ದೂರು ದಾಖಲಾದ 12 ಗಂಟೆಯೊಳಗೆ ಆರೋಪಿ ಬಂಧಿಸಿರುವ ಬೆಳಗಾವಿ ಪೊಲೀಸರು…
ಬೆಳಗಾವಿ : ಕಳೆದ ಎರಡು ದಿನಗಳ ಹಿಂದೆ ನಗರದಲ್ಲಿ ಮಕ್ಕಳ ಕಳ್ಳತನದ ಘಟನೆ ನಡೆದು ಎಲ್ಲರಲ್ಲಿಯೂ ಆತಂಕದ ವಾತಾವರಣ ನಿರ್ಮಾಣ ಮಾಡಿತ್ತು, ಆದರೆ ಬಹುಬೇಗ ಆ ಕೃತ್ಯ ಮಾಡಿದ ಆರೋಪಿಯನ್ನು ಬಂದಿಸಿದ ಪೊಲೀಸರು ಆತನನ್ನು ಜೈಲಿಗೆ ಅಟ್ಟಿದ್ದಾರೆ..
ಬೆಳಗಾವಿಯ ಮಾರುತಿ ನಗರದ ಗಜಾನನ ಪಾಟೀಲ ಎಂಬುವವನು ಬಂಧಿತ ಆರೋಪಿಯಾಗಿದ್ದು, ಮಂಗಳವಾರ ಟ್ಯುಷನ್ನಿಗೆ ಹೋಗುತ್ತಿದ್ದ 9 ವರ್ಷದ ಬಾಲಕಿಯನ್ನು ಅಪಹರಣ ಮಾಡುವ ಪ್ರಯತ್ನ ಮಾಡಿದ್ದನು
ಆರೋಪಿ ಗಜಾನನ ಪಾಟೀಲ ವಿಕೃತ ಮನಸ್ಥಿತಿ ಹೊಂದಿದವವ ಎಂಬುದು ತನಿಖೆ ವೇಳೆ ಬಹಿರಂಗವಾಗಿದೆ..
ನಗರದ ಎಲ್ಲಾ ಬಡಾವಣೆ ಸುತ್ತಾಡುತ್ತಾ ಮಹಿಳೆಯರು, ಯುವತಿಯರನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಿದ್ದ ಎಂಬ ಮಾಹಿತಿ ಈ ಆರೋಪಿಯ ಕುರಿತಾಗಿ ಲಭ್ಯವಾಗಿದೆ.
ಗಜಾನನ ಪಾಟೀಲನ ವರ್ತನೆಗೆ ಬೇಸತ್ತು ಈತನ ಓರ್ವ ಸಹೋದರ ಬೇರೆ ಮನೆಯಲ್ಲಿ ವಾಸವಾಗಿದ್ದನೆಂದು ತಿಳಿದು ಬಂದಿದೆ,
ಮೈಸೂರಿನಲ್ಲಿರುವ ಮತ್ತೋರ್ವ ಸಹೋದರ ಮನೆಯಲ್ಲಿ ವಾಸವಿರುವ ಗಜಾನನ ತಾಯಿ, ಮತ್ತಿತರ
ಕುಟುಂಬಸ್ಥರು ಮನೆ ಬಿಟ್ಟು ಹೋದರೂ ವರ್ತನೆ ಬದಲಿಸಿಕೊಳ್ಳದ ಗಜಾನನ ಎಂಬ ವಿಕೃತ, ಕಳೆದ ಮಂಗಳವಾರ
ಹಿಂದವಾಡಿಯಲ್ಲಿ ಟ್ಯೂಷನ್‌ಗೆ ಹೊರಟಿದ್ದ ಬಾಲಕಿಯ ಅಪಹರಣಕ್ಕೆ ಯತ್ನಿಸಿದ್ದ ಈ ದುಷ್ಟ ಗಜಾನನ ಪಾಟೀಲ..
ಇಡೀ ದಿನ ಗಲ್ಲಿ ಗಲ್ಲಿ ಸುತ್ತಾಡಿ ಮಹಿಳೆಯರನ್ನು ನೋಡುವುದೇ ಗಜಾನನನ ನಿತ್ಯ ಕಾಯಕವಾಗಿತ್ತೆಂದು,
ಪೊಲೀಸ್ ತನಿಖೆ ವೇಳೆ ಆರೋಪಿ ಗಜಾನನ ಪಾಟೀಲ ತಪ್ಪೋಪ್ಪಿಕೊಂಡಿದ್ದಾನೆ..
ಟಿಳಕವಾಡಿ ಠಾಣೆ ಪೊಲೀಸರು ಈಗ ಆರೋಪಿಯನ್ನು ಬಂದಿಸಿ, ಹಿಂಡಲಗಾ ಜೈಲಿಗೆ ಅಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ..
ವರದಿ ಪ್ರಕಾಶ ಕುರಗುಂದ..