ಸರ್ವ ಸಂಕಷ್ಟಗಳ ಪರಿಹಾರಕ, ಹಿಂಡಲಗಾ ದೇವಸ್ಥಾನದ ವಿನಾಯಕ..
ಬೆಳಗಾವಿ : ನಗರದ ಹಿಂಡಲಗಾ ರಸ್ತೆಯಲ್ಲಿ ಇರುವ ಸಿದ್ಧಿವಿನಾಯಕ ಮಂದಿರವು ಬೆಳಗಾವಿ ಹಾಗೂ ಸುತ್ತಮುತ್ತಲಿನ ಲಕ್ಷಾಂತರ ಭಕ್ತರ ಭಕ್ತಿಯ ನೆಲೆಯಾಗಿದೆ..
ಪ್ರತಿದಿನ ಇಲ್ಲಿ ಸಾವಿರಾರು ಭಕ್ತರು ಆಗಮಿಸಿ, ತಮ್ಮ ಕಷ್ಟ ಕಾರ್ಪಣ್ಯಕ್ಕೆ ಪರಿಹಾರಿಲೋಪಾಯ ಕಂಡುಕೊಳ್ಳುವರು, ಪ್ರತಿ ಮಂಗಳವಾರ ಹಾಗೂ ಸಂಕಷ್ಠಿಯ ದಿವಸ ಭಕ್ತಸಾಗರವೇ ಇಲ್ಲಿ ನೆರೆದಿರುತ್ತದೆ..
ಇಲ್ಲಿ ಕಷ್ಟ ಎಂದು ಬರುವ ಸರ್ವಭಕ್ತರಿಗೂ, ಶಕ್ತಿಶಾಲಿ ಹಾಗೂ ಮಹಾಮಹಿಮ ಗಣರಾಯ, ಸುಖ ಸೌಭಾಗ್ಯವನ್ನು ನೀಡಿ, ಭಕ್ತರ ಜೀವನದಲ್ಲಿ ನೆಮ್ಮದಿ ನೇಮಿಸುವ ಹಾಗೆ ಆಶೀರ್ವದಿಸುತ್ತಾನೆ, ಅದಕ್ಕಾಗಿಯೇ ಇಲ್ಲಿ ಪ್ರತಿದಿನ ಭಕ್ತರ ಸಂಖ್ಯೆ ಹೆಚ್ಚು ಆಗುತ್ತಲೇ ಇದೆ..
ಇಲ್ಲಿ ಹಲವಾರು ಭಕ್ತರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ತೆಂಗಿನಕಾಯಿ ಗಂಟು ಕಟ್ಟುವ, ಹೋಮ ಹವನ, ಮಾಡಿಸುವ ವಿವಿಧ ಹರಕೆ ಇಟ್ಟುಕೊಂಡಿರುತ್ತಾರೆ, ಅದೇ ಪ್ರಕಾರ ಪ್ರತಿ ಭಕ್ತರಿಗೂ ತಮ್ಮ ಬೇಡಿಕೆ ಈಡೇರಿಕೆ ಆಗಿ, ಗಣೇಶನ ಮಹಿಮೆ, ಶಕ್ತಿ, ಪವಾಡ ಎಲ್ಲರಿಗೂ ತಿಳಿದೇ, ಈ ದೇವಸ್ಥಾನಕ್ಕೆ ಸಾಗರ ರೀತಿಯಲ್ಲಿ ಭಕ್ತರ ಆಗಮನ ಆಗುತ್ತದೆ…
ಇಲ್ಲಿ ಪ್ರತಿ ಸಂಕಸ್ಥಿಯ ದೀನ ಎಲ್ಲಾ ಭಕ್ತರಿಗೆ ಉಪವಾಸದ ಉಪಹಾರವಾದ ಸಾಬುದಾನಿ ಅಣ್ಣಾ ಮತ್ತು ಹಣ್ಣು ಹಂಪಲ ವಿತರಣೆ ಮಾಡುವ ಪದ್ಧತಿ ಇದ್ದು, ಗಣೇಶ ಜಯಂತಿಯಲ್ಲಿ ಬ್ರಹತ್ ಪ್ರಮಾಣದಲ್ಲಿ ಮಹಾಪ್ರಸಾದ ವ್ಯವಸ್ಥೆ ಮಾಡಲಾಗುತ್ತದೆ..
ಭಾರತೀಯ ಸೇನಾ ದಳದ ಆಡಳಿತ ವ್ಯವಸ್ಥೆಯಲ್ಲಿ ಇರುವ ಈ ದೇವಸ್ಥಾನ ಅತ್ಯಂತ ಶಿಸ್ತು ಹಾಗೂ ಸ್ವಚ್ಛತೆಯಿಂದ ಭಕ್ತರ ಆಕರ್ಷಕ ತಾಣವಾಗಿದೆ..
ಭಾಗ್ಯವಿದಾತಾ ಗಣರಾಯ ಮತ್ತಷ್ಟು ಜನರ ಬಾಳಿನಲ್ಲಿ ಬೆಳಕಾಗಿ ಸಕಲ ಲೋಕದ ಉದ್ದಾರಕನಾಗಲಿ ಎಂಬುದೇ ನಮ್ಮ ಆಶಯ…
ವರದಿ ಪ್ರಕಾಶ ಕುರಗುಂದ..
