ಜೈನಮುನಿ ಹತ್ಯಯ ತನಿಖೆ ಪಾರದರ್ಶಕವಾಗಿ ಆಗಬೇಕು, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು..
ನಳಿನಕುಮಾರ ಕಟೀಲ್ ಹೇಳಿಕೆ..
ಬೆಳಗಾವಿ : ಮಂಗಳವಾರ ನಗರದ ಪ್ರವಾಸಿ ಮಂದಿರಕ್ಕೆ ಆಗಮಿಸಿದ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾದ ನಳಿನಕುಮಾರ್ ಕಟೀಲ್ ಅವರು, ಕೆಲ ದಿನಗಳ ಹಿಂದೆ ಚಿಕ್ಕೋಡಿ ಸಮೀಪ ಹಿರೇಕೋಡಿಯಲ್ಲಿ ನಡೆದ ಜೈನ ಸ್ವಾಮೀಜಿ ಹತ್ಯೆಯ ಕುರಿತಾಗಿ ತಮ್ಮ ಸಂತಾಪ ಸೂಚಿಸುತ್ತಾ ಮೇಲಿನಂತೆ ಹೇಳಿದ್ದಾರೆ..
ಹಂತಕರು ಯಾರೇ ಆಗಿರಲಿ, ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕು, ಆರೋಪಿಗಳು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರಿಗೆ ಶಿಕ್ಷೆ ಆಗಬೇಕು ಎಂದರು..
ಆರೋಪಿಗಳು ಯಾರೂ, ಯಾವ ಕಾರಣಕ್ಕಾಗಿ ಈ ಕೃತ್ಯ ನಡೆದಿದೆ ಎಂಬುದು ಕೂಲಂಕುಷವಾಗಿ ತನಿಖೆಯಾಗಬೇಕು, ಯಾವುದೇ ಅಧ್ಯಯನವಿಲ್ಲದೇ ಜನರ ಭಾವನೆಗೆ ದಕ್ಕೆ ತರುವಂತೆ ಯಾರೂ ಮಾತನಾಡಬಾರದು ಎಂದರು..
ನಮ್ಮ ಪಕ್ಷದಿಂದ ರಾಜ್ಯ ಮತ್ತು ಜಿಲ್ಲಾಮಟ್ಟದ ನಾಯಕರು ಎಲ್ಲರೂ ಸೇರಿ, ಒಕ್ಕಟ್ಟಾಗಿ ಇಂದು ಘಟನೆಯಾದ ಸ್ಥಳಕ್ಕೆ ಹೋಗುತ್ತಿದ್ದೇವೆ, ಮುಂದೆಯೂ ಕೂಡಾ ನಮ್ಮ ಪಕ್ಷದಿಂದ ಈ ಘಟನೆಗೆ ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇವೆ ಎಂದರು…
ಇನ್ನೂ ವಿರೋಧ ಪಕ್ಷದ ನಾಯಕನ ಆಯ್ಕೆಯ ನಿಧಾನತೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಆದಷ್ಟೂ ಬೇಗ ವಿರೋಧ ಪಕ್ಷದ ನಾಯಕರ ನೇಮಕ ಆಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು…
ವರದಿ ಪ್ರಕಾಶ ಕುರಗುಂದ..*ಜೈನಮುನಿ ಹತ್ಯಯ ತನಿಖೆ ಪಾರದರ್ಶಕವಾಗಿ ಆಗಬೇಕು, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು..* *ನಳಿನಕುಮಾರ ಕಟೀಲ್ ಹೇಳಿಕೆ..* *ಬೆಳಗಾವಿ* : ಮಂಗಳವಾರ ನಗರದ ಪ್ರವಾಸಿ ಮಂದಿರಕ್ಕೆ ಆಗಮಿಸಿದ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರಾದ ನಳಿನಕುಮಾರ್ ಕಟೀಲ್ ಅವರು, ಕೆಲ ದಿನಗಳ ಹಿಂದೆ ಚಿಕ್ಕೋಡಿ ಸಮೀಪ ಹಿರೇಕೋಡಿಯಲ್ಲಿ ನಡೆದ ಜೈನ ಸ್ವಾಮೀಜಿ ಹತ್ಯೆಯ ಕುರಿತಾಗಿ ತಮ್ಮ ಸಂತಾಪ ಸೂಚಿಸುತ್ತಾ ಮೇಲಿನಂತೆ ಹೇಳಿದ್ದಾರೆ.. ಹಂತಕರು ಯಾರೇ ಆಗಿರಲಿ, ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕು, ಆರೋಪಿಗಳು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರಿಗೆ ಶಿಕ್ಷೆ ಆಗಬೇಕು ಎಂದರು.. ಆರೋಪಿಗಳು ಯಾರೂ, ಯಾವ ಕಾರಣಕ್ಕಾಗಿ ಈ ಕೃತ್ಯ ನಡೆದಿದೆ ಎಂಬುದು ಕೂಲಂಕುಷವಾಗಿ ತನಿಖೆಯಾಗಬೇಕು, ಯಾವುದೇ ಅಧ್ಯಯನವಿಲ್ಲದೇ ಜನರ ಭಾವನೆಗೆ ದಕ್ಕೆ ತರುವಂತೆ ಯಾರೂ ಮಾತನಾಡಬಾರದು ಎಂದರು.. ನಮ್ಮ ಪಕ್ಷದಿಂದ ರಾಜ್ಯ ಮತ್ತು ಜಿಲ್ಲಾಮಟ್ಟದ ನಾಯಕರು ಎಲ್ಲರೂ ಸೇರಿ, ಒಕ್ಕಟ್ಟಾಗಿ ಇಂದು ಘಟನೆಯಾದ ಸ್ಥಳಕ್ಕೆ ಹೋಗುತ್ತಿದ್ದೇವೆ, ಮುಂದೆಯೂ ಕೂಡಾ ನಮ್ಮ ಪಕ್ಷದಿಂದ ಈ ಘಟನೆಗೆ ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇವೆ ಎಂದರು… ಇನ್ನೂ ವಿರೋಧ ಪಕ್ಷದ ನಾಯಕನ ಆಯ್ಕೆಯ ನಿಧಾನತೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಆದಷ್ಟೂ ಬೇಗ ವಿರೋಧ ಪಕ್ಷದ ನಾಯಕರ ನೇಮಕ ಆಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು… ವರದಿ ಪ್ರಕಾಶ ಕುರಗುಂದ..
