ಬೆಳಗಾವಿ ಸ್ಮಾರ್ಟ್ ಸಿಟಿಯ ಎಂ ಡಿ ಆಗಿ ಕವಿತಾ ವಾರಂಗಲ್ ಅಧಿಕಾರ ಸ್ವೀಕಾರ..
ನಗರವಾಸಿಗಳಿಗೆ ಸುಧಾರಿತ ಆಧುನಿಕ ಗುಣಮಟ್ಟದ ಜೀವನ ಶೈಲಿಯನ್ನು ನೀಡುವುದೇ ಸ್ಮಾರ್ಟ್ ಸಿಟಿಯ ಉದ್ದೇಶ..
ಬೆಳಗಾವಿ : ನಗರವಾಸಿಗಳಿಗೆ ಸುಧಾರಿತ, ಗುಣಮಟ್ಟದ ಜೀವನ ಹಾಗೂ ಆಧುನಿಕರಣದ ಸೌಲಭ್ಯಗಳನ್ನು ನೀಡುವುದರ ಮೂಲಕ ಅವರ ಜೀವನ ಶೈಲಿಯಲ್ಲಿ ಬದಲಾವಣೆ ತರುವುದೇ ಸ್ಮಾರ್ಟ್ ಸಿಟಿ ಕಲ್ಪನೆಯ ಉದ್ದೇಶ, ಅದನ್ನು ಸಮರ್ಥವಾಗಿ ನೆರವೇರಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು, ಬೆಳಗಾವಿ ಸ್ಮಾರ್ಟ್ ಸಿಟಿಯ ನೂತನ ವ್ಯವಸ್ಥಾಪಕ ನಿರ್ದೇಶಕರಾದ ಕವಿತಾ ಎಂ ವಾರಂಗಲ್ ಅವರು ಹೇಳಿದ್ದಾರೆ..
ಬುಧವಾರ ದಿನಾಂಕ 03/12/2025 ರಂದು ಬೆಳಗಾವಿ ಸ್ಮಾರ್ಟ್ ಸಿಟಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಅಧಿಕಾರ ಸ್ವೀಕಾರ ಮಾಡಿದ ಅವರು, ಬೆಳಗಾವಿ ಸ್ಮಾರ್ಟ್ ಸಿಟಿಯಲ್ಲಿ ಸೇವೆ ಮಾಡುವ ಇಚ್ಛೆ ಬಹಳ ದಿನಗಳಿಂದ ಇತ್ತು, ಅದು ಈಗ ಸಾಧ್ಯವಾಗಿದೆ, ನಗರದ ಜನತೆಗೆ ಸುಧಾರಿತ, ಆಧುನಿಕ ಸೌಲಭ್ಯಗಳನ್ನು ನೀಡುವುದರ ಜೊತೆಗೆ, ಹಿರಿಯ ನಾಗರಿಕರಿಗೆ ಉತ್ತಮ ಸೇವೆಗಳನ್ನು ನೀಡುಬೇಕು, ಆ ಮೂಲಕ ಜನರ ಜೀವನ ಮಟ್ಟವನ್ನು ಸ್ಮಾರ್ಟ್ ಆಗಿಸುವ ಸಮರ್ಥ ಸೇವೆಯನ್ನು ನೀಡುತ್ತೇವೆ ಎಂದಿದ್ದಾರೆ.
ಈ ಹಿಂದೆ 2013 ರಿಂದ 2017ರ ವರೆಗೆ ಬೆಳಗಾವಿಯಲ್ಲಿ ಅಂಬೇಡ್ಕರ ಅಭಿವೃದ್ಧಿ ನಿಗಮದ ಬೆಳಗಾವಿ ವಿಭಾಗದ ಉಪಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸಿದ ಅನುಭವ ಇದ್ದು, ನಂತರ ಬೆಂಗಳೂರಿನಲ್ಲಿ ವಾಲ್ಮೀಕಿ ಅಭಿವೃದ್ದಿ ಹಾಗೂ ಅಂಬೇಡ್ಕರ ಅಭಿವೃದ್ಧಿ ನಿಗಮಗಳಲ್ಲಿ ಸೇವೆಗೈದಿದ್ದು, ಜನತೆಗೆ ನೇರವಾಗಿ ಸೌಲಭ್ಯ ತಲುಪಿಸಿದ್ದು ತೃಪ್ತಿ ಹಾಗೂ ಗೌರವ ನೀಡಿದೆ. ಮತ್ತೆ ಈಗ ಬೆಳಗಾವಿಯ ಸ್ಮಾರ್ಟ್ ಸಿಟಿಯಲ್ಲಿಯ ಕಾರ್ಯನಿರ್ವಹನೆ ಸಂತಸ ತಂದಿದೆ ಎಂದಿದ್ದಾರೆ.

ನಾನು ಒಬ್ಬ ವಾಣಿಜ್ಯ ಶಾಸ್ತ್ರದ ವಿದ್ಯಾರ್ಥಿ ಆಗಿದ್ದು, ಸ್ಮಾರ್ಟ್ ಸಿಟಿಯ ಕಾರ್ಯಗಳು, ವಿಷಯಗಳು ಹತ್ತಿರವಾಗಿರುತ್ತವೆ ಅದರಿಂದ ಈ ಕಾರ್ಯದಲ್ಲಿ ಆಸಕ್ತಿ ಸಹಜವಾಗಿರುತ್ತದೆ, ನಗರ ಪ್ರದೇಶದಲ್ಲಿ ಆಧುನಿಕ ತಂತ್ರಜ್ಞಾನದ ಅಳವಡಿಕೆ, ಹಿರಿಯ ನಾಗರಿಕರಿಗೆ ಉತ್ತಮ ಸೌಲಭ್ಯಗಳ ನೀಡಿಕೆ ಹಾಗೂ ಸಮಯ ಉಳಿತಾಯ ಮಾಡಿ, ಸುಂದರ ಸ್ಮಾರ್ಟ್ ನಗರವನ್ನು ಸಾರ್ವಜನಿಕರಿಗೆ ಕಲ್ಪಿಸುವ ಇಂಗಿತವಿದೆ ಎಂದಿದ್ದಾರೆ.
ಸ್ಮಾರ್ಟ್ ಸಿಟಿಯಿಂದ ಆಗುತ್ತಿರುವ ಬಹುತೇಕ ಯೋಜನೆಗಳು ಪೂರ್ಣಗೊಂಡಿದ್ದು ಇನ್ನು ಕೆಲವೇ ಮಹತ್ವಪೂರ್ಣ ಯೋಜನೆಗಳು ಬಾಕಿ ಉಳಿದಿದ್ದು, ಅವುಗಳಲ್ಲಿ ಭಾರತದ ಸಂಸ್ಕೃತಿ, ಇತಿಹಾಸ, ಪರಂಪರೆಗಳ ಬದಲಾವಣೆ, ಬೆಳವಣಿಗೆ ಮುಂತಾದ ಅಂಶಗಳನ್ನು ಪ್ರದರ್ಶನ ಮಾಡುವ ಸಂಗ್ರಹಾಲಯಗಳು ಹಾಗೂ ವೀಕ್ಷಣಾ ಕೇಂದ್ರಗಳನ್ನು ನಿರ್ಮಿಸುವ ಯೋಜನೆಗಳಿದ್ದು, ಇದರಿಂದ ನಮ್ಮ ಮುಂದಿನ ಪೀಳಿಗೆಗೆ ಗತಕಾಲದ ಜೀವನದ ಹಾಗೂ ಅಲ್ಲಿರುವ ಸ್ವಾರಸ್ಯಕರ ವಿರಳ ವಸ್ತುಗಳನ್ನು ವೀಕ್ಷಿಸುವಂತಾಗುತ್ತದೆ, ಜೊತೆಗೆ “ಭಾರತೀಯ ಹಳ್ಳಿಗಳು” ಎಂಬ ಕಲ್ಪನೆಯಲ್ಲಿ ಪೂರ್ವ ಪಶ್ಚಿಮ ಉತ್ತರ ದಕ್ಷಿಣ ಎಂದು ನಾಲ್ಕು ಕಡೆಯ ಭಾರತದ ವಿಶೇಷ ಹಳ್ಳಿಗಳನ್ನು ನಿರ್ಮಿಸುವ ಯೋಜನೆ ಇದೆ ಎಂದರು..
ಒಟ್ಟಿನಲ್ಲಿ ನಗರದ ಸುಂದರತೆ ಹಾಗೂ ಸುಧಾರಣೆಗಾಗಿ ಹಲವು ಯೋಜನೆಗಳಲ್ಲಿ ಕಾರ್ಯ ನಿರ್ವಹಿಸಲು ಸಿದ್ದರಾಗಿರುವ ಸ್ಮಾರ್ಟ್ ಸಿಟಿಯ ನೂತನ ವ್ಯವಸ್ಥಾಪಕ ನಿರ್ದೇಶಕರಾದ ಕವಿತಾ ವಾರಂಗಲ್ ಅವರಿಗೆ ಯಶಸ್ಸು ದೊರೆಯಲಿ ಎಂದು ಕೆಲ ನಗರವಾಸಿಗಳು ಅವರನ್ನು ಬೆಳಗಾವಿ ನಗರಕ್ಕೆ ಆತ್ಮೀಯವಾಗಿ ಸ್ವಾಗತ ಕೊರಿದ್ದಾರೆ..
ವರದಿ ಬಿ, ಕೆ, ಪ್ರಕಾಶ..