ಸಿಎಂ ಸಿದ್ದರಾಮಯ್ಯ ಅವರಿಂದ ಇ-ಖಾತಾ ಲೋಕಾರ್ಪಣೆ..
ನಗರಗಳ ಅಭಿವೃದ್ದಿಗಾಗಿ ಹಲವು ಯೋಜನೆಗಳನ್ನು ತಂದಿದ್ದೇವೆ..
ಪೌರ ಕಾರ್ಮಿಕರ ಕಲ್ಯಾಣದ ಪರವಾಗಿ ನಮ್ಮ ಸರ್ಕಾರವಿದೆ..
ಸಚಿವ ಭೈರತಿ ಸುರೇಶ..
ಬೆಳಗಾವಿ : ನಗರ ಪ್ರದೇಶಗಳು ಅಭಿವೃದ್ಧಿಯಾದರೆ, ಅಲ್ಲಿ ಆಧುನಿಕತೆಯನ್ನು ಅಳವಡಿಸಿಕೊಂಡು ಜನರ ಜೀವನ ಮಟ್ಟ ಸುಧಾರಣೆಯಾದರೆ ಅದು ಇಡೀ ಸಮಾಜದ ಪ್ರಗತಿಗೆ ದಾರಿಯಾಗುತ್ತದೆ, ಅದಕ್ಕಾಗಿ ನಗರ ಹಾಗೂ ಮಹಾನಗರಗಳ ಅಭಿವೃದ್ಧಿ ದೃಷ್ಟಿಯಿಂದ ನಮ್ಮ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ ಹಾಗೂ ತರುತ್ತಿದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ ಅವರು ಹೇಳಿದ್ದಾರೆ..
ಗುರುವಾರ ದಿನಾಂಕ 18/12/2025 ರಂದು ಮಧ್ಯಾಹ್ನ 3 ಗಂಟೆಗೆ ನಗರದ ಸುವರ್ಣ ವಿಧಾನ ಸೌಧದ ಸೆಂಟ್ರಲ್ ಹಾಲ್ ಸಭಾಂಗಣದಲ್ಲಿ ಜರುಗಿದ ಇ ಖಾತಾ ಲೋಕಾರ್ಪಣೆ, ಪೌರ ಕಾರ್ಮಿಕರಿಗೆ ನೇಮಕಾತಿ ಆದೇಶ ಹಾಗೂ ಪೌರ ಕಾರ್ಮಿಕರಿಗೆ ಗೃಹ ಭಾಗ್ಯದ ಯೋಜನೆ ಅಡಿಯಲ್ಲಿ ನಿರ್ಮಿಸಿರುವ ಮನೆಗಳ ಬೀಗದ ಕೈ ನೀಡುವ ಕಾರ್ಯಕ್ರಮವನ್ನು ರಾಜ್ಯದ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದರು.

ಕಾರ್ಯಕ್ರಮದ ಉದ್ಘಾಟನೆ ನಂತರ ಮಾತನಾಡಿದ ಸಚಿವ ಭೈರತಿ ಸುರೇಶ ಅವರು, ನಮ್ಮ ಸರ್ಕಾರ ನಗರಭಿವೃದ್ಧಿ ಹಾಗೂ ಪೌರಾಡಳಿತ ಇಲಾಖೆಗಳಿಂದ ಸಣ್ಣ ಪುಟ್ಟ ಹಾಗೂ ಮಹಾನಗರಗಳ ಅಭಿವೃದ್ಧಿಗಾಗಿ ಅನೇಕ ಕಾರ್ಯಕ್ರಮ ಹಾಕಿಕೊಂಡು ಅವು ಕಾರ್ಯರೂಪಕ್ಕೂ ಬಂದಿವೆ, ಜೊತೆಗೆ ಪೌರ ಕಾರ್ಮಿಕರ ಕಲ್ಯಾಣಕ್ಕಾಗಿ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ, ಪೌರ ಕಾರ್ಮಿಕರ ಸೇವೆ ಬಹಳ ಮಹತ್ವದ್ದು, ಇಡೀ ನಗರಗಳನ್ನೆಲ್ಲ ಸ್ವಚ್ಛ ಹಾಗೂ ಸುಂದರವಾಗಿ ಇಡುವ ಪೌರ ಕಾರ್ಮಿಕರ ಸಲುವಾಗಿ ಅವರ ಕಲ್ಯಾಣಕ್ಕಾಗಿ ನಮ್ಮ ಸರ್ಕಾರ ಯಾವತ್ತೂ ಬದ್ದವಾಗಿರುತ್ತದೆ ಎಂದಿದ್ದಾರೆ..

ಈ ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ನಗರಾಭಿವೃದ್ಧಿ ಸಚಿವರಾದ ಭೈರತಿ ಸುರೇಶ್, ಬೃಹತ್ ಕೈಗಾರಿಕೆ ಇಲಾಖೆ ಸಚಿವರಾದ ಎಂ ಬಿ ಪಾಟೀಲ್, ಪೌರಾಡಳಿತ ನಿರ್ದೇಶನಾಲಯದ ಸಚಿವರಾದ ರಹೀಮ್ ಖಾನ, ಬೆಳಗಾವಿ ಉತ್ತರದ ಶಾಸಕರಾದ ಆಶಿಫ್ (ರಾಜು) ಸೇಠ್, ಬೆಳಗಾವಿ ಪಾಲಿಕೆಯ ಮಹಾಪೌರರಾದ ಮಂಗೇಶ ಪವಾರ, ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು, ಪಾಲಿಕೆಯ ನಗರ ಸೇವಕರು, ಪಾಲಿಕೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು..
ವರದಿ ಪ್ರಕಾಶ ಬಿ ಕೆ..