ನಾಗರಿಕ ಕೇಂದ್ರೀತ ಆಡಳಿತ ನೀಡುವ ಉದ್ದೇಶವಿದೆ..
ಜನಸಾಮಾನ್ಯರಿಗೆ ಪಾಲಿಕೆಯಿಂದ ನೀಡುವ ಸೌಲಭ್ಯದಲ್ಲಿ ಪ್ರಾಮಾಣಿಕ ಸೇವೆ ನೀಡುತ್ತೇವೆ.
ಕಾರ್ತಿಕ ಎಂ, ಆಯುಕ್ತರು ಮಹಾನಗರ ಪಾಲಿಕೆ ಬೆಳಗಾವಿ..
ಬೆಳಗಾವಿ : ಯಾವುದೇ ಪಾಲಿಕೆಯ ಗುರಿ ಮತ್ತು ಉದ್ದೇಶಗಳು ಅಲ್ಲಿಯ ಜನಸಾಮಾನ್ಯರಿಗೆ ಉತ್ತಮ ಸೇವೆಯನ್ನು ನೀಡುವದು ಆಗಿರುತ್ತದೆ, ಅದೇ ರೀತಿ ನಾವು ಕೂಡಾ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ನಾಗರಿಕ ಕೇಂದ್ರೀತ ಆಡಳಿತವನ್ನು ನೀಡುವ ನಿಟ್ಟಿನಲ್ಲಿ ಕಾರ್ಯ ಮಾಡುತ್ತೇವೆ, ಪಾಲಿಕೆಯಿಂದ ಸಿಗುವ ಸೌಲಭ್ಯಗಳಲ್ಲಿ ನಾಗರಿಕರಿಗೆ ಪ್ರಾಮಾಣಿಕ ಸೇವೆ ನೀಡುತ್ತೇವೆ ಎಂದು ಬೆಳಗಾವಿ ಪಾಲಿಕೆಯ ನೂತನ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಕಾರ್ತಿಕ್ ಎಂ ಅವರು ಹೇಳಿದ್ದಾರೆ..

ಸರ್ಕಾರದ ಆದೇಶದಂತೆ ಶುಕ್ರವಾರ ದಿನಾಂಕ 28/11/2025ರಂದು ಬೆಳಗಾವಿ ಪಾಲಿಕೆಯ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ನಾಗರಿಕರಿಗೆ ಉತ್ತಮ ಸೌಲಭ್ಯ ನೀಡುವದರ ಜೊತೆಗೆ ಸ್ವಚ್ಛ ಬೆಳಗಾವಿ ನಗರದ ಯೋಜನೆಯನ್ನು ಅನುಷ್ಠಾನಗೊಳಿಸುವ ಉದ್ದೇಶವಿದೆ, ಪಾಲಿಕೆಯಲ್ಲಿ ಇರುವ ಎಲ್ಲಾ ಸೇವೆಗಳು ನಾಗರಿಕರಿಗೆ ತಲುಪಬೇಕು, ಅದರ ಜಾಗೃತಿ ಮತ್ತು ನೀಡುವ ಸೇವೆಯಲ್ಲಿ ಪ್ರಾಮಾಣಿಕ ಕಾರ್ಯ ಮಾಡುತ್ತೇವೆ ಎಂದಿದ್ದಾರೆ.
ಜನರಿಗೆ ಹತ್ತಿರವಾದ ಆಡಳಿತ ನೀಡುವ ನಿಟ್ಟಿನಲ್ಲಿ ಕಾರ್ಯ ಮಾಡುತ್ತ, ಪಾಲಿಕೆಯ ಎಲ್ಲಾ ವಿಭಾಗಗಳಲ್ಲಿ ಇರುವ ಪ್ರಸ್ತುತ ಸನ್ನಿವೇಶಗಳನ್ನು ತಿಳಿದುಕೊಂಡು, ಉತ್ತಮ ಕ್ರಿಯಾಯೋಜನೆ ತಯಾರಿಸಿ, ಸಮರ್ಪಕವಾಗಿ ಅನುಷ್ಠಾನ ಮಾಡುವ ಹಾದಿಯಲ್ಲಿ ಕಾರ್ಯ ಮಾಡಬೇಕಾಗುತ್ತದೆ ಅದನ್ನು ನಾವು ಮಾಡುತ್ತೇವೆ ಎಂದಿದ್ದಾರೆ.

ಅಧಿಕಾರಿಗಳಿಗೆ ಸರ್ಕಾರಗಳು ಆಡಳಿತಗಳು ಯಾವವು ಇದ್ದರೂ ವ್ಯತ್ಯಾಸ ಆಗುವದಿಲ್ಲ ನಾವು ಇಲಾಖೆಗಳ ನಿಯಮಾವಳಿಗಳ ಪ್ರಕಾರ ಕೆಲಸ ಮಾಡುತ್ತೇವೆ, ನಿಸ್ವಾರ್ಥ ಸೇವೆ ಹಾಗೂ ನುಟ್ರಲ್ ಆಗಿ ಕೆಲಸ ಮಾಡುತ್ತೇವೆ ಎಂದ ಅವರು, ಚಿತ್ರದುರ್ಗ ಗುಲ್ಬರ್ಗದಲ್ಲಿ ಕೆಲಸ ಮಾಡಿದ್ದು, ಬೆಳಗಾವಿಯಲ್ಲಿ ಇದೆ ಮೊದಲ ಸೇವೆ ಎಂದಿದ್ದಾರೆ.

ನನಗೆ ಈಗ ಒಂದು ಜವಾಬ್ದಾರಿ ನೀಡಿದ್ದಾರೆ ಎಂದರೆ ಅದಕ್ಕೆ ನಮ್ಮ ಪೂರ್ಣ ಪ್ರಮಾಣದ ಪ್ರಯತ್ನ ಹಾಕಿ, ಜವಾಬ್ದಾರಿಯಿಂದ ಭಾಗಿಯಾಗಿ, ಸರ್ಕಾರದ ಆದೇಶದಂತೆ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತೇವೆ ಎಂದಿದ್ದಾರೆ..
ವರದಿ ಪ್ರಕಾಶ್ ಬಸಪ್ಪ ಕುರಗುಂದ..