ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಅಣಕು ಸಂಸತ್ ಕಾರ್ಯಕಲಾಪ ಪ್ರದರ್ಶನ..

ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಂದ ಅಣಕು ಸಂಸತ್ ಕಾರ್ಯಕಲಾಪ ಪ್ರದರ್ಶನ..

ಬೆಳಗಾವಿ 09 : ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಮಂಗಳವಾರ ದಿ. 9 ರಂದು ಬೆಳಗಾವಿ ಚಳಿಗಾಲ ಅಧಿವೇಶನ ಅಂಗವಾಗಿ, ಸುವರ್ಣ ವಿಧಾನಸೌಧದ ಸಭಾಂಗಣದಲ್ಲಿ ‘ಅಣುಕು ಸಂಸತ್ ಕಾರ್ಯಕಲಾಪ ‘ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಅಧಿವೇಶನ ಸಂದರ್ಭದಲ್ಲಿ ನಡೆಯುವ ಪ್ರಮಾಣವಚನ, ಪ್ರಶ್ನೋತ್ತರ ವೇಳೆ, ಶೂನ್ಯವೇಳೆಯ ಕಲಾಪ, ಮಸೂದೆಗಳ ಮಂಡನೆ ಇತ್ಯಾದಿ ಕಲಾಪದ ಕಾರ್ಯಕ್ರಮಗಳನ್ನು ಹಂತ ಹಂತವಾಗಿ ಪ್ರಸ್ತುತಪಡಿಸಿದರು. ಕಲಾಪದಲ್ಲಿ ಸಭಾಧ್ಯಕ್ಷರಾಗಿ ಸೂಫಿಯಾ ಸನದಿ, ಮುಖ್ಯಮಂತ್ರಿಯಾಗಿ ಸಾಧನಾ ಅಗಸಿಬಾಗಿಲ, ಸದಸ್ಯರಾಗಿ ಭೂಮಿಕಾ ಕುರುಬರ, ಅಂಕಿತಾ ಗಣಾಚಾರಿಮಠ, ಶ್ವೇತಾ ಬಡಿಗೇರ, ವೀಣಾ ಪರುಶಟ್ಟಿ, ಸಮೀಕ್ಷಾ ಸುತಾರ, ಮಧುಶ್ರೀ ಮಠಪತಿ, ತನುಜಾ ಕೆಂಪಗುತ್ತಿ, ಭರತ ಮಾನಗಾವಿ, ಶ್ರೀಜನ ಹರಿಜನ ಸೇರಿದಂತೆ 20 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಮಾರ್ಗದರ್ಶಿ ಶಿಕ್ಷಕಿ ಸುಮಿತ್ರಾ ಕರವಿನಕೊಪ್ಪ, ಶಿವಾನಂದ ತಲ್ಲೂರ, ಮಹೇಶ ಅಕ್ಕಿ ಸೇರಿದಂತೆ ವಿವಿಧ ಶಾಲೆಗಳ ನೂರಾರು ಮಕ್ಕಳು ಸಭಾಂಗಣದಲ್ಲಿ ಉಪಸ್ಥಿತರಿದ್ದು ಕಾರ್ಯಕ್ರಮ ವೀಕ್ಷಿಸಿದರು.

Leave a Reply

Your email address will not be published. Required fields are marked *