ಬೆಳಗಾವಿಯಲ್ಲಿ ಗ್ಯಾರೆಂಟಿ ಯೋಜನೆಗಳ ಕಾರ್ಯಾಗಾರ ಹಾಗೂ ಪ್ರಗತಿ ಪರಿಶೀಲನಾ ಸಭೆ..
ಗ್ಯಾರೆಂಟಿ ಯೋಜನೆಗಳಿಂದ ಆಗುವ ಲಾಭವನ್ನು ಸದ್ಭಳಕೆ ಮಾಡಿಕೊಳ್ಳಿ..
ಸಚಿವ ಸತೀಶ ಜಾರಕಿಹೊಳಿ..
ಬೆಳಗಾವಿ : ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರೆಂಟಿ ಯೋಜನೆಗಳು ರಾಜ್ಯದ ಬಡ ಹಾಗೂ ಮಧ್ಯಮ ವರ್ಗದ ಜನತೆಯ ಆರ್ಥಿಕ ಸ್ಥಿತಿಯ ಸುಧಾರಣೆಗೆ ಕಾರಣವಾಗಿದ್ದು, ಗ್ಯಾರೆಂಟಿ ಯೋಜನೆಗಳಿಂದ ಆಗುವ ಲಾಭವನ್ನು ಸರಿಯಾಗಿ ಸದ್ಭಳಕೆ ಮಾಡಿಕೊಳ್ಳಬೇಕೆಂದು ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಹೇಳಿದ್ದಾರೆ.
ರವಿವಾರ ದಿನಾಂಕ 30/11/2025ರಂದು ನಗರದ ಕುಮಾರ ರಂಗ ಮಂದಿರದಲ್ಲಿ ನಡೆದ ರಾಜ್ಯ ಸರ್ಕಾರದ ಪಂಚ ಗ್ಯಾರೆಂಟಿ ಯೋಜನೆಗಳಾದ ಗೃಹಜ್ಯೋತಿ, ಯುವನಿಧಿ, ಗೃಹಲಕ್ಷ್ಮಿ, ಶಕ್ತಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆಗಳ ಕಾರ್ಯಗಾರ ಮತ್ತು ಪ್ರಗತಿ ಪರಿಶೀಲನಾ ಕಾರ್ಯಕ್ರಮದ ಉದ್ಘಾಟನೆ ಮಾಡಿ, ಉದ್ಘಾಟನಾ ನುಡಿಗಳನ್ನು ಆಡಿದ ಸಚಿವರು ಈ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಇಂತಹ ಪರಿಶೀಲನಾ ಸಭೆಗಳನ್ನು ಮಾಡುತ್ತಿದ್ದು, ಗ್ಯಾರೆಂಟಿ ಯೋಜನೆಗಳು ಎಲ್ಲಾ ಜನತೆಗೆ ತಲುಪಲು ಇಂತಹ ಕಾರ್ಯಗಾರ ಸಹಕಾರಿಯಾಗಲಿವೆ ಎಂದಿದ್ದಾರೆ.

ಈ ಯೋಜನೆ ಆರಂಭ ಆದಾಗ ಬಹಳ ಟೀಕೆಗಳಾದವು, ಇವುಗಳನ್ನು ನೀಡಿದರೆ ರಾಜ್ಯ ಆರ್ಥಿಕ ದಿವಾಳಿ ಆಗುತ್ತದೆ ಎಂದರು ಆದರೆ ಕಳೆದ 24 ತಿಂಗಳಿಂದ ನಮ್ಮ ಸರ್ಕಾರ ಯೋಜನೆಗಳನ್ನು ನೀಡುತ್ತಿದೆ,
ಸರ್ಕಾರಕ್ಕೆ ಎಷ್ಟೇ ತೊಂದರೆ ಆದರೂ ಜನತೆಗೆ ನಾವು ನೀಡಿದ ಭರವಸೆಯನ್ನು ತಪ್ಪದಂತೆ ನಡೆದುಕೊಳ್ಳುತ್ತಿದ್ದೇವೆ ಎಂದರು.
ರಾಜ್ಯ ಕಾಂಗ್ರೆಸ್ ಸರ್ಕಾರ ತಮಗಾಗಿ ಇಂತಹ ಮಹತ್ವದ ಯೋಜನೆಗಳನ್ನು ನೀಡುತ್ತಿರುವಾಗ ಇದರಿಂದ ತಮ್ಮ ಆರ್ಥಿಕ ಸ್ಥಿತಿ ಸುಧಾರಣೆ ಆಗಬೇಕು, ಈ ಯೋಜನೆಗಳು ಸದುಪಯೋಗ ಆಗಬೇಕು, ಇದರಿಂದ ಪ್ರತಿ ಕುಟುಂಬದ ಪ್ರಗತಿ ಆಗಬೇಕು. ಶಿಕ್ಷಣ, ಆರೋಗ್ಯ ಮುಂತಾದ ರೀತಿಯಲ್ಲಿ ಉತ್ತಮ ಪ್ರಗತಿಗಾಗಿ ಉಪಯೋಗಿಸಬೇಕು ಎಂದರು.

ದೇಶದ ಇತಿಹಾಸದಲ್ಲಿ ಸುಳ್ಳು ಹೇಳುವವರನ್ನು ಜನ ಹೆಚ್ಚು ನಂಬುತ್ತಾರೆ, ಹಾಗಾಗದೆ ಯಾರು ತಮ್ಮ ಕಷ್ಟಕ್ಕೆ ಸಹಕಾರಿಯಾಗಿದ್ದಾರೆ ಎಂದು ನೀವು ತಿಳಿಯಬೇಕಿದೆ, ಐದು ವರ್ಷಗಳಲ್ಲಿ ರಾಜ್ಯದ ಜನತೆಗೆ ಗ್ಯಾರೆಂಟಿ ಯೋಜನೆಗಳಿಗಾಗಿ ಸುಮಾರು 3ಲಕ್ಷ ಕೋಟಿ ನೀಡುವ ಸಿದ್ದರಾಮಯ್ಯ ಸರ್ಕಾರದ ಬಗ್ಗೆ ನೀವು ಸಕಾರಾತ್ಮಕ ಪ್ರಚಾರ ಮಾಡಬೇಕು ಎಂದರು.
ಈ ಹಿಂದೆ 70 ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷ ಇಂತಹ ಅನೇಕ ಕಾರ್ಯಕ್ರಮಗಳನ್ನು ಬಡವರಿಗಾಗಿ ಜಾರಿಗೆ ತಂದಿದ್ದು ಅದರಲ್ಲಿ ರೋಟಿ ಕಪಡಾ ಮಕಾನ್, ಭೂವಡೆತನ ಮುಂತಾದವುಗಳಿವೆ, ಇವುಗಳನ್ನು ನೀವು ಪ್ರಚಾರ ಮಾಡಬೇಕು, ಪ್ರತಿತಿಂಗಳು ಐದು ಗ್ಯಾರೆಂಟಿ ಸೇರಿ ಒಂದು ಕುಟುಂಬಕ್ಕೆ ತಿಂಗಳಿಗೆ ಸುಮಾರು 5 ಸಾವಿರ ನೀಡುವಂತ ಸಿದ್ದರಾಮಯ್ಯ ಸರ್ಕಾರದ ಬಗ್ಗೆ ತಾವು ಒಳ್ಳೆಯ ಪ್ರಚಾರ ಮಾಡಿ, ಇದರಲ್ಲಿ ಇರುವ ಸಣ್ಣ ಪುಟ್ಟ ಸಮಸ್ಯೆಗಳನ್ನು ಮುಂದಿನ ದಿವಸಗಳಲ್ಲಿ ಬಗೆಹರಿಸುತ್ತೇವೆ. ಎಂದರು.

ಇದಕ್ಕೂ ಮೊದಲು ಕರ್ನಾಟಕ ರಾಜ್ಯ ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಎಚ್ ಎಂ ರೇವಣ್ಣ ಅವರು ಮಾತನಾಡಿ, ಇವತ್ತು ಬೆಳಗಾವಿಯಲ್ಲಿ ಈ ಸಂಭ್ರಮವನ್ನು ನೋಡಿ ಖುಷಿಯಾಗಿದೆ, ಬಿಟ್ಟಿ ಭಾಗ್ಯ ಎನ್ನುವವರಿಗೆ ಈ ಸಭೆಯಲ್ಲಿ ಉತ್ತಮ ಉತ್ತರವನ್ನು ಈ ಕಾರ್ಯಕ್ರಮದ ಉಪನ್ಯಾಸಕರು ನೀಡಿದ್ದಾರೆ, ಗ್ಯಾರೆಂಟಿ ಯೋಜನೆಗಳು ಕೇವಲ ಮಹಿಳೆಯರಿಗೆ ಅಷ್ಟೇ ಅಲ್ಲ, ಅವು ಇಡೀ ಸಂಸಾರಕ್ಕೆ ಸಹಾಯವಾಗಿವೆ. ಪುರುಷರಿಗೂ ಕೂಡಾ ಪರೋಕ್ಷವಾಗಿ ಇದರಿಂದ ಸಹಾಯ ಆಗಿದೆ. ಇಂದಿರಾಗಾಂಧಿ ರಾಜೀವಗಾಂಧಿ ಅವರ ಕಾಲದಿಂದಲೂ ಕಾಂಗ್ರೆಸ್ ಜನಪರ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದೆ ಎಂದಿದ್ದಾರೆ..
ದೇವರಾಜ ಅರಸು ಅವರು ನೀಡಿದ ಉಳುವವನೆ ಭೂಮಿಯ ಒಡೆಯ ಹಾಗೂ ಇಪ್ಪತ್ತು ಅಂಶಗಳ ಕಾರ್ಯಕ್ರಮವನ್ನು ಯಾರು ಮರೆಯಲು ಸಾಧ್ಯವಿಲ್ಲ, ಗುಂಡೂರಾಯರ ನಿರುದ್ಯೋಗಿಗಳಿಗೆ ಸ್ಟೈ ಪಂಡ ನೌಕರಿಯಲ್ಲಿ ಮಾಡಿದ ಸುಧಾರಣೆ,
ಎಸ್ ಬಂಗಾರಪ್ಪ ಅವರ ರೈತರಿಗೆ ನೀಡಿದ ಉಚಿತ ವಿದ್ಯುತ್, ಆಶ್ರಯ ಯೋಜನೆಯಲ್ಲಿ ಮಾಡಿದ ಸಾಧನೆ,
ವೀರಪ್ಪ ಮೊಯ್ಲಿ ಸಿಇಟಿ ಪರೀಕ್ಷೆ ಜಾರಿಗೆ ತಂದಿದ್ದು, ಎಸ್ ಎಂ ಕೃಷ್ಣ ಅವರ ಆಧುನಿಕ ಕರ್ನಾಟಕದ ವಿವಿಧ ಕೊಡುಗೆಗಳು, ಇನ್ನು ಈಗಿನ ಬಡವರ ಮುಖ್ಯಮಂತ್ರಿ
ಇವತ್ತು ಭಾಗ್ಯಗಳ ಸರದಾರ ಎಂದು ಕರೆಸಿಕೊಳ್ಳುವ ಸಿದ್ದರಾಮಯ್ಯ ಅವರು ಜಾರಿಗೆ ತಂದ ಗ್ಯಾರೆಂಟಿ ಯೋಜನೆಗಳಿಂದ ಈ ಎರಡುವರೆ ವರ್ಷದಲ್ಲಿ ಒಂದು ಕೋಟಿ ಐವತ್ತು ಲಕ್ಷ ಕೋಟಿಗಳಷ್ಟು ಇಂದು ಜನತೆಗೆ ನೇರವಾಗಿ ಲಭಿಸಿದೆ, ಒಬ್ಬ ಅರ್ಥಶಾಸ್ತ್ರಜ್ಞನಾಗಿ ರಾಜ್ಯದ ಜನತೆಗೆ ನೀಡಿದ ಇಂತಹ ಮಾಹಾನ್ ಕೊಡುಗೆಯನ್ನು ಎಲ್ಲರೂ ಮೆಚ್ಚಬೇಕಾದದ್ದು ಎಂದರು.
ವರದಿ ಪ್ರಕಾಶ್ ಬಿ ಕುರಗುಂದ..