ಸುಡುಬಿಸಿಲ ಲೆಕ್ಕಿಸದೇ ವ್ಯಾಪಾರಿಗಳ ಸಮಸ್ಯೆ ಸರಿಪಡಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್..
ಮುಂಜಾನೆ ಸಮಸ್ಯೆ ಹೇಳಿಕೊಂಡ ವ್ಯಾಪಾರಿಗಳಿಗೆ ಮಧ್ಯಾಹ್ನವೇ ಪರಿಹಾರ ನೀಡಿದ ಸಚಿವರು..
ಬೆಳಗಾವಿ : ನಗರದ ಗಣೇಶಪುರ ಪೆಟ್ರೋಲ್ ಪಂಪ ಹತ್ತಿರದ ಪೈಪ ಲೈನ್ ರಸ್ತೆಯ ಬದಿಗಳಲ್ಲಿ ವ್ಯಾಪಾರ ಮಾಡುತ್ತಿರುವ ಸುಮಾರು ಹದಿನೈದರಿಂದ ಇಪ್ಪತ್ತು ಅಂಗಡಿಗಳ ವ್ಯಾಪಾರಿಗಳ ಸಮಸ್ಯೆಯನ್ನು ಬಿರುಬಿಸಿಲನ್ನು ಲೆಕ್ಕಿಸದೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆಯವರಾದ ಲಕ್ಷ್ಮಿ ಹೆಬ್ಬಾಳ್ಕರ ಅವರು ಪರಿಹರಿಸಿದ್ದಾರೆ.
ಮಂಗಳವಾರ ದಿನಾಂಕ 23/12/2025 ರಂದು ಮುಂಜಾನೆ ನಗರದ ಗಣೇಶಪುರ ಪೆಟ್ರೋಲ್ ಪಂಪ ವೃತ್ತದ ಹತ್ತಿರದಲ್ಲಿ ವ್ಯಾಪಾರ ಮಾಡುವ ಸುಮಾರು ಇಪ್ಪತ್ತಕ್ಕೂ ಹೆಚ್ಚು ಕುಟುಂಬಗಳು, ತಮಗೆ ಸ್ಥಳೀಯ ಗ್ರಾಮ ಪಂಚಾಯತಿಯಿಂದ ಆಗುತ್ತಿರುವ ಸಮಸ್ಯೆಗಳನ್ನು ಸಚಿವರ ಮುಂದೆ ಹೇಳಿಕೊಂಡಿದ್ದು, ಸಚಿವೆಯರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಮದ್ಯಾಹ್ನವೇ ಕಡುಬಿಸಿಲಿನಲ್ಲಿ ಸ್ಥಳಕ್ಕೆ ಆಗಮಿಸಿ, ಸಂಬಂದಿಸಿದ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ, ವ್ಯಾಪಾರಿಗಳ ಸಮಸ್ಯೆಯನ್ನು ದೂರ ಮಾಡಿದ್ದಾರೆ.

ಹಣ್ಣು, ತರಕಾರಿ, ಸ್ನಾಕ್ಸ್, ಪಾಸ್ಟ ಫುಡ್, ಜ್ಯೂಸ, ಐಸ್ ಕ್ರೀಮ್ ಹಾಗೂ ಇನ್ನಿತರ ಅಂಗಂಡಿಗಳ ವ್ಯಾಪಾರಿಗಳು ಇಲ್ಲಿ ಪ್ರತಿನಿತ್ಯ ಸಂಜೆವೇಳೆ ತಮ್ಮ ವ್ಯಾಪಾರ ಮಾಡುತ್ತಿದ್ದು, ಪ್ರತಿದಿನ ಗ್ರಾಮ ಪಂಚಾಯತಿಗೆ ಭೂ ಬಾಡಿಗೆಯನ್ನೂ ಕೂಡಾ ನೀಡುತ್ತಿದ್ದರು, ಹೀಗಿರುವಾಗ ಗ್ರಾಮ ಪಂಚಾಯತಿ ಸಿಬ್ಬಂದಿಗಳು ಬಂದು ತಾವು ಇಲ್ಲಿ ಕುಳಿತು ವ್ಯಾಪಾರ ಮಾಡಬಾರದು, ಸಂಚಾರಿ ತೊಂದರೆ ಆಗುತ್ತಿದೆ, ನಾಳೆಯಿಂದ ತಮ್ಮ ಅಂಗಡಿ ಮುಗ್ಗಟ್ಟುಗಳನ್ನು ಖಾಲಿ ಮಾಡಬೇಕೆಂದು ಹೇಳುತ್ತಾ ವ್ಯಾಪಾರಿಗಳಿಗೆ ತೊಂದರೆ ನೀಡುತ್ತಿದ್ದರು.
ಇಂದು ಮಧ್ಯಾಹ್ನ ಸ್ಥಳಕ್ಕೆ ಆಗಮಿಸಿದ ಸಚಿವರು, ವ್ಯಾಪಾರಿಗಳಿಗೆ ಹಾಗೂ ಅವರ ವ್ಯಾಪಾರಕ್ಕೆ ಯಾವುದೇ ತೊಂದರೆ ನೀಡಬಾರದು, ಬಡವರು ತಮ್ಮ ಉಪಜೀವನಕ್ಕೆ ಸಂಜೆ ವೇಳೆ ಇಲ್ಲಿ ವ್ಯಾಪಾರ ಮಾಡುತ್ತಿದ್ದಾರೆ, ಅಂತವರಿಗೆ ತೊಂದರೆ ನೀಡಬೇಡಿ, ಜೊತೆಗೆ ಸಾಯಂಕಾಲ ಬಂದು ಕೆಲವೇ ಗಂಟೆ ಇಲ್ಲಿ ವ್ಯಾಪಾರ ಮಾಡುವ ಇವರ ಹತ್ತಿರ ಭೂ ಬಾಡಿಗೆಯನ್ನೂ ಕೂಡಾ ಸಂಗ್ರಹಿಸಬಾರದು ಎಂದು ಗ್ರಾಮ ಪಂಚಾಯತಿ ಪಿಡಿಓ ಹಾಗೂ ಸಿಬ್ಬಂದಿಗಳಿಗೆ ಸೂಚನೆಯನ್ನು ನೀಡಿದ್ದಾರೆ.

ಸಚಿವರ ಮಾತಿನಿಂದ ಸಂತಸಗೊಂಡ ವ್ಯಾಪಾರಿಗಳು, ಅವರು ನೀಡಿದ ಭರವಸೆಯಿಂದ ನೆಮ್ಮದಿಯಿಂದ ವ್ಯಾಪಾರ ಮಾಡುವಂತಾಗಿದ್ದು, ತಮ್ಮ ಸಮಸ್ಯೆಗೆ ಸ್ಪಂದಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ..
ವರದಿ ಪ್ರಕಾಶ್ ಬಿ ಕೆ..