ದೇಹಕ್ಕೆ ವಯಸ್ಸಾದರೂ ಮನಸ್ಸಿಗೆ ಎಂದು ವಯಸ್ಸಾಗದು..
ಯುವ ಸಮುದಾಯಕ್ಕೆ ಮೊಬೈಲೇ ಸರ್ವಸ್ವವಲ್ಲ…
ಡಾ. ಬಸವರಾಜ ಜಗಜಂಪಿ..
ಬೆಳಗಾವಿ : ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ನಲ್ಲಿ ಶೈಕ್ಷಣಿಕ ವರ್ಷದ ಸಾಂಸ್ಕೃತಿಕ ಕ್ರೀಡಾ ಹಾಗೂ ಎನ್ ಎಸ್ಎಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ.ಬಸವರಾಜ ಜಗಜಂಪಿ ಯವರು ಮಾತನಾಡುತ್ತಾ ಮನುಷ್ಯನಿಗೆ ದೈಹಿಕವಾಗಿ ವಯಸ್ಸು ಆಗಬಹುದು ಆದರೆ ಆತನ ಮನಸ್ಸಿಗೆ ಎಂದು ವಯಸ್ಸುಅಡ್ಡ ಬರುವುದಿಲ್ಲ ಮತ್ತು ಬರಬಾರದು ಎಂದರು.
ವಿದ್ಯಾರ್ಥಿಗಳು ಇರುವೆಯಂತೆ ಸಾಧನೆಯನ್ನು ಮಾಡಬೇಕು ಸಾಧಿಸಲು ಛಲ ಸತತ ಅಧ್ಯಯನ ಪರಿಶ್ರಮ ಪಟ್ಟು ತಮ್ಮ ತಮ್ಮ ಭವಿಷ್ಯವನ್ನು ಗುರುಗಳ ಬೋಧನೆಯಿಂದ ಮಾರ್ಗದರ್ಶನ ಪಡೆಯುವ ಮೂಲಕ ಸಾಧಿಸಿಕೊಳ್ಳಬೇಕು ಎಂದರು, ಇಂದಿನ ಯುವ ಸಮುದಾಯ ಮೊಬೈಲ್ ನಲ್ಲಿ ಜೀವನ ವಿದೆ ಎಂದುಕೊಳ್ಳುತ್ತಿದ್ದಾರೆ ಆದರೆ ಮೊಬೈಲನ್ನು ನಿಮ್ಮ ಅನುಕೂಲಕ್ಕೆ ಬಳಸಿ ಆದರೆ ಸರ್ವಸ್ವವೇ ಮೊಬೈಲ್ ಅಲ್ಲ ಎನ್ನುತ್ತಾ ಹಲವಾರು ಉದಾಹರಣೆಗಳನ್ನು ನೀಡುತ್ತಾ ವಿದ್ಯಾರ್ಥಿಗಳಿಗೆ ಹಾಸ್ಯಮಯವಾಗಿ ತಮ್ಮ ವಿಚಾರಗಳನ್ನು ಹಂಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಡಾ. ಎನ್ ಆರ್ .ಪಾಟೀಲ ಅವರು ಮಾತನಾಡುತ್ತಾ ಸಾಧನೆಯನ್ನು ಸವಾಲಾಗಿ ಸ್ವೀಕರಿಸಿ ಸಾಧಿಸಲು ಬೆನ್ನು ಹತ್ತಬೇಕು ಮನುಷ್ಯನಿಗೆ ದೇವರು ಏನೆಲ್ಲವನ್ನು ಕೊಟ್ಟಿದ್ದಾನೆ ಆದರೆ ನಾವೇ ಅದನ್ನು ಬಳಸಿಕೊಳ್ಳದೆ ವ್ಯರ್ಥವಾಗಿ ಹೋಗುತ್ತಿದ್ದೇವೆ ನಿಜವಾದ ಸಾಮರ್ಥ್ಯದ ಅರಿವು ನಮ್ಮಲ್ಲಿ ಹುಟ್ಟುವುದು ಶಿಕ್ಷಣದಿಂದ ಮಾತ್ರ ಅದನ್ನು ಪಡೆಯುತ್ತಾ ತಮ್ಮ ಬದುಕನ್ನು ರೂಪಿಸಿಕೊಳ್ಳಿ ಎಂದು ಹಿತನುಡಿ ಹೇಳಿದರು.
ಇದೇ ಸಂದರ್ಭದಲ್ಲಿ ಡಾ.ಅ.ಬ. ಇಟಗಿ ಬರೆದಿರುವ ಬೆವರ ಹನಿ ಕವನ ಸಂಕಲನವನ್ನು ಲೋಕಾರ್ಪಣೆ ಗೊಳಿಸಲಾಯಿತು. ವೇದಿಕೆ ಮೇಲೆ ಡಾ.ಜಯಶೀಲಾ ಡಿ ಡಾ.ಜ್ಯೋತಿ ಯಮಕನಮರಡಿ
ಶ್ರೀಮತಿ ಶಿವಲೀಲಾ ಮುಕುಂದ ಪತ್ರಾಂಕಿತ ವ್ಯವಸ್ಥಾಪಕರಾದ ಪ್ರಕಾಶ ಪಡಿಪಾಟೀಲ ಶ್ರೀಮತಿ ಸವಿತಾ ಚೌಗಲೆ ಗ್ರಂಥಪಾಲಕರಾದ ಸಿದ್ದೇಶ್ವರ ಕಣಬರ್ಗಿ ಎಸ್ ಎಂ ನಧಾಪ್ ಡಾ ಎಚ್ ಎನ್ ಚುಳಕಿ ಡಾ. ನಾಗೇಶ ಗಾಡಿವಡ್ಡರ ರ್ಕಾಲೇಜಿನ ಬೋಧಕರು ಹಾಗೂ ಸಿಬ್ಬಂದಿ ವರ್ಗ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ದೈಹಿಕ ಶಿಕ್ಷಣ ನಿರ್ದೇಶಕರಾದ ಲಕ್ಕಪ್ಪ ಬೂದನವರ ಸ್ವಾಗತಿಸಿದರು ಕನ್ನಡ ವಿಭಾಗದ ಮುಖ್ಯಸ್ಥರಾದ ಎಂ ವೈ ಹಿತಾರಗೌಡರ ಪ್ರಾಸ್ತಾವಿಕವಾಗಿ ಮಾತನಾಡಿದರು ಡಾ.ಫೀರಗೌಡ ಘಂಟಿ ವಂದಿಸಿದರು ವಾಣಿಜ್ಯ ಉಪನ್ಯಾಸಕರಾದ ಚಂದ್ರಕಾಂತ ಅರಿಕೇರಿ ನಿರೂಪಿಸಿದರು.