ಬೆಳಗಾವಿ ವಕೀಲರ ಸಂಘದ ನೂತನ ಅಧ್ಯಕ್ಷ ಬಿ ಜೆ ಗಂಗಾಯಿ ಅವರಿಗೆ ಸನ್ಮಾನ..

ಬೆಳಗಾವಿ ವಕೀಲರ ಸಂಘದ ನೂತನ ಅಧ್ಯಕ್ಷ ಬಿ ಜೆ ಗಂಗಾಯಿ ಅವರಿಗೆ ಸನ್ಮಾನ..

ಬೆಳಗಾವಿ : ವಕೀಲರ ಸಂಘದ ಆಜೀವ ಸದಸ್ಯರು, ಹಿರಿಯ ವಕೀಲರು ಹಾಗೂ ಬೆಳಗಾವಿ ಮಹಾನಗರ ಪಾಲಿಕೆಯ ಉಪ ಮಹಾಪೌರರಾದ ಹಣಮಂತ ಎ. ಕೊಂಗಾಲಿ ಅವರು, ಇಂದು ಬೆಳಗಾವಿ ವಕೀಲರ ಸಂಘದ ಹಿರಿಯರು ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಿ. ಜೆ. ಗಂಗಾಯಿ ವಕೀಲರನ್ನು ಆತ್ಮೀಯವಾಗಿ ಸನ್ಮಾನಿಸಿ ಶುಭಾಶಯ ಕೋರಿದರು.

ಇದೆ ವೇಳೆ ನೂತನ ಅಧ್ಯಕ್ಷರಿಗೆ ಅವರ ಅವಧಿಯಲ್ಲಿ ಯಶಸ್ವಿ ಆಡಳಿತಕ್ಕಾಗಿ ಶುಭ ಹಾರೈಸಲಾಯಿತು.

ಈ ಸಂದರ್ಭದಲ್ಲಿ ಹಿರಿಯ ವಕೀಲರು ಮಾಜಿ ರಾಜ್ಯ ವಕೀಲ ಪರಿಷತ ಅಧ್ಯಕ್ಷರಾದ ಎ ಆರ್ ಪಾಟೀಲ್, ಜಗದೀಶ ಪಾಟೀಲ ಉಪಾಧ್ಯಕ್ಷರಾದ ಮಂದ್ರೋಲಿ, ಕಳ್ಳಿಮನಿ, ಜಗದೀಶ್ ಯಳ್ಳೂರು ವಕೀಲರು, ಸಮಾರಂಭದಲ್ಲಿ ಬೆಳಗಾವಿ ವಕೀಲರ ಸಂಘದ ಅನೇಕ ಹಿರಿಯ ಹಾಗೂ ಕಿರಿಯ ವಕೀಲರು ಉಪಸ್ಥಿತರಿದ್ದು, ನೂತನ ಅಧ್ಯಕ್ಷರಿಗೆ ಅಭಿನಂದನೆಗಳನ್ನು ಸಲ್ಲಿಸಿದರು