ಮಾದಿಗ ಸಮುದಾಯಕ್ಕೆ ನ್ಯಾಯ ನೀಡುವಲ್ಲಿ, ಮಾದಿಗ ಮೀಸಲಾತಿ ಹೋರಾಟ ಸಮಿತಿ ಮುಂಚೂಣಿಯಲ್ಲಿದೆ..

ಮಾದಿಗ ಸಮುದಾಯಕ್ಕೆ ನ್ಯಾಯ ನೀಡುವಲ್ಲಿ, ಮಾದಿಗ ಮೀಸಲಾತಿ ಹೋರಾಟ ಸಮಿತಿ ಮುಂಚೂಣಿಯಲ್ಲಿದೆ..

ಮುರುಗೇಶ ಕಂಬಣ್ಣವರ ವಿಶ್ವಾಸ..

ಬೆಳಗಾವಿ : ಬುಧವಾರ ದಿ 13.7.2023 ರಂದು ನಗರದ ಪ್ರವಾಸಿ ಮಂದಿರದಲ್ಲಿ ಬೆಳಗಾವಿ ಜಿಲ್ಲೆಯ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಪದಾಧಿಕಾರಿಗಳ ಸಭೆ ಜರುಗಿದ್ದು, ಜಿಲ್ಲಾ ಅಧ್ಯಕ್ಷರಾದ ಬಸವರಾಜ ಅರವಳ್ಳಿ ಅವರು ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ರಾಜ್ಯ ಮಾದಿಗ ಮೀಸಲಾತಿ ಹೋರಾಟದ ಉಪಾಧ್ಯಕ್ಷರಾದ ಮುರುಗೇಶ ಕಂಬಣ್ಣವರ, ಸಂಘಟನೆ ಮತ್ತು ತಾಲ್ಲೂಕು ಮಟ್ಟದ ಪದಾಧಿಕಾರಿಗಳ ಆಯ್ಕೆಯು ತ್ವರಿತವಾಗಿ ಆಗಲೇಬೇಕು ಎಂದು ಹೇಳಿದರು.

ರಾಜ್ಯದಲ್ಲಿ M R H S ಸಂಘಟನೆ ಮಾತ್ರ ಅತ್ಯಂತ ಶಕ್ತಿಶಾಲಿಯಾಗಿದೆ ಇದನ್ನು ನಾವೆಲ್ಲ ಮುಂದುವರಿಸಿಕೊಂಡು ಹೋಗುವ ಕೆಲಸ ಆಗಬೇಕು, ಸಮುದಾಯದ ಹಕ್ಕು ಹಾಗೂ ಜನರಿಗೆ ಸೌಲಭ್ಯ ಒದಗಿಸುವ ಏಕೈಕ ಪ್ರಾಮಾಣಿಕ ಸಮಿತಿಯು ನಮ್ಮದಾಗಿದೆ ಎಂದರು..

ಸಮಿತಿಯ ಮುಖಂಡರಾದ ಯಲ್ಲಪ್ಪ ಹುದಲಿ ಮಾತನಾಡಿ, ಜಿಲ್ಲಾ ಮಟ್ಟದಲ್ಲಿ ಈಗಿರುವ ಪದಾಧಿಕಾರಿಗಳು ಉತ್ತಮ ಸಂಘಟನೆ ಮತ್ತು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದು ಅವರೇ ಈ ಹೋರಾಟ ಸಮಿತಿಯನ್ನು ಮುನ್ನಡೆಸಿಕೊಂಡು ಹೋಗಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು..

ಹಣಕಾಸಿನ ವಿಷಯದ ಕುರಿತು ಗೋಪಾಲ ನಂದಿ ಮತ್ತು ಮಾರುತಿ ರಂಗಾಪುರೆ ಸೂಕ್ತ ಸಲಹೆ ನೀಡಿದರು.

ಬೆಳಗಾವಿಯ ಮಾದಿಗ ಮೀಸಲಾತಿ ಹೋರಾಟ ಸಮಿತಿ ಈ ಸಂಘಟನೆಯನ್ನು ಒಂದು ಮಾದರಿ ಸಂಘಟನೆ ಮಾಡಲು ನಾವೆಲ್ಲ ಶ್ರಮ ವಹಿಸಿ ಕೆಲಸ ಮಾಡಬೇಕು ಎಂದು ಶ್ರೀ ಯಲ್ಲಪ್ಪ ಹೆಗಡೆನ್ನವರ ತಿಳಿಸಿದರು..

ಈ ಒಂದು ಕಾರ್ಯಕ್ರಮದಲ್ಲಿ ಸುಭಾಸ ಹುಲೆನ್ನವರ, ಪ್ರಕಾಶ್ ತಳವಾರ, ರಮೇಶ್ ಬಾದಾಮಿ. ಸುಭಾಶ ಹುಲೆನ್ನವರ ಉಪಸ್ಥಿತರಿದ್ದು, ಸ್ವಾಗತ, ಮಾರ್ಗದರ್ಶನ, ಅನಿಸಿಕೆ, ಕಾರ್ಯತಂತ್ರಗಳ ಬಗ್ಗೆ ಚರ್ಚೆ ನಡೆದು, ಅತ್ಯಂತ ಯಶಸ್ವಿಯಾಗಿ ವಂದನಾರ್ಪಣೆಯ ಮೂಲಕ ಈ ಕಾರ್ಯಕ್ರಮ ಕೊನೆಗೊಂಡಿತು..

ವರದಿ ಪ್ರಕಾಶ ಕುರಗುಂದ..