ಮಹದಾಯಿ–ಕಳಸಾ ಬಂಡೂರಿ, ಕಾವೇರಿ–ಕೃಷ್ಣ ನದಿ ನೀರಿಗಾಗಿ ಬೆಳಗಾವಿಯಲ್ಲಿ ರೈತರ ಹೋರಾಟ.‌

ಮಹದಾಯಿ–ಕಳಸಾ ಬಂಡೂರಿ, ಕಾವೇರಿ–ಕೃಷ್ಣ ನದಿ ನೀರಿಗಾಗಿ ಬೆಳಗಾವಿಯಲ್ಲಿ ರೈತರ ಹೋರಾಟ.‌

ಬೆಳಗಾವಿ : ಮಹದಾಯಿ-ಕಳಸಾ ಬಂಡೂರಿ, ಕಾವೇರಿ ಹಾಗೂ ಕೃಷ್ಣ ನದಿ ನೀರಿನ ಹಕ್ಕಿಗಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಇಂದು ಬೆಳಗಾವಿ ನಗರದಲ್ಲಿ ಹೋರಾಟ ಹಮ್ಮಿಕೊಳ್ಳಲಾಯಿತು. ‌

ಬೆಳಗ್ಗೆ 6 ಗಂಟೆಗೆ ಬೆಳಗಾವಿ ನಗರದ ಬಸ್ ನಿಲ್ದಾಣದ ಎದುರು ಪ್ರತಿಭಟನೆ ನಡೆಸಲಾಗುತ್ತಿದ್ದು, ರಾಜ್ಯದ ರೈತರ ಹಿತಾಸಕ್ತಿ ಹಾಗೂ ನೀರಿನ ನ್ಯಾಯಯುತ ಹಂಚಿಕೆಗೆ ಒತ್ತಾಯಿಸಿ ಸರ್ಕಾರದ ಗಮನ ಸೆಳೆದರು.
ಹೋರಾಟದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗವಹಿಸಿದರು.‌

ಹೋರಾಟಕ್ಕೆ ಕರ್ನಾಟಕ ರಾಜ್ಯ ರೈತ ಸಂಘದ ಬೆಳಗಾವಿ ಜಿಲ್ಲಾ ಅಧ್ಯಕ್ಷ ವಾಜಿದ್ ಹಿರೆಕೋಡಿ, ಜಿಲ್ಲಾ ಕಾರ್ಯಾಧ್ಯಕ್ಷ ಸೋಮು ರೈನಾಪುರ, ಕರ್ನಾಟಕ ರಕ್ಷಣಾ ವೇದಿಕೆಯ ಬೆಳಗಾವಿ ಜಿಲ್ಲಾ ಉಪಾಧ್ಯಕ್ಷ ನಾಗೇಶ್ ಕೊಪ್ಪದ, ಯರಗಟ್ಟಿ ತಾಲೂಕು ಅಧ್ಯಕ್ಷ ರಾಯಪ್ಪ ಕರಿಗಾರ್ ಹಾಗೂ ತಾಲೂಕು ಉಪಾಧ್ಯಕ್ಷ ಹನುಮಂತ ಕರಿಗನ್ನವರ ಸೇರಿದಂತೆ ಹಲವರು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ‌

ಕರ್ನಾಟಕದ ನದಿ ನೀರಿನ ಹಕ್ಕು ಹಾಗೂ ರೈತರ ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ನೀರಿನ ಲಭ್ಯತೆಗಾಗಿ ಸರ್ಕಾರ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಹೋರಾಟಗಾರರು ಆಗ್ರಹಿಸಿದರು. ‌ಮಧ್ಯಾಹ್ನದ ವೇಳೆ ಕಾವೇರಿ ನೀರಿನ ವಿಚಾರ ಹಾಗೂ ಮಹಾದಾಯಿ ಕಳಸಾ ಬಂಡೂರಿ ವಿಚಾರದ ಹೋರಾಟವನ್ನು, ಹೋರಾಟಗಾರರು ಹಿಂಪಡೆದುಕೊಂಡಿರುವುದರಿಂದ ಎಂದಿನಂತೆ ಕೇಂದ್ರ ಬಸ್ ನಿಲ್ದಾಣದಲ್ಲಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು.

Leave a Reply

Your email address will not be published. Required fields are marked *