ಬೆಳಗಾವಿ ಪಾಲಿಕೆಗೆ ಹೊಸ ಆಯುಕ್ತರ ನೇಮಕ..
ಪಾಲಿಕೆ ಆಯುಕ್ತೆ ಶುಭಾ ಬಿ ಅವರ ಸ್ಥಾನಕ್ಕೆ ಕಾರ್ತಿಕ್ ಎಂ ಎಂಟ್ರಿ..
ಬೆಳಗಾವಿ : ಮಹಾನಗರ ಪಾಲಿಕೆ ಬೆಳಗಾವಿಯ ಹೊಸ ಆಯುಕ್ತರಾಗಿ ಕೆಎಎಸ್ ಹಿರಿಯ ಶ್ರೇಣಿಯ ಅಧಿಕಾರಿಯಾದ ಕಾರ್ತಿಕ ಎಂ ಅವರನ್ನು ನೇಮಕ ಮಾಡಿ, ಸರ್ಕಾರದ ಅಧಿನ ಕಾರ್ಯದರ್ಶಿಗಳು ಸಿಬ್ಬಂದಿ ಹಾಗೂ ಆಡಳಿತ ಸುಧಾರಣೆ ಇಲಾಖೆ ಅವರಿಂದ ಆದೇಶ ಹೊರಡಿಸಲಾಗಿದೆ.
ಬೆಳಗಾವಿ ಪಾಲಿಕೆಗೆ ನೂತನವಾಗಿ ಆಯುಕ್ತರಾಗಿ ನೇಮಕವಾದ ಕಾರ್ತಿಕ್ ಎಂ ಅವರು ಈ ಮೊದಲು, ಮುಖ್ಯ ಆಡಳಿತಾಧಿಕಾರಿ ಸಂಜಯಗಾಂಧಿ ಟ್ರಾಮಾ ಮತ್ತು ಅಸ್ಥಿ ಚಿಕಿತ್ಸೆ ಸಂಸ್ಥೆ ಬೆಂಗಳೂರು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ಹಿಂದೆ ಬೆಳಗಾವಿ ಪಾಲಿಕೆಯ ಆಯುಕ್ತೆ ಶುಭಾ ಬಿ ಅವರ ಹುದ್ದೆಗೆ ವರ್ಗಾಯಿಸಿ ಅದೇಶಿಸಲಾಗಿದೆ.
ಶುಭಾ ಬಿ (ಕೆಎಂಎಎಸ್ ಅಧಿಕಾರಿ ) ಅವರನ್ನು ಮುಂದಿನ ಸ್ಥಳ ನಿಯುಕ್ತಿಗಾಗಿ ಅವರ ಮಾತೃ ಇಲಾಖೆಯಲ್ಲಿ ವರದಿ ಮಾಡಿಕೊಳ್ಳಲು ಸೂಚಿಸಲಾಗಿದೆ..
ವರದಿ ಪ್ರಕಾಶ್ ಬಿ ಕುರಗುಂದ.