ಬಿಹಾರ ಚುನಾವಣಾ ಲೆಕ್ಕಾಚಾರದ ಅಂದಾಜಿಸುವಲ್ಲಿ ಸೋತಿದ್ದೇವೆ..

ಬಿಹಾರ ಚುನಾವಣಾ ಲೆಕ್ಕಾಚಾರದ ಅಂದಾಜಿಸುವಲ್ಲಿ ಸೋತಿದ್ದೇವೆ..

ಸ್ಪಷ್ಟಿಕರಣ ನೀಡುವವರೆಗೆ ಇವಿಎಂ ಬಗ್ಗೆ ಸಂಶಯ ಇದ್ದೆ ಇರುತ್ತದೆ..

ಕೆಪಿಸಿಸಿ ಅಧ್ಯಕ್ಷ, ನಾಯಕತ್ವ ಬದಲಾವಣೆ ಪಕ್ಷದ ವರಿಷ್ಟರಿಗೆ ಬಿಟ್ಟಿದ್ದು..

ಸಚಿವ ಸತೀಶ ಜಾರಕಿಹೊಳಿ..

ಬೆಳಗಾವಿ : ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಸತೀಶ ಜಾರಕಿಹೊಳಿ ಅವರು ಬಿಹಾರ ಚುನಾವಣಾ ಲೆಕ್ಕಾಚಾರ ಅಂದಾಜಿಸುವಲ್ಲಿ ಸೋತಿದ್ದೇವೆ, ಬಿಹಾರ ಹಾಗೂ ಹರಿಯಾಣದಲ್ಲಿ ಬಹಳ ಆಸೆ ಇತ್ತು, ಚುನಾವಣೆಯಲ್ಲಿ ಸೋಲು ಗೆಲುವು ಸಹಜ, ಚುನಾವಣಾ ಆಯೋಗ ಸ್ಪಷ್ಟಿಕರಣ ನೀಡುವವರೆಗೂ ಇವಿಎಂ ಮಸಿನ್ ಬಗ್ಗೆ ಇರುವ ಸಂಶಯ ಇದ್ದೆ ಇರುತ್ತದೆ ಎಂದಿದ್ದಾರೆ.

ರವಿವಾರ ನಗರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಸಚಿವ ಸತೀಶ ಜಾರಕಿಹೊಳಿ ಅವರು, ಬಿಹಾರ ಚುನಾವಣೆವಲ್ಲಿ ಕಾಂಗ್ರೆಸ್ ಪಕ್ಷದ ಸೋಲಿನ ಬಗ್ಗೆ ಮಾತನಾಡಿದ ಅವರು, ಪಕ್ಷದ ಪಾರಾಮರ್ಶೆ, ಮತ ಕದ್ದಾಲಿಕೆ, ಇವಿಎಂ ಮಸಿನ್ ಕಾರ್ಯವೈಖರಿ ಹಾಗೂ ಚುನಾವಣಾ ಆಯೋಗದ ಸ್ಪಷ್ಟಿಕರಣದ ಬಗ್ಗೆ ಮಾತನಾಡಿದ್ದಾರೆ.

ರಾಜ್ಯ ರಾಜಕಾರಣದ ಮೇಲೆ ಬಿಹಾರ ಚುನಾವಣಾ ಫಲಿತಾಂಶದ ಪರಿಣಾಮ ಬಿರುಬದಿಲ್ಲ, ದೆಹಲಿಗೆ ಹೋದಾಗ ಯಾವ ರಾಜಕೀಯ ವಿಷಯಗಳು ಚರ್ಚೆ ಆಗಿಲ್ಲ, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ತಮ್ಮ ಹೆಸರು ಕೇಳಿ ಬರುತ್ತಿರುವ ಬಗ್ಗೆ ಮಾತನಾಡಿದ ಸಚಿವರು ರಾಜ್ಯದ ಜನರಲ್ಲಿ ಚರ್ಚೆ ಆಗುವದು ಸಹಜ, ಚರ್ಚೆಗೆ ಕಡಿವಾಣ ಹಾಕಲು ಆಗುವದಿಲ್ಲ, ಅಧ್ಯಕ್ಷ ಯಾರು ಆಗುತ್ತಾರೋ ಎಂದು ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದಿದ್ದಾರೆ.

ಸಚಿವ ಸಂಪುಟ ವಿಸ್ತರಣೆ ಬಗ್ಗೆ ವರಿಷ್ಠರು ನಿರ್ಣಯ ತಗೆದುಕೊಳ್ಳುವರು, ಅದು ನಮ್ಮ ಕೈಯಲ್ಲಿ ಇಲ್ಲಾ, ನಾಯಕತ್ವ ಬದಲಾವಣೆಯ ಬಗ್ಗೆ ಪಕ್ಷದ ಹಿರಿಯರು ಗಮನಿಸಿ ತೀರ್ಮಾನ ತಗೆದುಕೊಳ್ಳುತ್ತಾರೆ, ಅಧಿವೇಶನದ ತಯಾರಿ ನಡೆಯುತ್ತಿದೆ, ಅದರಲ್ಲೇನು ವಿಶೇಷ ಇಲ್ಲಾ, ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ, ವಿವಿಧ ರೀತಿಯ ಪ್ರತಿಭಟನೆಗಳು ನಡೆಯುತ್ತವೆ, ಪ್ರತ್ಯೇಕ ರಾಜ್ಯದ ಹೇಳಿಕೆಗಳು ಅವರ ವೈಯಕ್ತಿಕ, ಪಕ್ಷಕ್ಕೆ ಸಂಬಂಧ ಇಲ್ಲಾ, ಬೆಳಗಾವಿಯ ಕಿತ್ತೂರು ಚನ್ನಮ್ಮ ಕಿರು ಮೃಗಾಲಯದಲ್ಲಿ ಕೃಷ್ಣ ಮೃಗಗಳ ಸಾವಿಗೆ ತನಿಖೆಗಾಗಿ ಸಚಿವರು ಆದೇಶ ನೀಡಿದ್ದಾರೆ, ತನಿಖೆ ನಡೆಯುತ್ತಿದೆ ಎಂದಿದ್ದಾರೆ..

ವರದಿ ಪ್ರಕಾಶ ಬಿ ಕುರಗುಂದ..