಉದ್ಯೋಗಕ್ಕೆ ವಿಶೇಷವಾದ ಮೀಸಲು ಇಡಬೇಕು ಹಾಗಾದರೆ ಮಾತ್ರ ರೈತ ಕುಟುಂಬ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸಾದ್ಯವಾಗುತ್ತದೆ ಎಂದಿದ್ದಾರೆ.

ರೈತರು ಬೆಳೆದ ಬೆಳೆ, ತರಕಾರಿ, ಕಬ್ಬು ಹಾಗೂ ಎಲ್ಲಾ ಕೃಷಿ ಬೆಳೆಗಳಿಗೆ ಉತ್ತಮ ಬೆಲೆ ನೀಡುವಂತಾಗಲಿ, ಆ ಮೂಲಕ ಅನ್ನದಾತ ರೈತರ ಜೀವನವನ್ನು ಸುಖಿಗೊಳಿಸುವ ಕಾರ್ಯವನ್ನು ಸರ್ಕಾರ ಮಾಡಬೇಕು, ಇದು ಸರ್ಕಾರದ ಕರ್ತವ್ಯ ಎಂದು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಕ್ಕೆ ಆಗ್ರಹ ಮಾಡಿದ್ದಾರೆ.

ಈ ರೈತ ಪ್ರತಿಭಟನೆಯಲ್ಲಿ ರಾಜ್ಯ ಪರಿಶಿಷ್ಟ ಪಂಗಡ ಯುವಪಡೆಯ ಸಂಘಟನೆಯ ವಿವಿಧ ಪಧಾಧಿಕಾರಿಗಳು ಹಾಗೂ ಸದಸ್ಯರು ಭಾಗಿಯಾಗಿದ್ದರು..

ವರದಿ ಪ್ರಕಾಶ ಬಸಪ್ಪ ಕುರಗುಂದ..