ಹಳೇ ವಿದ್ಯಾರ್ಥಿಗಳ ಸ್ನೇಹಿ ಬಳಗದಿಂದ ಸಮಾಜಮುಖಿ ಕಾರ್ಯ..

ಹಳೇ ವಿದ್ಯಾರ್ಥಿಗಳ ಸ್ನೇಹಿ ಬಳಗದಿಂದ ಸಮಾಜಮುಖಿ ಕಾರ್ಯ..

ಬೆಳಗಾವಿ : ತಾಲೂಕಿನ ಶಿಂದೊಳ್ಳಿ ಗ್ರಾಮದ ಸರಕಾರಿ ಶಾಲೆಯ ಹಳೆಯ ವಿದ್ಯಾರ್ಥೀಗಳ “ಸ್ನೇಹಿತರ ಬಳಗದಿಂದ” ಸರಕಾರಿ ಶಾಲೆಯಲ್ಲಿ ನೂತನವಾಗಿ ಆರಂಭವಾದ LKG, UKG ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲೆಂದು ಉತ್ತಮ ಗುಣಮಟ್ಟದ ಟೇಬಲ್ ಹಾಗೂ ಕುರ್ಚಿಗಳನ್ನು ನೀಡಿದ ಸ್ನೇಹಿತರ ಬಳಗದವರಾದ ಮಾರುತಿ ಕೃಷ್ಣಪ್ಪಗೋಳ, ರಮೇಶ ಖನಗಾಂವಕರ, ಉಮೇಶ ಬೆಳಗಾಂವಕರ, ಗಜಾನನ ಮುಚ್ಚಂಡಿ, ಶ್ರೀಕಾಂತ ರಾಣೋಜಿ, ಪ್ರವೀಣ ತಿಗಡಿ, ನಿಂಗಣ್ಣ ಮೇಕಲಮರ್ಡಿ, ವೀರಭದ್ರ ನಿಲಜಿ, ಭರಮಾ ಶಾಹಾಪೂರಕರ ಹಾಗೂ ವೀರಭದ್ರಯ್ಯ ಪೂಜಾರ ಇವರ ಈ ಸಮಾಜಮುಖಿ ಸೇವಾಕಾರ್ಯ ಶ್ಲಾಘನೀಯ ಎಂದು ಶಾಲೆಯ ಪ್ರಧಾನ ಗುರುಗಳಾದ ಹಂಚಿನಮನಿ ಇವರು ಹೇಳಿದರು.

ತೋಟಗಾರಿಕೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮಾರುತಿ ಕೃಷ್ಣಪ್ಪಗೋಳ ಹಾಗೂ ಪೋಲಿಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಉಮೇಶ ಬೆಳಗಾಂವಕರ ಇವರುಗಳು ಮಾತನಾಡಿ ವೀರಭದ್ರಯ್ಯ ಪೂಜಾರ ಇವರ ಸಲಹೆಯಂತೆ ಸ್ನೇಹಿತರ ಬಳಗದಿಂದ ನಾವು ಕಲಿತ ಶಾಲೆಗೆ ಈ ಕಲಿಕಾ ಸಾಮಗ್ರಿಗಳನ್ನು ನೀಡುತ್ತಿರುವುದು ನಮಗೆಲ್ಲ ಸಂತೋಷ ಉಂಟುಮಾಡಿದೆ, ಇದೇ ಶಾಲೆಯಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಇಂದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ, ಅನೇಕರು ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಅಂದಿನ ವಿದ್ಯಾರ್ಥಿ ಜೀವನ ನೆನೆಯುತ್ತಾ ಇಂದಿನ ವಿದ್ಯಾರ್ಥಿಗಳು ಭವ್ಯ ಭಾರತದ ಭವಿಷ್ಯ, ಅವರ ಮುಂದಿನ ಜೀವನ ಉಜ್ವಲವಾಗಿರಲಿ, ಒಂದು ನಿರ್ದಿಷ್ಟ ಗುರಿಯೊಂದಿಗೆ ಸಾಗಿ, ಆರೋಗ್ಯಕರ ಜೀವನ ನಿಮ್ಮದಾಗಲಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಸಮಾಜ ಸೇವಕ ವೀರಭದ್ರಯ್ಯ ಮಾತನಾಡಿ “ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಷು ಕದಾಚನ” ಎಂದು ಶ್ರೀ ಕೃಷ್ಣನು ಭಗವದ್ಗೀತೆಯಲ್ಲಿ ಹೇಳಿರುವಂತೆ ನೀನು ನಿನ್ನ ಕಾರ್ಯವನ್ನು ಮಾತ್ರ ಮಾಡುತ್ತೀರು, ಯಾವುದೇ ದುರಾಸೆಗೆ ಬಲಿಯಾಗಿ ಕಾರ್ಯ ಮಾಡಬೇಡ, ಫಲಾಫಲಗಳನ್ನು ದೇವರಿಗೆ ಬಿಡು ಅವರು ಹಾಗೆ ಅಂದರು ಇವರು ಹೀಗೆ ಎಂದರು ಎನ್ನದೆ ನಿನ್ನ ಕೆಲಸ ನೀನು ಮಾಡು, ಎನ್ನುವಂತೆ ನಮ್ಮ ಕಾರ್ಯ ನಾವು ಮಾಡುತ್ತಾ ಸಾಗಬೇಕು ಎಂದರು.

SDMC ಅಧ್ಯಕ್ಷರಾದ ಮಾಳಿಗರಾಯ ಶಾಹಾಪೂರಕರ, ಸದಸ್ಯರಾದ ಲಕ್ಷ್ಮೀ ಅಜರೇಕರ, ಬಾಗು ನಾಗುನ್ನವರ, ಸಮಾಜ ಸೇವಕರಾದ ಬಸವರಾಜ ತಳವಾರ, ಬಸವರಾಜ ಮೇಕಲಮರ್ಡಿ, ಕೃಷ್ಣ ಮುಚ್ಚಂಡಿ, ಪ್ರಧಾನ ಗುರುಗಳು, ಶಿಕ್ಷಕರು, ಶಿಕ್ಷಕಿಯರು, ಶಾಲಾ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *