ಮಾಹಿತಿ ಹಕ್ಕು ಅರ್ಜಿಗೆ ಪಾಲಿಕೆ ಅರೋಗ್ಯ ಅಧಿಕಾರಿಯ ಅಸ್ಪಷ್ಟ ಮಾಹಿತಿ..
ಬೆಳಗಾವಿ ಪತ್ರಕರ್ತರಿಗೆ ಪಾಲಿಕೆಯಿಂದ ನೀಡಿದ ಆರೋಗ್ಯ ವಿಮೆಯಲ್ಲಿ ಗೊಂದಲ..
ಅರ್ಜಿದಾರರಿಂದ ಮೆಲ್ಮನವಿಗೆ ತಯಾರಿ..
ಬೆಳಗಾವಿ : ಮಹಾನಗರದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರಿಗೆ ಪಾಲಿಕೆಯಿಂದ ಆರೋಗ್ಯ ವಿಮಾ ಕಾರ್ಡುಗಳನ್ನು ಕಳೆದ ಜುಲೈ – ಆಗಷ್ಟ ತಿಂಗಳಿನಲ್ಲಿ ವಿತರಿಸಲಾಗಿದ್ದು, ಅದರಲ್ಲಿ ಕೆಲ ಗೊಂದಲಗಳಿದ್ದು, ಅವುಗಳ ಪರಿಹಾರಕ್ಕಾಗಿ ಮಾಹಿತಿ ಪಡೆಯಲೆಂದು, ಮಾಹಿತಿ ಹಕ್ಕಿನ ಕಾಯ್ದೆ ಅಡಿಯಲ್ಲಿ ಅರ್ಜಿಯನ್ನು ಸಲ್ಲಿಸಿದ್ದು, ಇದಕ್ಕೆ ಪಾಲಿಕೆಯ ಆರೋಗ್ಯ ವಿಭಾಗದಿಂದ ಸ್ಪಷ್ಟ ಮಾಹಿತಿ ದೊರಕಿಲ್ಲ.
ದಿನಾಂಕ 03/09/2025 ರಂದು ಮಾಹಿತಿ ಹಕ್ಕು ಅರ್ಜಿದಾರರು ಕೇಳಿದ, ಬೆಳಗಾವಿ ಪಾಲಿಕೆಯಿಂದ ಮಾಧ್ಯಮದವರಿಗೆ ನೀಡಲ್ಪಟ್ಟ ಆರೋಗ್ಯ ವಿಮೆಯ ಕಾರ್ಡುಗಳ ಪಲಾನುಭವಿಗಳ ಪಟ್ಟಿ ಹಾಗೂ ಅವರ ಸಂಸ್ಥೆಗಳ ಕುರಿತು ಮಾಹಿತಿ ಕೇಳಿದ್ದು, ಇದಕ್ಕೆ ಸಂಬಂಧಪಟ್ಟ ಪಾಲಿಕೆಯ ಆರೋಗ್ಯ ವಿಭಾಗ, ವಿಮೆ ನೀಡಿದ ಸಂಸ್ಥೆಯ ಹೆಸರನ್ನು ನಮೂದಿಸಿ ಈ ಸಂಸ್ಥೆಯಿಂದ ವಿಮಾ ಕಾರ್ಡುಗಳನ್ನು ವಿತರಿಸಲಾಗಿದೆ ಎಂದು ಮಾಹಿತಿ ನೀಡಿದ್ದರು.
ನಂತರ ಕಚೇರಿಗೆ ಹೋಗಿ ಅರೋಗ್ಯ ಅಧಿಕಾರಿಗಳನ್ನು ನಾವು ಕೇಳಿದ್ದು ಪಲಾನುಭವಿಗಳ ಪಟ್ಟಿ ಮತ್ತು ಅವರ ಸಂಸ್ಥೆಗಳ ಹೆಸರು ಎಂದು ಕೇಳಿದಾಗ, ನಮಗೆ ಸರಿಯಾಗಿ ತಿಲಿದಿರಲಿಲ್ಲ ಎನ್ನುತ ಆಗ ಕಚೇರಿಯಲ್ಲೇ ಇದ್ದ ಪಲಾನುಭವಿಗಳ ಪಟ್ಟಿಯನ್ನು ನೇರವಾಗಿ ಒಂದು ಪ್ರಿಂಟ್ ತಗೆದು ನಮಗೆ ಕೊಟ್ಟು, ಅವರ ಕೆಲಸ ಮಾಡುವ ಸಂಸ್ಥೆಗಳ ಬಗ್ಗೆ ನಮಗೆ ಮಾಹಿತಿ ಇಲ್ಲ, ನಮಲ್ಲಿರುವುದು ಇಷ್ಟೇ ಮಾಹಿತಿ ಎಂಬ ಹಾರಿಕೆ ಉತ್ತರ ನೀಡಿದ್ದರು..
ಪಾಲಿಕೆಗೆ ನಗರವಾಸಿಗಳು ಕಷ್ಟಪಟ್ಟು ಕಟ್ಟುವ ತೆರಿಗೆ ಹಣದಲ್ಲಿ ಸುಮಾರು 50 ಲಕ್ಷ ಹಣವನ್ನು ಪಾಲಿಕೆಯಿಂದ ಪತ್ರಕರ್ತರ ಆರೋಗ್ಯ ವಿಮೆಗಾಗಿ ಬಳಸುತ್ತಿರುವಾಗ, ಕಟ್ಟುನಿಟ್ಟಾಗಿ ಪರಿಶೀಲಿಸಿ, ಎಲ್ಲಾ ದಾಖಲೆಗಳನ್ನು ಸರಿಯಾಗಿ ಪಡೆದು ವಿಮೆ ನೀಡಬೇಕಾಗಿದ್ದು ಅಧಿಕಾರಿಗಳ ಜವಾಬ್ದಾರಿ, ಆದರೆ ವಿಮೆ ನೀಡಿದ ಪತ್ರಕರ್ತರು ಕೆಲಸ ಮಾಡುವ ಸಂಸ್ಥೆಗಳ ಬಗ್ಗೆನೇ ಇವರಿಗೆ ಮಾಹಿತಿ ಇಲ್ಲ ಎಂಬ ವರ್ತನೆ ತೋರುತ್ತಿರುವದು ನೋಡಿದರೆ, ಎಲ್ಲವೂ ಸರಿಯಾಗಿಲ್ಲವೇನೋ ಎಂಬ ಸಂಶಯ ಮೂಡುತ್ತದೆ.
ಇತ್ತ ಸರಿಯಾದ ಮಾಹಿತಿ ಲಭ್ಯವಾಗದ ಹಿನ್ನೆಲೆಯಲ್ಲಿ ಮುಂದಿನ ದಾರಿಯಾಗಿ ಅರ್ಜಿದಾರರು ಮೇಲ್ಮನವಿ ಸಲ್ಲಿಸುವ ತಯಾರಿಯಲ್ಲಿದ್ದು, ಸಾರ್ವಜನಿಕರ ತೆರಿಗೆ ರೂಪದಲ್ಲಿ ಸಂಗ್ರಹವಾಗುವ ಪಾಲಿಕೆಯ ಅನುದಾನ ಸರಿಯಾಗಿ ಬಳಕೆ ಆಗಲಿ, ನಿಜವಾದ ಪತ್ರಕರ್ತರಿಗೆ ಸೌಲಭ್ಯ ದೊರಕುವಂತಾಗಲಿ, ಯಾವುದೇ ಸೌಲಭ್ಯ ನೀಡಲು ಕೆಲ ನಿಯಮಾವಳಿ ಇರುತ್ತವೆ, ಅವುಗಳ ಪಾಲನೆ ಆಗಿರಬೇಕು ಎಂಬ ಧೋರಣೆಯೊಂದಿಗೆ ಮುಂದಿನ ಮಾಹಿತಿ ಬರುವವರೆಗೆ ಕಾಯಬೇಕಾಗಿದೆ..
ವರದಿ ಪ್ರಕಾಶ ಬಿ ಕುರಗುಂದ.