ಅರಣ್ಯ ಇಲಾಖೆಯು ಮುಂಜಾಗ್ರತೆ ತಗೆದುಕೊಳ್ಳುವಂತೆ ಸಾರ್ವಜನಿಕರ ಮನವಿ..
ಬೆಳಗಾವಿ : ಮಂಗಳವಾರ ನಗರದ ಸುತ್ತಮುತ್ತ ಧಾರಾಕಾರ ಮಳೆಯ ಕಾರಣ, ಬೆಳಗಾವಿಯಿಂದ ಖಾನಾಪುರಕ್ಕೆ ಹೋಗುವ ಮುಖ್ಯ ಮಾರ್ಗವಾದ, ಬೆಳಗಾವಿ – ಪಣಜಿ ಹೆದ್ದಾರಿಯ ಮಲಪ್ರಭಾ ನದಿಯ ಸೇತುವೆಯ ಮುಂದೆ ಬ್ರಹತ್ ಆಕಾರದ ಮರವು ಧರೆಗೆ ಉರುಳಿದೆ..
ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಧಾರಾಕಾರ ಮಳೆಗೆ ರಸ್ತೆ ಮೇಲೆಯೇ ಉರಳಿದ ಈ ಬ್ರಹತ್ ಮರವು ಸಂಪೂರ್ಣ ರಸ್ತೆಯನ್ನೇ ಆಕ್ರಮಿಸಿಕೊಂಡಿತ್ತು,
ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಮಲಪ್ರಭಾ ನದಿ ಸಮೀಪ ನಡೆದ ಈ ಘಟನೆಯಿಂದ ಸುಮಾರು
ನಾಲ್ಕು ಗಂಟೆಗಳ ಕಾಲ ಸಂಚಾರದಲ್ಲಿ ವ್ಯತ್ಯಯವುಂಟಾಗಿ, ಖಾನಾಪುರದಿಂದ ಬೆಳಗಾವಿಗೆ ಸಂಚರಿಸುವ ಸಾರ್ವಜನಿಕರು ಪರದಾಡಿದ ಪ್ರಸಂಗ ನಿರ್ಮಾಣವಾಗಿತ್ತು..
ನಂತರ ಸ್ಥಳಕ್ಕೆ ಆಗಮಿಸಿ ಈ ಬ್ರಹತ್ತಾದ ಮರವನ್ನು
ತೆರವುಗೊಳಿಸುತ್ತಿರುವ ಕಾರ್ಯವನ್ನು ಚುರುಕುಗೊಳಿಸಿದ ಸ್ಥಳೀಯ ಅರಣ್ಯ ಇಲಾಖೆ ಸಿಬ್ಬಂದಿಗಳು ಕೆಲ ಗಂಟೆಗಳಲ್ಲಿ ರಸ್ತೆಯನ್ನು ಸಂಚಾರಕ್ಕೆ ಮುಕ್ತ ಮಾಡಿದರು.
ಇದೇ ವೇಳೆ ಸ್ಥಳಕ್ಕೆ ಖಾನಾಪುರ ಠಾಣೆ ಪೊಲೀಸರ ಭೇಟಿಮಾಡಿ, ಪರಿಶೀಲನೆ ನಡೆಸಿದರು..
ಪಶ್ಚಿಮ ಘಟ್ಟದ ಈ ಮಲೆನಾಡಿನ ಪ್ರದೇಶದಲ್ಲಿ ಪ್ರತಿವರ್ಷ ಮಳೆರಾಯನ ಅಬ್ಬರ ಜೋರಾಗಿಯೇ ಇರುತ್ತದೆ, ಆದ ಕಾರಣ ಸಂಚಾರಿ ರಸ್ತೆ ಹಾಗೂ ಜನವಸತಿ ಪ್ರದೇಶಗಳಲ್ಲಿ ಕಂಡುಬರುವ ಹಳೆಯ ಹಾಗೂ ಬೀಳುವ ಪರಿಸ್ಥಿತಿಯಲ್ಲಿ ಇರುವ ಮರಗಳ ಬಗ್ಗೆ ಅರಣ್ಯ ಇಲಾಖೆಯವರು ಸ್ವಲ್ಪ ಗಮನ ಹರಿಸಿ, ಅಂತಹ ಮರಗಳ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಂಡರೆ ಒಳ್ಳೆಯದು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿತ್ತು..
ವರದಿ ಪ್ರಕಾಶ ಕುರಗುಂದ..
